Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ನಾಯಕರಿಗೆ ಚುನಾವಣಾ ಉಸ್ತುವಾರಿ ಹಂಚಿಕೆ

Thursday, 14.09.2017, 3:04 AM       No Comments

ಬೆಂಗಳೂರು: ವಿಧಾನಸಭಾ ಚುನಾವಣೆಯನ್ನು ಸಂಪೂರ್ಣ ಪಕ್ಷದ ಆಧಾರದಲ್ಲೇ ನಡೆ ಸುವ ಹೆಜ್ಜೆಯನ್ನು ದೃಢವಾಗಿಸುತ್ತಿರುವ ಬಿಜೆಪಿ, ಇದೀಗ ಚುನಾವಣಾ ಉಸ್ತುವಾರಿಗಳ ಹಂಚಿಕೆಯಲ್ಲೂ ಅದೇ ವಿಧಾನ ಅನುಸರಿಸಿದೆ.

ಸಂಸದರು, ಶಾಸಕರು ಹಾಗೂ ಇನ್ನಿತರೆ ನಾಯಕರಿಗೆ ಸ್ವಕ್ಷೇತ್ರದಿಂದ ಬಹುದೂರದ ಕ್ಷೇತ್ರದ ಉಸ್ತುವಾರಿ ಮಾಡಲಾಗಿದೆ. ಸಂಸದರಿಗೆ ಎರಡು, ಶಾಸಕರಿಗೆ ಹಾಗೂ ಇನ್ನಿತರೆ ನಾಯಕರಿಗೆ ತಲಾ ಒಂದು ಕ್ಷೇತ್ರ ಉಸ್ತುವಾರಿಯ ಸಾಮಾನ್ಯಸೂತ್ರವನ್ನು ಬಿಜೆಪಿ ಇರಿಸಿಕೊಂಡಿದೆ. ನಾಯಕರ ಇತರೆ ಹೊಣೆಯನ್ನು ಗಮನದಲ್ಲಿರಿಸಿಕೊಂಡು ಕೆಲ ಸಂಸದರಿಗೆ ಒಂದು ಕ್ಷೇತ್ರ ಮಾತ್ರ ನೀಡಲಾಗಿದೆ.

ನವಂಬರ್​ನಲ್ಲಿ ನಡೆಯುವ ನವಕರ್ನಾಟಕ ಪರಿವರ್ತನಾ ಯಾತ್ರೆ, ಬೂತ್ ಸಮಿತಿಗಳ ಸಶಕ್ತೀಕರಣ ಹಾಗೂ ಚುನಾವಣೆವರೆಗೂ ಉಸ್ತುವಾರಿಗಳು ಕ್ಷೇತ್ರದ ಹೊಣೆ ಹೊರಬೇಕು. ಕ್ಷೇತ್ರ ಆಯ್ಕೆ ಮಾಡುವಾಗ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದು ತಿಳಿಯದಷ್ಟು ವಿಶೇಷವಾಗಿ ಹಂಚಿಕೆ ಮಾಡಲಾಗಿದೆ. ಬೆಂಗಳೂರಿನ

ಆರ್.ಅಶೋಕ್​ಗೆ ಮೈಸೂರಿನ, ಅದರಲ್ಲೂ ಸಿಎಂ ಸ್ಪರ್ಧಿಸಲಿಚ್ಛಿಸಿರುವ ಚಾಮುಂಡೇಶ್ವರಿ ಕ್ಷೇತ್ರ ವಹಿಸಲಾಗಿದೆ. ಶಾಸಕ ಸತೀಶ್ ರೆಡ್ಡಿಗೆ ಮೈಸೂರಿನ ಚಾಮರಾಜ ಕ್ಷೇತ್ರದ ಹೊಣೆ ನೀಡಲಾಗಿದೆ. ಅದೇ ರೀತಿ ಅನೇಕ ನಾಯಕರಿಗೆ ಬಹುದೂರದ ಕ್ಷೇತ್ರ ನೋಡಿಕೊಳ್ಳಲು ಸೂಚಿಸಲಾಗಿದೆ.

ಅಭ್ಯರ್ಥಿಗೆ ಕನಿಷ್ಠ ಮಹತ್ವ: ಈ ಬಾರಿ ಪಕ್ಷದ ಬಲ ಹಾಗೂ ಸಿದ್ಧಾಂತದ ಆಧಾರದಲ್ಲಿ ಚುನಾವಣೆ ನಡೆಯುತ್ತದೆ ಎಂಬುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಪ್ರವಾಸದ ವೇಳೆ ಸ್ಪಷ್ಟ ಪಡಿಸಿದ್ದರು. ಚುನಾವಣೆಯಲ್ಲಿ ಗೆದ್ದವರು ಗುಂಪು ಕಟ್ಟಿಕೊಂಡು ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುವುದು, ಕ್ಷೇತ್ರದ ಜನ ನನ್ನೊಂದಿಗಿದ್ದಾರೆ ಎಂದು ಪಕ್ಷಾಂತರ ಪ್ರಯತ್ನ ನಡೆಸುವುದು, ಕಾರ್ಯಕರ್ತರಿಂದ ದೂರಾಗುವುದನ್ನು ಇದು ತಪ್ಪಿಸಲಿದೆ. ವೈದ್ಯ, ವಕೀಲ, ಸಿಎ ಅಂತಹ ಉದ್ಯೋಗದಲ್ಲಿರುವ ಹೊಸಬರನ್ನು ಗೆಲ್ಲಿಸಬೇಕಾದರೆ ಪಕ್ಷದ ಆಧಾರ ದಲ್ಲೇ ಸಾಧ್ಯ ಎಂಬ ಕಾರಣಕ್ಕೆ ಈ ನಡೆ ಎಂದು ಮೂಲಗಳು ತಿಳಿಸಿವೆ.


ಯಾವಾಗ ಚುನಾವಣೆ ನಡೆದರೂ ಬಿಜೆಪಿ ಸಿದ್ಧ

ಹುಬ್ಬಳ್ಳಿ: ರಾಜ್ಯ ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ನಡೆದರೂ ಎದುರಿಸಲು ರಾಜ್ಯ ಬಿಜೆಪಿ ಘಟಕ ಸಿದ್ಧವಾಗಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ವಿಶ್ವಾಸ ವ್ಯಕ್ತಪಡಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ಸಿಎಂ ಅಭ್ಯರ್ಥಿ. 150 ಪ್ಲಸ್ ನಮ್ಮ ಗುರಿ. ಭ್ರಷ್ಟಾಚಾರ ಮುಕ್ತ ನ್ಯೂ ಕರ್ನಾಟಕ, ವಿಕಾಸ ಕರ್ನಾಟಕ ಘೊಷಣೆಯೊಂದಿಗೆ ರಾಜ್ಯದ ಚುನಾವಣೆ ಎದುರಿಸಲಿದ್ದೇವೆ. ರಾಜ್ಯಾದ್ಯಂತ ಶೀಘ್ರದಲ್ಲೇ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳ ಲಾಗುವುದು. ಪ್ರಧಾನಿ ಮೋದಿ, ಅಮಿತ ಷಾ ಸೇರಿ ಹಲವು ರಾಷ್ಟ್ರನಾಯಕರು ಭಾಗವಹಿಸುವರು ಎಂದರು.

ಯಾರಿಗೆ, ಯಾವ ಕ್ಷೇತ್ರ ಹಂಚಿಕೆ?

ಆರ್.ಅಶೋಕ್-ಚಾಮುಂಡೇಶ್ವರಿ, ಸತೀಶ್ ರೆಡ್ಡಿ-ಚಾಮರಾಜ ಕ್ಷೇತ್ರ, ವೈ.ಎ. ನಾರಾಯಣಸ್ವಾಮಿ- ಚಿಕ್ಕನಾಯಕನಹಳ್ಳಿ, ಮುನಿರಾಜು-ದೇವನಹಳ್ಳಿ, ಅರವಿಂದ ಲಿಂಬಾವಳಿ- ದೊಡ್ಡ ಬಳ್ಳಾಪುರ, ಪ್ರತಾಪ್ ಸಿಂಹ-ಮೂಡಿಗೆರೆ ಹಾಗೂ ಕೊಳ್ಳೇಗಾಲ, ಪಿ.ಸಿ.ಮೋಹನ್-ಚಿಕ್ಕಬಳ್ಳಾಪುರ, ಶೋಭಾ ಕರಂದ್ಲಾಜೆ- ಶಿವಾಜಿ ನಗರ ಹಾಗೂ ಮಹಾಲಕ್ಷ್ಮೀ ಲೇಔಟ್, ನಿರ್ಮಲಾ ಸೀತಾ ರಾಮನ್- ಬ್ಯಾಟರಾಯನಪುರ, ಎಂ. ಕೃಷ್ಣಪ್ಪ- ಹೊಸಕೋಟೆ.

Leave a Reply

Your email address will not be published. Required fields are marked *

Back To Top