Tuesday, 26th September 2017  

Vijayavani

1. ಗಡಿಯಲ್ಲಿ ಬಾಲ ಬಿಚ್ಚಿದ್ರೆ ಹುಷಾರ್​- ನಡೆಯಲಿದೆ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​- ಪಾಕ್​ಗೆ ಬಿಪಿನ್​ ರಾವತ್​ ವಾರ್ನಿಂಗ್​ 2. ಮ್ಯಾನ್ಮಾರ್‌ನಲ್ಲಿ ಭುಗಿಲೆದ್ದ ಹಿಂಸಾಚಾರ- ಪ್ರತಿಕಾರಕ್ಕಿಳಿದ ರೋಹಿಂಗ್ಯಾ ಮುಸ್ಲಿಂರು- 92 ಜನರ ಭೀಕರ ಕಗ್ಗೊಲೆ 3. ವಿಶ್ವಕ್ಕೆ 3ನೇ ಮಹಾಯುದ್ಧದ ಭೀತಿ- ಕೋರಿಯಾ ದೃಷ್ಟಿಯಲ್ಲಿ ಅಮೆರಿಕಾವೇ ಆರೋಪಿ- ಸಮರಕ್ಕೆ ಸಿದ್ಧ ಎಂದ ಸರ್ವಾಧಿಕಾರಿ 4. ಗದಗ್​ನಲ್ಲಿ ಯಶಸ್ವಿಯಾದ ಸ್ವಚ್ಛ ಭಾರತ- ನರಗುಂದ ತಾಲೂಕು ಬಯಲು ಶೌಚಮುಕ್ತ- ಇಂದು ಉಪರಾಷ್ಟ್ರಪತಿಗಳಿಂದ ಅಧಿಕೃತ ಘೋಷಣೆ 5. ಮಳೆಗೆ ತತ್ತರಿಸಿದ ಬೆಣ್ಣೆ ದೋಸೆ ನಗರಿ- ಮಲೆನಾಡಲ್ಲಿ ಮನೆಗೆ ನುಗ್ಗಿದ ನೀರು- ಇತ್ತ ಕೋಲಾರದಲ್ಲಿ ನೂರಾರು ಎಕರೆ ಬೆಳೆ ನಾಶ
Breaking News :

ಧೋನಿ ವಿರುದ್ಧದ ಕ್ರಿಮಿನಲ್ ಕೇಸ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

Friday, 21.04.2017, 3:00 AM       No Comments

ನವದೆಹಲಿ: ಧಾರ್ವಿುಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಮಹೇಂದ್ರ ಸಿಂಗ್ ಧೋನಿ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಮ್ಯಾಗಜೀನ್ ಒಂದರ ಮುಖಪುಟದಲ್ಲಿ ಧೋನಿಯನ್ನು ವಿಷ್ಣುವಿನ ಅವತಾರದಲ್ಲಿ ಚಿತ್ರಿಸಿದ್ದರಿಂದ ಆಂಧ್ರ ಪ್ರದೇಶದ ಕೋರ್ಟ್ ಒಂದರಲ್ಲಿ ಧೋನಿ ವಿರುದ್ಧ ವಿಚಾರಣೆ ನಡೆಯುತ್ತಿತ್ತು. ಈ ಮುನ್ನ ಕರ್ನಾಟಕದ ಹೈಕೋರ್ಟ್​ನಲ್ಲೂ ಧೋನಿ ವಿರುದ್ಧ ದಾಖಲಾಗಿದ್ದ ಇಂಥದ್ದೇ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ವಜಾಗೊಳಿಸಿತ್ತು.

ಧೋನಿಯನ್ನು ವಿಷ್ಣುವಿನ ರೂಪದಲ್ಲಿ ಬಿಂಬಿಸಿದ್ದ ಮ್ಯಾಗಜೀನ್​ನ ಸಂಪಾದಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಧಾರ್ವಿುಕ ಭಾವನೆಗೆ ದುರುದ್ದೇಶದಿಂದ ಧಕ್ಕೆ ತರಲಾಗಿಲ್ಲ ಎಂದು ಕೋರ್ಟ್ ಧೋನಿ ಮತ್ತು ಸಂಪಾದಕರ ಪರ ತೀರ್ಪು ನೀಡಿದೆ. ಇದರಿಂದ ಅವರ ವಿರುದ್ಧ ಸೆಕ್ಷನ್ 295ಎ (ಧಾರ್ವಿುಕ ಭಾವನೆಗೆ ಧಕ್ಕೆ) ಪ್ರಕಾರ ದಾಖಲಾಗಿದ್ದ ಪ್ರಕರಣವೂ ರದ್ದುಗೊಂಡಿದೆ.

‘ಪ್ರಕರಣದಲ್ಲಿ ಧೋನಿ ಮತ್ತು ಸಹ-ಆರೋಪಿ ಸಂಪಾದಕರ ವಿರುದ್ಧ ಕಾನೂನುಕ್ರಮ ತೆಗೆದುಕೊಂಡರೆ ಅದು ನ್ಯಾಯಕ್ರಮದ ಗೇಲಿ ಆಗುತ್ತದೆ’ ಎಂದು ನ್ಯಾಯಮೂರ್ತಿ ಗಳಾದ ದೀಪಕ್ ಮಿಶ್ರಾ, ಎಎಂ ಖಾನ್​ವಿಲ್ಕರ್ ಮತ್ತು ಎಂಎಂ ಶಾಂತನಗೌಡರ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಆಂಧ್ರದ ಅನಂತಪುರ ಟ್ರಯಲ್ ಕೋರ್ಟ್​ನಲ್ಲಿ ಈ ಪ್ರಕರಣ ದಾಖಲಾಗಿತ್ತು. ಧೋನಿ ಕಾಣಿಸಿಕೊಳ್ಳುತ್ತಿರುವ ವಿವಿಧ ಬ್ರಾಂಡ್ ಉತ್ಪನ್ನಗಳನ್ನು ವಿಷ್ಣುವಿನ ಅವತಾರದ ಹತ್ತು ಕೈಗಳಲ್ಲಿ ನೀಡಿ ಮ್ಯಾಗಜೀನ್ ಮುಖಪುಟ ವಿನ್ಯಾಸಗೊಳಿಸಿತ್ತು.

-ಪಿಟಿಐ

Leave a Reply

Your email address will not be published. Required fields are marked *

Back To Top