Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :

ನಾಟ್ ಫೇರ್..

Friday, 19.05.2017, 3:02 AM       No Comments

ಫೇರ್​ನೆಸ್ ಕ್ರೀಂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗಷ್ಟೆ ಅಭಯ್ ಡಿಯೋಲ್ ಘೊಷಿಸಿದ್ದರು. ಕೆಲ ಬಾಲಿವುಡ್ ಸ್ಟಾರ್ ನಟರು ಕೂಡ ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ದೊಡ್ಡ ಮೊತ್ತದ ಆಮಿಷವೊಡ್ಡುವ ಫೇರ್​ನೆಸ್ ಕಂಪನಿಗಳಿಗೆ ಬಗ್ಗದ ರಣಬೀರ್ ಕಪೂರ್, ಕಂಗನಾ ರಣೌತ್, ರಣದೀಪ್ ಹೂಡ ಮುಂತಾದ ನಟರು ಬಿಲ್​ಕುಲ್ ಆಗುವುದಿಲ್ಲ ಎಂದಿದ್ದರು. ಇತ್ತೀಚೆಗೆ ‘ಬಾಹುಬಲಿ’ ಪ್ರಭಾಸ್ ಕೂಡ ಇದೇ ನಿರ್ಧಾರ ಕೈಗೊಂಡಿದ್ದು ಸುದ್ದಿಯಾಗಿತ್ತು. ಇದೀಗ ಈ ಸಾಲಿಗೆ ಬಾಲಿವುಡ್​ನ ಮಾದಕ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಯಾವುದೇ ಕಾರಣಕ್ಕೂ ಫೇರ್​ನೆಸ್ ಕ್ರೀಂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಂತಹ ಉತ್ಪನ್ನಗಳನ್ನು ಪ್ರಚಾರ ಮಾಡುವಾಗ ನಮಗರಿವಿಲ್ಲದಂತೆ ಅನೇಕರ ಮೇಲೆ ಪ್ರಭಾವ ಬೀರುತ್ತೇವೆ. ಇದರಿಂದ ಒಂದಲ್ಲ ಒಂದು ರೀತಿ ಅವರ ಬಣ್ಣವನ್ನು ಬಿಳಿ ಮಾಡುತ್ತೇವೆಂದು ಅವರ ಆತ್ಮವಿಶ್ವಾಸವನ್ನು ನಾವೇ ಕುಗ್ಗಿಸಿದಂತಾಗುತ್ತದೆ. ಮಕ್ಕಳಿಗೆ, ಯುವತಿಯರಿಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಹೀಗಾಗಿ, ಅಂತಹ ನಿರ್ಧಾರ ತೆಗೆದುಕೊಳ್ಳಲು ನಾನು ಒಪ್ಪಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ‘ಜುಡ್ವಾ 2’ ಸಿನಿಮಾದಲ್ಲಿ ವರುಣ್ ಧವನ್ ಜತೆಯಾಗಿ ಕಾಣಿಸಿಕೊಳ್ಳುತ್ತಿರುವ ಜಾಕ್ವೆಲಿನ್​ಳೊಂದಿಗೆ ತಾಪ್ಸಿ ಪನ್ನು ಕೂಡ ತೆರೆ ಹಂಚಿಕೊಳ್ಳಲಿದ್ದಾರೆ. ಡೇವಿಡ್ ಧವನ್ ಸಿನಿಮಾ ನಿರ್ದೇಶಿಸಿದ್ದಾರೆ. ಅಂದಹಾಗೆ ಈ ಸಿನಿಮಾ ಸೆ. 29ಕ್ಕೆ ತೆರೆಗೆ ಬರಲಿದೆಯಂತೆ. ಇದರ ಜತೆಗೆ ಸಿದ್ಧಾಥ್ ಮಲ್ಹೋತ್ರಾ ಜತೆಗೆ ‘ರಿಲೋಡೆಡ್’ ಎಂಬ ಸಿನಿಮಾದಲ್ಲೂ ಜಾಕ್ವೆಲಿನ್ ಬಿಜಿಯಾಗಿದ್ದಾರೆ.

-ಏಜೆನ್ಸೀಸ್

 

Leave a Reply

Your email address will not be published. Required fields are marked *

fifteen − 2 =

Back To Top