Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಧರ್ಮ ಸಂಸದ್​ಗೆ 50 ಸಾವಿರ ಪ್ರತಿನಿಧಿಗಳು

Saturday, 04.11.2017, 3:01 AM       No Comments

ಮಂಗಳೂರು: ಉಡುಪಿಯಲ್ಲಿ ನ.24ರಿಂದ 26ರವರೆಗೆ ನಡೆಯಲಿರುವ ಧರ್ಮ ಸಂಸದ್ ಸಮಾವೇಶದ ಯಶಸ್ಸಿಗೆ ಪೂರಕವಾಗಿ ನ.6ರಿಂದ 21ರ ತನಕ ಮಂಗಳೂರಿನಲ್ಲಿ ಸಮಾಜದ ವಿವಿಧ ಸಂಘಟನೆಗಳ ಸಮಾವೇಶ ಆಯೋಜಿಸಲಾಗಿದೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಧರ್ಮ ಸಂಸದ್ ಕಚೇರಿಯಲ್ಲಿ ಶುಕ್ರವಾರ ಜರುಗಿದ ಮಾಧ್ಯಮ ಸಮಾವೇಶದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ ಮಾಹಿತಿ ನೀಡಿದರು.

ನ.6ರಂದು ಸಾಯಂಕಾಲ 3 ಗಂಟೆಗೆ ಉದ್ಯಮ ಮತ್ತು ಹೊಟೇಲ್ ಬಳಗದವರ ಸಮಾವೇಶ, 8ರಂದು ಸಾಯಂಕಾಲ 5ರಿಂದ ವಕೀಲರ ಸಮಾವೇಶ, 9ರಂದು ಬೆಳಗ್ಗೆ 10.30ರಿಂದ ಮಹಿಳಾ ಬಳಗ, ಸ್ವಸಹಾಯ ಗುಂಪುಗಳ ಸಮಾವೇಶ ನಡೆಯಲಿದೆ

ಎಂದರು. ನ.12ರಂದು ಬೆಳಗ್ಗೆ 10.30ಕ್ಕೆ ವೈದ್ಯರ ಸಮಾವೇಶ, 13ರಂದು ಮಧ್ಯಾಹ್ನ 3 ಗಂಟೆಗೆ ಬಿಲ್ಡರ್ಸ್ ಮತ್ತು ಗುತ್ತಿಗೆದಾರರ ಸಮಾವೇಶ, 14ರಂದು ಬೆಳಗ್ಗೆ 11 ಹಾಗೂ ಸಾಯಂಕಾಲ 4 ಗಂಟೆಗೆ ವಿದ್ಯಾರ್ಥಿ ಮತ್ತು ಆಟೋರಿಕ್ಷಾ ಚಾಲಕರ ಸಮಾವೇಶ, 15ರಂದು ಸಾಯಂಕಾಲ 4 ಕ್ಕೆ ಧಾರ್ವಿುಕ ಕೇಂದ್ರದ ಆಡಳಿತ ಮಂಡಳಿ ಸದಸ್ಯರು, ಭಜನಾ ಮಂಡಳಿ ಮುಖ್ಯಸ್ಥರ ಸಮಾವೇಶ, 18ರಂದು ಸಾಯಂಕಾಲ 4 ಕ್ಕೆ ಶಿಕ್ಷಕರ ಸಮಾವೇಶ, 19ರಂದು ಬೆಳಗ್ಗೆ 10.30 ಮತ್ತು ಮಧ್ಯಾಹ್ನ 3 ಗಂಟೆಗೆ ಕಲಾವಿದರ ಮತ್ತು ಜಾತಿ ಪ್ರಮುಖರ ಸಮಾವೇಶ, 20 ರಂದು ಸಂಜೆ 5 ಗಂಟೆಗೆ ಯುವ ಸಮಾವೇಶ ಹಾಗೂ 21ರಂದು ಸಾಯಂಕಾಲ 6 ಗಂಟೆಗೆ ಬಸ್ ಮಾಲೀಕರ ಬಳಗ, ಟ್ಯಾಕ್ಸಿ ಮಾಲೀಕರ ಬಳಗದವರ ಸಮಾವೇಶ ನಡೆಯಲಿದೆ ಎಂದವರು ವಿವರಿಸಿದರು.

ನ.26ರಂದು ಮಧ್ಯಾಹ್ನ 2.30ರಿಂದ ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿರುವ ವಿರಾಟ್ ಹಿಂದು ಸಮಾಜೋತ್ಸವದ ಶೋಭಾಯಾತ್ರೆಯಲ್ಲಿ ಉಡುಪಿ ಜಿಲ್ಲೆಯಿಂದ 2 ಲಕ್ಷ ಹಾಗೂ ದ.ಕ. ಜಿಲ್ಲೆಯಿಂದ 50 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಟ್ಟಾರಿ ಹೇಳಿದರು.

Leave a Reply

Your email address will not be published. Required fields are marked *

Back To Top