Thursday, 18th October 2018  

Vijayavani

ಅಭಿಮಾನಿಗಳ ಪಾಲಿಗೆ ಮಳೆರಾಯನೇ ವಿಲನ್​​​​​​​​​-ದಾವಣಗೆರೆಲಿ ಮುಂಜಾನೆಯ ಚಿತ್ರ ಪ್ರದರ್ಶನ ರದ್ದು- ಆಯುಧಪೂಜಾ ಸಂಭ್ರಮ ಮಂಕು        ಶಿವಮೊಗ್ಗದಲ್ಲೂ ವಿಲನ್​​ ಚಿತ್ರಕ್ಕೆ ಬ್ರೇಕ್​-ಮಧ್ಯರಾತ್ರಿ ಪ್ರದರ್ಶನಕ್ಕೆ ಪೊಲೀಸರ ಅಡ್ಡಿ-ಥಿಯೇಟರ್​​​​​ ಬಳಿ ಅಭಿಮಾನಿಗಳ ಜಾಗರಣೆ        ನಾಡಿನಾದ್ಯಂತ ನವರಾತ್ರಿ ವೈಭವ-ಇಂದು ಆಯುಧಪೂಜೆ ಸಂಭ್ರಮ-ಅತ್ತ ಅರಮನೆಯಲ್ಲಿ ಶಸ್ತ್ರಾಸ್ತ್ರ ಪೂಜೆಗೆ ಕ್ಷಣಗಣನೆ        ಯುವದಸರಾಗೆ ಬಿತ್ತು ಅದ್ಧೂರಿ ತೆರೆ-ರಾಕಿಂಗ್​​ ಸ್ಟಾರ್​ ಡೈಲಾಗ್​​ಗೆ ಫುಲ್​​​ ಖುಷ್​-ಕೊನೆ ದಿನ ಕುಣಿದು ಕುಪ್ಪಳಿಸಿದ ಯುವಕರು        ಲಿಂಗಾಯತ ಪ್ರತ್ಯೇಕ ಧರ್ಮ ತಪ್ಪು-ಧರ್ಮ, ಜಾತಿ ವಿಚಾರಕ್ಕೆ ಸರ್ಕಾರ ಕೈ ಹಾಕಬಾರದು-ತಪ್ಪೊಪ್ಪಿಕೊಂಡ ಸಚಿವ ಡಿಕೆಶಿ        ಅಂಬಿ ಮನೆಗೆ ಮಂಡ್ಯ ಜೆಡಿಎಸ್​​​​ ಕ್ಯಾಂಡಿಡೇಟ್​-ಕ್ಯಾಂಪೇನ್​​​​ಗೆ ಬರುವಂತೆ ರೆಬಲ್​ಗೆ​​​​​​ ಇನ್ವೇಟ್​-ಅಶೀರ್ವಾದ ಪಡೆದ ಶಿವರಾಮೇಗೌಡ       
Breaking News

ನಾಮಿನಿ ಸದಸ್ಯತ್ಯ ಉಳಿಸಿಕೊಳ್ಳಲು ಲಾಬಿ

Sunday, 10.06.2018, 10:52 PM       No Comments

ಕೋಲಾರ: ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ ನಿಗಮ-ಮಂಡಳಿ ಇನ್ನಿತರ ಸಂಸ್ಥೆಗಳಿಗೆ ನೇಮಕ ಮಾಡಿರುವ ಹುದ್ದೆ ರದ್ದಾಗುವುದು ಖಚಿತವಾಗಿರುವುದರಿಂದ ಕೋಚಿಮುಲ್ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ನಾಮಿನಿ ಸದಸ್ಯತ್ವ ಉಳಿಸಿಕೊಳ್ಳಲು ಲಾಬಿ ನಡೆಸಿದ್ದಾರೆ.

ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಆರ್.ರಮೇಶ್​ಕುಮಾರ್ ಸ್ವಕ್ಷೇತ್ರದವರಾದ ಎನ್.ಜಿ.ಬ್ಯಾಟಪ್ಪರನ್ನು ಕೋಚಿಮುಲ್​ಗೆ ನಾಮಿನಿ ನಿರ್ದೇಶಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಅಧ್ಯಕ್ಷರಾಗಿ ಚುನಾಯಿತರಾಗಲು ಸಹಕಾರ ನೀಡಿದ್ದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಮೇ 29ರಂದು ಸಾರ್ವಜನಿಕ ಉದ್ದಿಮೆ ಇಲಾಖೆ ಉಪ ಕಾರ್ಯದರ್ಶಿ(ಆಡಳಿತ) ಎಲ್.ರಾಜೇಶ್ವರಿ ಅನಧಿಕೃತ ಟಿಪ್ಪಣಿಯಲ್ಲಿ ನಿಗಮ-ಮಂಡಳಿ ಉಪಾಧ್ಯಕ್ಷರು, ನಿರ್ದೇಶಕರ ಅಧಿಕಾರಾವಧಿ ಅಂತ್ಯಗೊಳ್ಳುವುದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಆದೇಶಿಸಿದ್ದರು. ಇದನ್ನಾಧರಿಸಿ ಮೇ 31ರಂದು ಸಹಕಾರ ಇಲಾಖೆ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಆಂತರಿಕ ಟಪ್ಪಣಿ ಹೊರಡಿಸಿ ನಿಗಮ-ಮಂಡಳಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕವಾಗಿರುವ ಅಧಿಕಾರೇತರ ನಿರ್ದೇಶಕರ ಅವಧಿ ಮುಗಿದಿರುವುದರಿಂದ ಕ್ರಮ ಕೈಗೊಳ್ಳಲು ಸಹಕಾರ ಇಲಾಖೆಯ ಎಲ್ಲ ಶಾಖಾ ಮುಖ್ಯಸ್ಥರಿಗೆ ತಿಳಿಸಿದ್ದರು.

ಹೊಸ ಸರ್ಕಾರ ರಚನೆ ಬಳಿಕ ಸಚಿವ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ಪ್ರಕ್ರಿಯೆ ವಿಳಂಬದಿಂದ ಸರ್ಕಾರಿ ನಾಮಿನಿ ರದ್ದು ಪ್ರಸ್ತಾವನೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿಯಿಂದ ಅಂಕಿತ ಸಿಕ್ಕಿಲ್ಲ. ಹೊಸ ಸರ್ಕಾರ ಯಾವುದೇ ಸಂದರ್ಭದಲ್ಲಾದರು ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ನಾಮ ನಿರ್ದೇಶಕರನ್ನು ನೇಮಿಸುವ ಸಾಧ್ಯತೆ ಇರುವುದರಿಂದ ಸ್ಥಾನ ಉಳಿಸಿಕೊಳ್ಳಲು ಬ್ಯಾಟಪ್ಪ, ಸ್ಪೀಕರ್ ರಮೇಶ್​ಕುಮಾರ್ ಸೇರಿ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ಬ್ಯಾಟಪ್ಪರ ನಾಮಿನಿ ಅವಧಿ ಮುಗಿಯುವುದರಿಂದ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಕೋಚಿಮುಲ್​ಗೆ ನಾಮಿನಿ ನಿರ್ದೇಶಕರನ್ನಾಗಿ ಮಾಡಬೇಕೆಂಬ ಒತ್ತಡ ಹೆಚ್ಚಿದೆ. ಆಪ್ತರನ್ನು ಮುಂದುವರಿಸಲು ಸ್ಪೀಕರ್ ರಮೇಶ್​ಕುಮಾರ್​ಗೆ ಧರ್ಮಸಂಕಟ ಎದುರಾಗಿದೆ. ಕೋಲಾರ ಲೋಕಸಭಾ ಕ್ಷೇತ್ರದ ಚಿಂತಾಮಣಿ ಇಲ್ಲವೇ ಶಿಡ್ಲಘಟ್ಟದ ಕಾಂಗ್ರೆಸ್ ಕಾರ್ಯಕರ್ತರೊಬ್ಬರನ್ನು ನಾಮಿನಿ ಮಾಡಲು ಸಂಸದ ಕೆ.ಎಚ್.ಮುನಿಯಪ್ಪ ಲೆಕ್ಕಾಚಾರ ಹಾಕಿದ್ದಾರೆ. ಗೌರಿಬಿದನೂರು ಶಾಸಕ, ಸಚಿವ ಶಿವಶಂಕರರೆಡ್ಡಿ ಸಹ ಆಸಕ್ತಿ ತೋರಿದ್ದಾರೆ.

ಕೋಚಿಮುಲ್​ನಲ್ಲಿ 4 ಜೆಡಿಎಸ್ ನಿರ್ದೇಶಕರಿದ್ದಾರೆ. ಚಿಕ್ಕಬಳ್ಳಾಪುರದ ಕೆ.ವಿ.ನಾಗರಾಜ್, ಕೋಲಾರದ ಜಯಸಿಂಹಕೃಷ್ಣಪ್ಪ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಬ್ಯಾಟಪ್ಪ ನಾಮಿನಿ ನಿರ್ದೇಶಕ ಸ್ಥಾನ ರದ್ದಾದ ತಕ್ಷಣ, ಅಧ್ಯಕ್ಷ ಸ್ಥಾನ ಹೋಗುವುದರಿಂದ ಕೋಚಿಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಗಲಿದೆ. ಬ್ಯಾಟಪ್ಪ ನಾಮಿನಿಯಾಗಿ ಮುಂದುವರಿದರೂ ಅಧ್ಯಕ್ಷರಾಗಿ ಮುಂದುವರಿಯುವುದು ಸುಲಭವಲ್ಲ. ಜೆಡಿಎಸ್ ಮುಖಂಡರು ಬ್ಯಾಟಪ್ಪಗೆ ಅಡ್ಡಗಾಲು ಹಾಕಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಹಿಂದೆ ಜನತಾದಳದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಸೇರಿ ಅಧಿಕಾರ ಗಟ್ಟಿಸಿಕೊಂಡಿರುವ ಬ್ಯಾಟಪ್ಪಗೆ ಸಮ್ಮಿಶ್ರದಿಂದ ಜೀವದಾನ ಸಿಗುವುದು ಸುಲಭವಲ್ಲ.

Leave a Reply

Your email address will not be published. Required fields are marked *

Back To Top