Thursday, 22nd February 2018  

Vijayavani

ಗೃಹ ಸಚಿವ ಹೆಸ್ರಲ್ಲಿ ಬೇನಾಮಿ ಆಸ್ತಿ ವಿಚಾರ- ವಿಧಾಸಭೆಯಲ್ಲಿ ಪ್ರತಿಧ್ವನಿಸಿದ ದಿಗ್ವಿಜಯ ನ್ಯೂಸ್‌ ವರದಿ- ರಾಮಲಿಂಗಾರೆಡ್ಡಿ ರಾಜೀನಾಮೆಗೆ ಶೆಟ್ಟರ್‌ ಆಗ್ರಹ        ಗೃಹ ಸಚಿವರ ವಿರುದ್ಧ ಬೇನಾಮಿ ಆಸ್ತಿ ವಿಚಾರ- ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ- ರಾಮಲಿಂಗಾರೆಡ್ಡಿಗೆ ಕಂಟಕವಾಗುತ್ತಾ ಪ್ರಕರಣ        ಬಟ್ಟೆ ಬಿಚ್ಚಿಸಿ ರೌಡಿಗಳನ್ನ ಮೆರವಣಿಗೆ ಮಾಡಿಸ್ತೀನಿ- ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ತಿನಿ- ಮೊದಲು ಅಬ್ಬರಿಸಿ ತಣ್ಣಗಾದ ಶಾಸಕ ಸೋಮಶೇಖರ್‌        ಕಾಂಗ್ರೆಸ್ ಗೂಂಡಾಗಳಿಂದ ಪಕ್ಷಕ್ಕೆ ಡ್ಯಾಮೇಜ್- ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್- ಘಟನೆ ಮಾಹಿತಿ ಪಡೆದ ಸೋನಿಯಾ, ರಾಹುಲ್        ಪುಟ್ಟಣ್ಣಯ್ಯ ಅಂತಿಮಯಾತ್ರೆಗೆ ಸಿದ್ದತೆ- ಮಾಜಿ ಪ್ರಧಾನಿ ಎಚ್‌ಡಿಡಿಯಿಂದ ಅಂತಿಮ ದರ್ಶನ- ರೈತ ನಾಯಕನ ಅಂತ್ಯಸಂಸ್ಕಾರಕ್ಕೆ 30 ಜಿಲ್ಲೆಗಳಿಂದ ಮಣ್ಣು       
Breaking News

ನಾಳೆಯಿಂದ ಮಾರ್ಗಶೀಷೋತ್ಸವ

Wednesday, 14.12.2016, 6:37 AM       No Comments

ಬೆಂಗಳೂರು: ಸಂಸ್ಕೃತ ಪ್ರಚಾರ ಮತ್ತು ಪ್ರಸಾರದ ಮೂಲಕ ಸನಾತನ ಸಂಸ್ಕೃತಿಯ ಪುನರುತ್ಥಾನಕ್ಕೆ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಶ್ರೀ ಸುರಭಾರತೀ ಸಂಸ್ಕೃತ -ಸಂಸ್ಕೃತಿ ಪ್ರತಿಷ್ಠಾನ ಡಿ.15ರಿಂದ ಜ.15ರವರೆಗೆ ‘ಮಾರ್ಗ ಶೀಷೋತ್ಸವ – 2016’ ಆಯೋಜಿಸಿದೆ.

ಪ್ರತಿವರ್ಷ ಮಾರ್ಗಶಿರ ಮಾಸದಲ್ಲಿ (ಧನುರ್ವಸ) ಆಯೋಜಿಸುವ ಪ್ರತಿಷ್ಠಾನದ ಉತ್ಸವ 12ನೇ ವರ್ಷದ ಸಂಭ್ರಮದಲ್ಲಿದೆ. 15ರ ಸಂಜೆ 5.30ಕ್ಕೆ ಎಚ್​ಆರ್​ಬಿಆರ್ ಬಡಾವಣೆ 1ನೇ ಹಂತದ (ನೀರಿನ ಟ್ಯಾಂಕ್ ಹತ್ತಿರ) ಸರ್ವೀಸ್ ರಸ್ತೆಯಲ್ಲಿರುವ ಜಗದ್ಗುರು ಭಾರತೀತೀರ್ಥ ಸಭಾ ಮಂಟಪದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ರಾಮಸ್ವಾಮಿ, ಹಿರಿಯ ಧಾರ್ವಿುಕ ಮುಖಂಡ ಮಾನಂದಿ ನಂಜುಂಡಶೆಟ್ಟಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.

ದಿಗ್ಗಜರಿಂದ ಕಛೇರಿ: ತಿಂಗಳಿಡೀ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಕಲಾಲೋಕದ ದಿಗ್ಗಜರು ತಮ್ಮ ಪ್ರೌಢಿಮೆ ಪ್ರದರ್ಶಿಸಲಿದ್ದಾರೆ. ಪ್ರತಿನಿತ್ಯ ಸಂಜೆ 6ಕ್ಕೆ ಪ್ರತಿಷ್ಠಾನದ ವಿದ್ಯಾರ್ಥಿಗಳ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ 6.30ರಿಂದ 8.45ರವರೆಗೆ ಸಂಗೀತ ಕಛೇರಿ, ನೃತ್ಯ ಪ್ರದರ್ಶನಗಳು, ಉಪನ್ಯಾಸ, ಭಜನೆ ಆಯೋಜನೆಗೊಳ್ಳಲಿವೆ.

ಜ.14 ಕ್ಕೆ ಸಮಾರೋಪ

ಉತ್ಸವದ ಸಮಾರೋಪದ ಅಂಗವಾಗಿ ಜ.14ರ ಸಂಜೆ 5.30ಕ್ಕೆ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್. ಗೌರಿಶಂಕರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ಡಾ. ಸುಧಾ ರಘುನಾಥ್ ಕಛೇರಿ ನಡೆಯಲಿದೆ. 15ರಂದು ಶ್ರೀ ಸೀತಾಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ.

ಕಾರ್ಯಕ್ರಮ ವಿವರ

ಡಿ.15ಕ್ಕೆ ಮಂಗಳವಾದ್ಯ ಘೊಷ (ವಿದ್ವಾನ್ ಮುರಳಿ ತಂಡದಿಂದ ನಾದಸ್ವರ), 16ಕ್ಕೆ ಉಡಯಾಲೂರು ಕಲ್ಯಾಣರಾಮ ಭಾಗವತರಿಂದ ಭಜನೆ, 17ಕ್ಕೆ ಪವಿತ್ರಾ ರವಿಶಂಕರ್​ರಿಂದ ಶಾಸ್ತ್ರೀಯ ಗಾಯನ, 18ಕ್ಕೆ ಶುಭಾ-ಸ್ಮೃತಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 19ರಿಂದ 21ರವರೆಗೆ ಡಾ. ಗರಿಕಿಪಾಟಿ ನರಸಿಂಹರಾವ್ ಅವರಿಂದ ‘ಆಮುಕ್ತಮೌಲ್ಯ’ ಉಪನ್ಯಾಸ, 22ಕ್ಕೆ ವಿದ್ವಾನ್ ಹೇರಂಭ-ಹೇಮಂತ ತಂಡದಿಂದ ವೇಣುವಾದನ, 23ಕ್ಕೆ ತಾಳವಾದ್ಯ, 24ಕ್ಕೆ ಗೀತ-ಚಿತ್ರ-ಕಥಾ (ವಿದುಷಿಯರಾದ ಲಕ್ಷ್ಮೀ, ಮಂಜುಳಾ ಮತ್ತು ಕೆ.ಎಲ್. ಶ್ರೀನಿವಾಸ್), 25ಕ್ಕೆ ವಿದ್ಯಾ ಆನಂದ್ ಶಿಷ್ಯರಿಂದ ಭರತನಾಟ್ಯ, ಯಾಮಿನಿ ರೆಡ್ಡಿ ತಂಡದ ಕೂಚಿಪುಡಿ ನೃತ್ಯ, 26ಕ್ಕೆ ನಳಿನಿ ಶಿಷ್ಯವೃಂದದಿಂದ ಭರತನಾಟ್ಯ, ವಿದುಷಿ ಗೋಪಿಕಾವರ್ಮ ತಂಡದಿಂದ ಮೋಹಿನಿಯಾಟ್ಟಂ, 27ಕ್ಕೆ ವಿದುಷಿ ವಿದ್ಯಾ-ಕೃಪಾ ತಂಡದಿಂದ ಭರತನಾಟ್ಯ, 28ಕ್ಕೆ ಅರ್ಜುನ ಕಿರಾತಂ- ಕಥಕ್ಕಳಿ ನೃತ್ಯ, 29ಕ್ಕೆ ವಿದ್ವಾನ್ ಮಿಥುನ್ ಶ್ಯಾಂ ತಂಡದಿಂದ ಭರತನಾಟ್ಯ, 30ಕ್ಕೆ ಶರ್ವಿುಳಾ ಮುಖರ್ಜಿ ತಂಡದ ಒಡಿಶಿ ನೃತ್ಯ, 31ಕ್ಕೆ ಸುವರ್ಣ ಪ್ರಸಾದನ ತಂಡದಿಂದ ಭೀಷ್ಮವಿಜಯ ಯಕ್ಷಗಾನವಿದೆ.

ಜನವರಿ 1ಕ್ಕೆ ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನ, 2ಕ್ಕೆ ಆರ್.ಎನ್. ಲತಾ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 3ಕ್ಕೆ ಕಾರ್ತಿಕ್ ಜ್ಞಾನೇಶ್ವರ್ ತಂಡದಿಂದ ಭಜನೆ, 4ಕ್ಕೆ ಡಾ. ಸುಕನ್ಯಾ ಪ್ರಭಾಕರ್ ಅವರ ಗಾಯನ, 5ಕ್ಕೆ ಅಭಿಷೇಕ್ ರಘುರಾಂ ಗಾಯನ, 6ಕ್ಕೆ ಕುಸುಮ ತಂಡದಿಂದ ಭಕ್ತಿ ಸಂಗೀತ, 7ಕ್ಕೆ ಪ್ರಿಯಾ ಸಹೋದರಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 8ಕ್ಕೆ ಸುರಭಾರತೀ ತಂಡದ ವಿದ್ಯಾರ್ಥಿಗಳಿಂದ ಸಾಸ್ಕೃತಿಕ ಕಾರ್ಯಕ್ರಮ, 9ಕ್ಕೆ ವಿದ್ವಾನ್ ನೈವೇಲಿ ಸಂತನಾನ ಗೋಪಾಲನ್ ತಂಡದಿಂದ ಗಾಯನ, 10ಕ್ಕೆ ಸಿಕ್ಕಿಲ್ ಗುರುಚರಣ್ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 11ಕ್ಕೆ ನಿತ್ಯಶ್ರೀ ಮಹದೇವನ್ ಗಾಯನ, 12ಕ್ಕೆ ತ್ಯಾಗರಾಜ ನಮನಂ- ಪಂಚರತ್ನ ಗೋಷ್ಠಿ ಗಾಯನ, 13ಕ್ಕೆ ಜಯಂತಿ -ಕುಮರೇಶ್ ತಂಡದಿಂಧ ವೀಣೆ-ಪಿಟೀಲು ವಾದನವಿದೆ.

Leave a Reply

Your email address will not be published. Required fields are marked *

Back To Top