Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ನನ್ನ ಹೇಳಿಕೆಗೆ ಈಗಲೂ ಬದ್ಧ

Wednesday, 10.01.2018, 3:02 AM       No Comments

ಬೆಂಗಳೂರು: ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಹತ್ಯೆಗೆ ಕಾಪೋರೇಟರ್​ವೊಬ್ಬರ ಹಿನ್ನೆಲೆ ಇರುವುದು ನನ್ನ ಗಮನಕ್ಕೆ ಬಂದಿದ್ದನ್ನು ಹೇಳಿದ್ದೇನೆ. ನಾನೇಕೆ ಯೂ ಟರ್ನ್ ತೆಗೆದುಕೊಳ್ಳಲಿ ಎಂದು ಪ್ರಶ್ನಿಸಿದರು.

ದೇವದಾಸಿ ಪುತ್ರಿ ಅಂತಿಮ ದರ್ಶನ!: ಬಾಗಲಕೋಟೆ ಜಿಲ್ಲೆ ಮುಧೋಳದ ದೇವದಾಸಿ ಯೊಬ್ಬರ ಪುತ್ರಿ ರೇಣುಕಾ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ದೇವದಾಸಿಯೊಬ್ಬರ ಮಗಳು ಸ್ವಾಭಿಮಾನದಿಂದ ಬದುಕು ಸಾಗಿಸಲು ಅಪೇಕ್ಷಿಸಿ ಎಂ.ಎ., ಪಿಎಚ್​ಡಿ ಪದವಿ ಪಡೆದಿದ್ದಳು. ಗ್ರಾಮ ವಾಸ್ತವ್ಯದ ಸಂದರ್ಭ ಎಚ್ಡಿಕೆಗೆ ವಿಷಯ ತಿಳಿದು ಆಕೆ ಹಾಗೂ ಆಕೆ ಪತಿಗೆ ಸಿಎಂ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೌಕರಿ ಕೊಡಿಸಿದ್ದರು. ನಂತರದ ಸರ್ಕಾರದ ಅವಧಿಯಲ್ಲಿ ಆಕೆಯನ್ನು ಕೆಲಸದಿಂದ ತೆಗೆಯಲಾಗಿತ್ತು.

ಎಚ್​ಡಿಕೆ ಒಬ್ಬ ಹಿಟ್ ಆಂಡ್ ರನ್ ಸ್ಪೆಷಲಿಸ್ಟ್. ಅನಗತ್ಯವಾಗಿ ಪ್ರಚಾರ ಪಡೆಯಲು ಇಂತಹ ಆಧಾರ ರಹಿತ ಹೇಳಿಕೆ ನೀಡುತ್ತಾರೆ.

| ಜಗದೀಶ್ ಶೆಟ್ಟರ್ ಪ್ರತಿಪಕ್ಷ ನಾಯಕ

ಮಾನನಷ್ಟ ಮೊಕದ್ದಮೆ ದಾಖಲು

ಮಂಗಳೂರು: ದೀಪಕ್ ರಾವ್ ಹತ್ಯೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರ ಕೈವಾಡವಿದೆ ಎಂದು ಹೇಳಿಕೆ ನೀಡಿರುವ ಕುಮಾರಸ್ವಾಮಿ ವಿರುದ್ಧ ಜಿಲ್ಲಾ ಸಿವಿಲ್ ನ್ಯಾಯಾಲಯದಲ್ಲಿ 1 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ ಎಂದು ಮಂಗಳೂರು ಉತ್ತರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಡಾ.ವೈ. ಭರತ್ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top