Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಧರ್ಮಪುನರುತ್ಥಾನಕ್ಕೆ ಸಮಾವೇಶ ದಿಕ್ಸೂಚಿ

Saturday, 02.09.2017, 3:00 AM       No Comments

ದಾವಣಗೆರೆ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಶಿವಯೋಗ ಮಂದಿರದಲ್ಲಿ ಸೆ.4ರಂದು ನಡೆಯುವ ಗುರು ವಿರಕ್ತರ ಸಮಾವೇಶ ವೀರಶೈವ ಲಿಂಗಾಯತ ಧರ್ಮದ ಪುನರುತ್ಥಾನಕ್ಕೆ ದಿಕ್ಸೂಚಿ ಆಗಲಿದೆ ಎಂದು ಬಾಳೇಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹಾಗೂ ರಾಜದೇಶೀ ಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಜಗದ್ಗುರು ಶ್ರೀ ಚನ್ನಸಿದ್ಧ್ದಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಅಂದಿನ ಸಮಾವೇಶದಲ್ಲಿ ಪಂಚಪೀಠ, ವಿರಕ್ತ ಮಠದ ಜಗದ್ಗುರುಗಳು ಸೇರಿ ಸಾವಿರಕ್ಕೂ ಹೆಚ್ಚು ಮಠಾಧೀಶರು, ಲಕ್ಷಾಂತರ ಭಕ್ತರು ಪಾಲ್ಗೊಳ್ಳುವರು. ಸಮಾವೇಶ

ಯಾವುದೇ ವರ್ಗದ ವಿರುದ್ಧವಲ್ಲ, ಶಕ್ತಿ ಪ್ರದರ್ಶನವೂ ಅಲ್ಲ. ಗೊಂದಲ ನಿವಾರಣೆ ಮತ್ತು ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೂಡಿದೆ ಎಂದು ಸ್ಪಷ್ಟಪಡಿಸಿದರು.

ಕಾಲಕಾಲಕ್ಕೆ ಸಮಾಜ ಸಂಘಟಿಸುವ, ಒಂದಾಗಿ ಸಾಗುವ ಸಂದೇಶವನ್ನು ಪಂಚಪೀಠಗಳು, ವಿರಕ್ತ ಮಠಗಳು ನೀಡುತ್ತ್ತಾ ಬಂದಿವೆ. ಆಗಾಗ ಗುರು ವಿರಕ್ತರ ಸಮಾವೇಶವೂ ಆಗಿದೆ. ಆದರೆ, ಮುಂದುವರಿದಿರಲಿಲ್ಲ. ಆ. 23ರಂದು ಬೆಂಗಳೂರಿನಲ್ಲಿ ನಡೆಸಿದ ಗುರು ವಿರಕ್ತರ ಸಮಾವೇಶದಲ್ಲಿ ಈ ಬಗ್ಗೆ ಸಂಕಲ್ಪ ಮಾಡಲಾಗಿದೆ. ಅದನ್ನೇ ಭಕ್ತರ ಸಮ್ಮುಖದಲ್ಲಿ ಘೊಷಿಸಲು ಶಿವಯೋಗ ಮಂದಿರದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ವೀರಶೈವ ಮತ್ತು ಲಿಂಗಾಯತ ಎಂದೆಂದಿಗೂ ಒಂದೇ. ಬಸವಣ್ಣನವರು ‘ಶೈವನಿಂದ ವೀರಶೈವನಾದೆ’ ಎಂದು ಹೇಳಿರುವಾಗ ಅವರು ಲಿಂಗಾಯತ ಧರ್ಮದ ಸ್ಥಾಪಕ ಹೇಗೆ ಆಗುತ್ತಾರೆ? ಬಸವ ಪೂರ್ವದ ಇತಿಹಾಸ ತಿಳಿಯದ, ಪಂಚಪೀಠ ಪರಂಪರೆಯ ಹಿರಿಮೆ ಅರಿಯದ ಕೆಲವರು ತಪ್ಪು ಮಾರ್ಗದರ್ಶನ ನೀಡುತ್ತಿದ್ದಾರೆ. ವೀರಶೈವ ಧರ್ಮದಿಂದ ಲಿಂಗಾಯತ ಬೇರ್ಪಡಿಸಿ ಸ್ವತಂತ್ರ ಧರ್ಮ ಬಯಸಿ ಆಗ್ರಹಿಸುತ್ತಿರುವುದರಲ್ಲಿ ಹುರುಳಿಲ್ಲ. ವೀರಶೈವ ಲಿಂಗಾಯತ ಧರ್ಮದ

ಒಳ ಪಂಗಡಗಳನ್ನು 2ಎ ಮೀಸಲಾತಿ ವ್ಯಾಪ್ತಿಗೆ ತರಬೇಕು. ಸಾಧ್ಯವಾಗದಿದ್ದರೆ ಶೇ 12-15 ಮೀಸಲಾತಿ ನೀಡಿ ಪ್ರತ್ಯೇಕ ಪ್ರವರ್ಗ ಘೊಷಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

Back To Top