Thursday, 21st September 2017  

Vijayavani

1. ಆಸೀಸ್‌ ಬಗ್ಗುಬಡಿದ ಟೀಂಇಂಡಿಯಾ- ಈಡನ್‌ ಗಾರ್ಡನ್‌ನಲ್ಲಿ ಭಾರತಕ್ಕೆ ದಿಗ್ವಿಜಯ- ಹ್ಯಾಟ್ರಿಕ್‌ ಸಾಧನೆ ಮಾಡಿ ಕುಲ್ದೀಪ್‌ ಕಿಲಕಿಲ 2. ಶಿವರಾಮ ಕಾರಂತ ಲೇಔಟ್ ಡಿನೋಟಿಫೈ ಪ್ರಕರಣ- ಎಸಿಬಿ ಅಧಿಕಾರಿಗಳ ತುರ್ತು ಸಭೆ- ಮುಂದಿನ ನಡೆ ಬಗ್ಗೆ ಸುದೀರ್ಘ ಚರ್ಚೆ 3. ಬಳ್ಳಾರಿಯ ಮುದೇನೂರು ಕೆರೆ ಬಿರುಕು- ಯಾವುದೇ ಕ್ಷಣದಲ್ಲೂ ಕೆರೆ ಒಡೆಯೋ ಸಾಧ್ಯತೆ- ಆತಂಕದಲ್ಲಿ ಹೂವಿನಹಡಗಲಿ ಜನ 4. ಸಂಜೀವಿನಿ ಪರ್ವತ ಹೊತ್ತು ತಂದ ಹನುಮಂತ- ಕ್ರೇನ್‌ ಕೈಕೊಟ್ಟು ರಪ್‌ ಅಂತ ನೆಲಕ್ಕೆ ಬಿದ್ದ- ಆಸ್ಪತ್ರೆ ಸೇರಿದ ಆಂಜನೇಯ 5. ಅಖಾಡದಲ್ಲಿ ಕುಸ್ತಿ ಮಸ್ತಿಯ ಕಲರವ- ಅರಮನೆ ಆವರಣದಲ್ಲಿ ಕಲಾಶ್ರೀಮಂತಿಕೆಯ ವೈಭವ- ಮೈಸೂರಿನಲ್ಲಿ ಮೇಳೈಸಿದೆ ನಾಡಹಬ್ಬದ ಸಂಭ್ರಮ
Breaking News :

ನರಸೀಪುರ ನಾಟಿವೈದ್ಯರ ವಿರುದ್ಧದ ಅರ್ಜಿ ವಜಾ

Sunday, 10.09.2017, 3:00 AM       No Comments

ಶಿವಮೊಗ್ಗ: ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ನಾಟಿವೈದ್ಯ ಸಾಗರ ತಾಲೂಕಿನ ನರಸೀಪುರ ನಾರಾಯಣಮೂರ್ತಿ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಚೆನ್ನೈನ ಹಸಿರು ಪೀಠ ವಜಾ ಮಾಡಿದೆ. ಸಾಗರ ತಾಲೂಕು ಮಲಂದೂರು ಗ್ರಾಮದ ತಿಪ್ಪನಜಡ್ಡು ಎಂ.ಗಣಪತಿ ಎಂಬವರು ನಾರಾಯಣಮೂರ್ತಿ ವಿರುದ್ಧ ಚೆನ್ನೈನ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ನಾಟಿ ಔಷಧ ಕೊಡುವ ಸಲುವಾಗಿ ಮರದ ತೊಗಟೆಯನ್ನು ಕಾನೂನು ಬಾಹಿರವಾಗಿ, ಅವೈಜ್ಞಾನಿಕವಾಗಿ ತೆಗೆದು ಔಷಧ ಮರಗಳನ್ನು ಹಾಳು ಮಾಡಿರುತ್ತಾರೆ. ಇದರಿಂದ ಕಾಡು ನಾಶವಾಗಿದೆ ಎಂದು ನಾರಾಯಣಮೂರ್ತಿ ಸೇರಿ 7 ಜನರ ವಿರುದ್ಧ ಹಸಿರು ಪೀಠಕ್ಕೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹಸಿರು ಪೀಠ, ಔಷಧ ನೀಡುವ ಸಲುವಾಗಿ ಮರಗಳಿಗೆ ಧಕ್ಕೆಯಾಗದಂತೆ ತೊಗಟೆ ತೆಗೆಯಲು ನಾರಾಯಣಮೂರ್ತಿಗೆ ಪರವಾನಗಿ ನೀಡಲಾಗಿದೆ. ಹಾಗಾಗಿ ಎಂ.ಗಣಪತಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.

ಲಾಭದ ಆಸೆಯಿಲ್ಲ

ನಾಟಿ ವೈದ್ಯ ನಾರಾಯಣಮೂರ್ತಿ ನರಸೀಪುರದ ತಮ್ಮ ಮನೆ ಆವರಣದಲ್ಲಿ ಸಾಮಾನ್ಯ ಮತ್ತು ಕ್ಯಾನ್ಸರ್​ನಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಔಷಧ ಕೊಡುತ್ತಾರೆ. ಕಿಡ್ನಿ ಸ್ಟೋನ್ ಹಾಗೂ ಕ್ಯಾನ್ಸರ್​ಗೆ ಪರಿಣಾಮಕಾರಿ ಔಷಧ ಕೊಡುತ್ತಾರೆ. ಹೀಗಾಗಿ ರಾಜ್ಯ ಮತ್ತು ಹೊರರಾಜ್ಯದ ಸಾವಿರಾರು ಮಂದಿ ಔಷಧ ಪಡೆಯಲು ಪ್ರತಿ ಭಾನುವಾರ ಮತ್ತು ಗುರುವಾರ ಇವರ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. 2 ವರ್ಷಗಳ ಹಿಂದೆ ಹಲವು ಸಂಘಟನೆಗಳು ಗಿಡಮೂಲಿಕೆ ವೈದ್ಯ ವೃತ್ತಿಗೆ ತಡೆ ಹಾಕಬೇಕೆಂದು ಆಗ್ರಹಿಸಿ ಪ್ರತಿಭಟನೆಗಳನ್ನೂ ನಡೆಸಿದವು. ಇದರಿಂದ ನೊಂದ 76 ವರ್ಷದ ನಾರಾಯಣಮೂರ್ತಿ ಔಷಧ ಕೊಡುವುದನ್ನೇ ನಿಲ್ಲಿಸಿಬಿಟ್ಟರು. ಆದರೆ, ಮತ್ತೆ ಔಷಧ ಕೊಡಲಾರಂಭಿಸಿದ್ದಾರೆ.

Leave a Reply

Your email address will not be published. Required fields are marked *

Back To Top