Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ನಾಳೆಯಿಂದ 2 ದಿನ ಎಜುಕೇಷನ್ ಎಕ್ಸ್​ಪೋ

Friday, 19.05.2017, 3:13 AM       No Comments

ಬೆಂಗಳೂರು: ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 24×7 ನ್ಯೂಸ್’ ಜಂಟಿಯಾಗಿ ಶನಿವಾರ ಮತ್ತು ಭಾನುವಾರ (ಮೇ 20, 21) ಬಸವನಗುಡಿ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಆಯೋಜಿಸಿರುವ ‘ಎಜುಕೇಷನ್ ಎಕ್ಸ್​ಪೋ 2017- ಫಾರ್ ದಿ ಜನರೇಷನ್ ನೆಕ್ಸ್ಟ್’ಗೆ ದಿನಗಣನೆ ಆರಂಭವಾಗಿದೆ.

ಮೇ 20ರ ಬೆಳಗ್ಗೆ 9.30ಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಎಕ್ಸ್್ಸೋ ಉದ್ಘಾಟಿಸಲಿದ್ದಾರೆ. ಶಾಸಕ ಹಾಗೂ ಕರ್ನಾಟಕ ಸ್ಲಂ ಬೋರ್ಡ್ ಅಧ್ಯಕ್ಷ ಆರ್.ವಿ. ದೇವರಾಜ್, ಬಿಜೆಪಿ ನಗರ ಅಧ್ಯಕ್ಷ ಪಿ.ಎನ್. ಸದಾಶಿವ, ಪಾಲಿಕೆ ಸದಸ್ಯ ಡಿ.ಎನ್. ರಮೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾದ ಕೋರ್ಸ್, ಕಾಲೇಜುಗಳಲ್ಲಿರುವ ಸೌಲಭ್ಯ, ಪ್ರವೇಶ ಶುಲ್ಕ ಸೇರಿ ಸಂಪೂರ್ಣ ಮಾರ್ಗದರ್ಶನ ನೀಡುವುದು ಎಕ್ಸ್​ಪೋ ಉದ್ದೇಶವಾಗಿದೆ.

ವಿವಿಧ ಕ್ಷೇತ್ರದಲ್ಲಿನ ನುರಿತ ತಜ್ಞರು ಆಯಾ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ತಿಳಿಸಿಕೊಡಲಿದ್ದು, ವಿಚಾರ ಸಂಕಿರಣ ಹಾಗೂ ಸಂವಾದ ಕೂಡ ಆಯೋಜಿಸಲಾಗಿದೆ. ವಿದ್ಯಾರ್ಥಿಗಳೇ ನೇರವಾಗಿ ತಜ್ಞರ ಬಳಿ ಪ್ರಶ್ನೆ ಕೇಳುವ ಮೂಲಕ ತಮ್ಮಲ್ಲಿರುವ ಗೊಂದಲಕ್ಕೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಒಂದೇ ಸೂರಿನಡಿ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮಳಿಗೆಗಳಿರಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಹಾಗೂ ಗೀತಂ ವಿಶ್ವವಿದ್ಯಾಲಯ ಪ್ಲಾಟಿನಂ, ಗಾರ್ಡನ್ ಸಿಟಿ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ಪಿಇಎಸ್ ವಿಶ್ವವಿದ್ಯಾಲಯ ಡೈಮಂಡ್ ಹಾಗೂ ಎಐಎಂಎಸ್ ಇನ್​ಸ್ಟಿಟ್ಯೂಟ್, ಕೇಂಬ್ರಿಡ್ಜ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೃಪಾನಿಧಿ ಸಮೂಹ ಶಿಕ್ಷಣ ಸಂಸ್ಥೆ, ಲೋಹಿತ್ಸ್ ಅಕಾಡೆಮಿ, ದಿ ವಿಷನ್ ನೀಟ್ ಅಕಾಡೆಮಿ, ರಾಮಯ್ಯ ವಿಶ್ವವಿದ್ಯಾಲಯ, ವೇಮನ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗೋಲ್ಡನ್ ಪ್ರಾಯೋಜಕತ್ವ ವಹಿಸಿವೆ.

ಸಂವಾದ, ವಿಚಾರ ವಿನಿಮಯ

ಮೇ 20 ಮತ್ತು 21ರ ಬೆಳಗ್ಗೆ ಮತ್ತು ಮಧ್ಯಾಹ್ನ ಸಂವಾದ ನಡೆಯಲಿದೆ. ಮೊದಲ ದಿನವಾದ ಶನಿವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಸಚಿವ ಡಾ. ಷಣ್ಣುಖಪ್ಪ- ‘ಸ್ಕೋಪ್ ಇನ್ ಮೆಡಿಕಲ್ ಆಂಡ್ ಪ್ಯಾರಾ ಮೆಡಿಕಲ್ ಸಿಲಾಬಿ’ ಹಾಗೂ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಬೆಂಗಳೂರು ವಿಭಾಗದ ಅಧ್ಯಕ್ಷೆ ಎ.ಬಿ. ಗೀತಾ- ‘ಚಾರ್ಟರ್ಡ್ ಅಕೌಂಟ್ಸ್ ಕೋರ್ಸ್ ಆಂಡ್ ಆಪಾರ್ಚುನಿಟಿಸ್’ ಕುರಿತು ಉಪನ್ಯಾಸ ನೀಡಲಿದ್ದಾರೆ. 21ರಂದು ಆರ್.ವಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಸುಬ್ರಹ್ಮಣ್ಯ ಅವರು ‘ಆಪಾರ್ಚುನಿಟೀಸ್ ಇನ್ ಇಂಜಿನಿಯರಿಂಗ್ ಡಿಸಿಪ್ಲೇನ್ಸ್’ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್. ರವಿ ‘ಸಿಇಟಿ-ಕೌನ್ಸೆಲಿಂಗ್’ ಹಾಗೂ ಅಂತಾರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ಸಂದರ್ಶನ ಪ್ರಾಧ್ಯಾಪಕರಾದ ಡಾ.ಕೆ.ಪಿ. ಪುತ್ತ್ತೂರಾಯ ‘ಟಿಪ್ಸ್ ಫಾರ್ ಸಕ್ಸಸ್​ಫುಲ್ ಲೈಫ್’ ವಿಚಾರವಾಗಿ ಉಪನ್ಯಾಸ ನೀಡಲಿದ್ದಾರೆ.

ಲಕ್ಕಿಡ್ರಾ ವಿಜೇತರಿಗೆ ಬಹುಮಾನ

ಎಕ್ಸ್​ಪೋನಲ್ಲಿ ನಡೆಯಲಿರುವ ವಿಚಾರಸಂಕಿರಣದಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಕೋರ್ಸ್​ಗಳ ಮಾಹಿತಿ, ಜ್ಞಾನಾರ್ಜನೆ ಜತೆಗೆ ಆಕರ್ಷಕ ಬಹುಮಾನ ಕೂಡ ಗೆಲ್ಲಬಹುದು. ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ್ ಕೂಪನ್ ನೀಡಲಿದ್ದು, ಭರ್ತಿ ಮಾಡಿ ಅಲ್ಲೇ ಇರುವ ಬಾಕ್ಸ್ ನಲ್ಲಿ ಹಾಕಬೇಕು. ಈ ಕೂಪನ್​ಗಳನ್ನು ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ಕರೆ ಮಾಡಿ 08026257476, 26257477, 26257478

ಉಚಿತ ಸಾರಿಗೆ ವ್ಯವಸ್ಥೆ

ಎಕ್ಸ್​ಫೋಗಾಗಿ ಕ್ರೇಂಬಿಡ್ಜ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ರೇವಾ ವಿವಿ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತರು ಸೂಚಿಸಲಾಗಿರುವ ಮಾರ್ಗಗಳಿಗೆ ಬಂದು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಬೆಳಗ್ಗೆ 8.30ಕ್ಕೆ ಆರಂಭಿಕ ನಿಲ್ದಾಣಗಳಿಂದ ಬಸ್ ಹೊರಡಲಿದೆ.

ರೂಟ್ 01 : ಬಿಟಿಎಂ ಬಡಾವಣೆ (ವಾಟರ್ ಟ್ಯಾಂಕ್), ಜಯನಗರ 5ನೇ ಹಂತ (ಕಾಫಿಡೇ), ಬನಶಂಕರಿ (ಬಸ್ ನಿಲ್ದಾಣದ ಹೊರಗೆ), ಜಯನಗರ 8ನೇ ಹಂತ (ಜೆಎಸ್​ಎಸ್ ಕಾಲೇಜು), ಕೆ.ಆರ್.ರಸ್ತೆ (ಎಸ್​ಬಿಐ ಬ್ಯಾಂಕ್). ಮೊ- 88844 32439 ಸಂರ್ಪಸಬಹುದು.

ರೂಟ್ 02: ಯಲಹಂಕ (ಶೇಷಾದ್ರಿ ಪುರಂ ಕಾಲೇಜು), ಹೆಬ್ಬಾಳ (ಪೊಲೀಸ್ ಠಾಣೆ ಎದುರು), ಯಶವಂತಪುರ (ಪೊಲೀಸ್ ಠಾಣೆ ಎದುರು), ಮಲ್ಲೇಶ್ವರ 18ನೇ ಕ್ರಾಸ್ ಬಸ್ ನಿಲ್ದಾಣ, ಶೇಷಾದ್ರಿಪುರಂ (ನಟರಾಜ ಚಿತ್ರಮಂದಿರ ಎದುರು), ಮೆಜೆಸ್ಟಿಕ್ (ಮೇಲ್ಸೇತುವೆ ಹತ್ತಿರ), ಮೊ- 88844 32438 ಸಂರ್ಪಸಬಹುದು.

ರೂಟ್ 03: ಕೆಂಗೇರಿ (ಅಂಚೆ ಕಚೇರಿ ಎದುರು), ಯೂನಿವರ್ಸಿಟಿ (ಹೊರವರ್ತಲ ರಸ್ತೆ), ನಾಗರಬಾವಿ (ಡಾ.ಅಂಬೇಡ್ಕರ್ ಕಾಲೇಜು), ನಾಗರಬಾವಿ ವೃತ್ತ, ಚಂದ್ರಲೇಔಟ್ (ಬಸ್ ನಿಲ್ದಾಣ), ವಿಜಯನಗರ (ಬಸ್ ನಿಲ್ದಾಣ), ಮಾಗಡಿ ರಸ್ತೆ (ಟೋಲ್​ಗೇಟ್) ಮೊ- 88844 32485 ಸಂರ್ಪಸಿ.

ರೂಟ್ 04: ಬನಶಂಕರಿ (ಬಿಡಿಎ ಕಾಂಪ್ಲೆಕ್ಸ್), ದೇವೇಗೌಡ ಪೆಟ್ರೋಲ್ ಬಂಕ್, ಕಾಮಾಕ್ಯ (ಬಸ್ ಡಿಪೋ), ಕತ್ತರಿಗುಪ್ಪೆ ಬಸ್ ನಿಲ್ದಾಣ, ಶ್ರೀನಿವಾಸನಗರ (ಬಾಟಾ ಶೋ ರೂಂ), ಹನುಮಂತನಗರ (ಮಾರುತಿ ವೃತ್ತ) ಮೊ- 88844 32441 ಸಂರ್ಪಸಬಹುದು.

ತಾರಾ ಮೆರುಗು

ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ನಟ ಗುರುನಂದನ್ ಮತ್ತು ಕೃಷ್ಣಲೀಲಾ ಖ್ಯಾತಿಯ ನಟಿ ಮಯೂರಿ ಎಕ್ಸ್​ಪೋದಲ್ಲಿ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

Back To Top