Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ನಾಮಪತ್ರ ಸಲ್ಲಿಸುವಾಗ ಪತ್ನಿ ಆಸ್ತಿ ವಿವರ ಕಡ್ಡಾಯ

Thursday, 14.09.2017, 3:07 AM       No Comments

 

ನವದೆಹಲಿ: ಜನಪ್ರತಿನಿಧಿಗಳ ಆಸ್ತಿಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬರುತ್ತಿರುವ ಬಗ್ಗೆ ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್ ವರದಿ ಕೇಳಿದ ಬೆನ್ನಲ್ಲೇ ಈಗ ಚುನಾವಣಾ ಆಯೋಗ ಹಾಗೂ ತೆರಿಗೆ ಮಂಡಳಿ ಮಹತ್ವದ ಕ್ರಮಕ್ಕೆ ಮುಂದಾಗಿವೆ. ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರದ ಜತೆಗೆ ಪತ್ನಿ ಹಾಗೂ ಮೂವರು ಅವಲಂಬಿತರ ಆಸ್ತಿ ವಿವರವನ್ನು ಫಾಮ್ರ್ 26ರಲ್ಲಿ ಸಲ್ಲಿಸುವುದು ಕಡ್ಡಾಯವಾಗುವ ಸಾಧ್ಯತೆ ಇದೆ. ಇಂತಹ ನಿಯಮ ಜಾರಿಗೊಳಿಸುವ ಬಗ್ಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಚುನಾವಣಾ ಆಯೋಗದ ಜತೆ ರ್ಚಚಿಸಿದೆ. ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದ ನಂತರದಲ್ಲಿ ಹೆಚ್ಚಿನ ಆದಾಯ ಮತ್ತು ಆಸ್ತಿ ಸಂಗ್ರಹಿಸುವುದಕ್ಕೆ ಕಡಿವಾಣ ಹಾಕುವ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ವೇಳೆ ಸಿಬಿಡಿಟಿ ಸುಪ್ರೀಂಕೋರ್ಟ್​ಗೆ ಈ ಮಾಹಿತಿ ನೀಡಿದೆ.

ನಡೆದಿದೆ 2 ಸುತ್ತಿನ ಮಾತುಕತೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳು ತಮ್ಮ ಹಾಗೂ ಪತ್ನಿ ಅಲ್ಲದೆ, ಮೂವರು ಅವಲಂಬಿತರ ಆಸ್ತಿ ವಿವರ ಸಲ್ಲಿಕೆಯನ್ನು ಕಡ್ಡಾಯಗೊಳಿಸುವ ಕುರಿತು ಚುನಾವಣಾ ಆಯೋಗದ ಜತೆಗೆ 2 ಸುತ್ತಿನ ಮಾತುಕತೆ ನಡೆಸಲಾಗಿದೆ. ಸರ್ಕಾರ ಕೂಡ ಚುನಾವಣಾ ನಿಯಮಗಳ ಸಂಹಿತೆಯಲ್ಲಿ ತಿದ್ದುಪಡಿ ತಂದು, ಅಭ್ಯರ್ಥಿ ಮತ್ತವರ ಪತ್ನಿಯ ಆದಾಯ ವಿವರ ದಾಖಲಿಸಲು ಪ್ರತ್ಯೇಕ ಅಂಕಣವನ್ನು ನಿಗದಿಪಡಿಸಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನ್ಯಾಯಪೀಠಕ್ಕೆ ತಿಳಿಸಿದರು.

ನವದೆಹಲಿ: ಟಿಕೆಟ್ ಕಾಯ್ದಿರಿಸಿ ರೈಲು ಪ್ರಯಾಣ ಮಾಡುವವರು ಇನ್ನು ಮುಂದೆ ಎಂ-ಆಧಾರ್​ನ್ನು ದಾಖಲೆಯಾಗಿ ತೋರಿಸಬಹುದು. ಭಾರತೀಯ ರೈಲ್ವೆ ಇಲಾಖೆ ಈ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದ್ದು, ಈ ಹಿಂದೆ ಇ-ಆಧಾರ್ ಅಥವಾ ಮುದ್ರಿತ ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯವಾಗಿತ್ತು. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಎಂ-ಆಧಾರ್ ಹೆಸರಿನ ಮೊಬೈಲ್ ಆಪ್ ಅಭಿವೃದ್ಧಿಪಡಿಸಿ, ಜು.20, 2017ರಂದು ಬಿಡುಗಡೆ ಮಾಡಿತ್ತು.

ಎಂ-ಆಧಾರ್ ಬಳಕೆ ಹೇಗೆ?

=ಮೊಬೈಲ್ ಸಂಖ್ಯೆ ಆಧಾರ್​ಗೆ ಜೋಡಣೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.=ಸ್ಮಾರ್ಟ್ ಫೋನ್​ನಲ್ಲಿ ಗೂಗಲ್ ಪ್ಲೇಸ್ಟೋರ್​ಗೆ ಹೋಗಿ ಎಂ – ಆಧಾರ್ ಆಪ್ ಡೌನ್​ಲೋಡ್ ಮಾಡಿಕೊಳ್ಳಿ.=ಆಪ್ ತೆರೆದ ಕೂಡಲೇ ಒಟಿಪಿ ಸಂಖ್ಯೆ ನಿಮ್ಮ ಮೊಬೈಲ್​ಗೆ ಬರುತ್ತದೆ. ನಿಮ್ಮ ವಿವರಗಳನ್ನು ಆಪ್​ನಲ್ಲಿ ದಾಖಲಿಸಲು ಒಟಿಪಿ ಬಳಸಿ.= ನಿಮ್ಮ ಪಾಸ್​ವರ್ಡ್ ಸೆಟ್ ಮಾಡಿ.=ಆಧಾರ್ ಕಾರ್ಡ್ ಮಾಹಿತಿ ನಮೂದಿಸಿ. =ಪರಿಶೀಲನೆ ಸಂಖ್ಯೆ ನಿಮ್ಮ ಮೊಬೈಲ್​ಗೆ ಬರುತ್ತದೆ. ಅದನ್ನು ಆಪ್​ನಲ್ಲಿ ನಮೂದಿಸಿದರೆ ಎಂ-ಆಧಾರ್ ಬಳಕೆಗೆ ಸಿದ್ಧ.

Leave a Reply

Your email address will not be published. Required fields are marked *

Back To Top