Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ದ್ವಾದಶ ಅಶನ ವಿಚಾರ!

Monday, 20.02.2017, 11:32 AM       No Comments

| ಡಾ. ಗಿರಿಧರ ಕಜೆ ಎಂ.ಡಿ.(ಆಯು)

ಆಯುರ್ವೆದದಲ್ಲಿ ದ್ವಾದಶ ಅಶನ ವಿಚಾರಗಳನ್ನು ಮಾರ್ವಿುಕವಾಗಿ ಹೇಳಲಾಗಿದೆ. 1.ಶೀತಗುಣ ಆಹಾರ- ಬಾಯಾರಿಕೆ ಹಾಗೂ ಬಿಸಿಲಿನ ತಾಪದಿಂದ ಬಳಲಿದವರು, ಮಧ್ಯಪಾನದಿಂದ ತೊಂದರೆಗೊಳಗಾದವರು, ರಕ್ತಸ್ರಾವವಿರುವವರು, ವಿಷಸೇವನೆಯಾಗಿದ್ದಲ್ಲಿ, ಮೂರ್ಛೆರೋಗದಿಂದ ಬಳಲಿದ್ದಾಗ, ಮೈಉರಿ ಹೆಚ್ಚಾಗಿರುವವರಿಗೆ

ಸೂಕ್ತವಾಗಿರುತ್ತದೆ. 2.ಉಷ್ಣಾಹಾರ ವಾತ, ಕಫ ರೋಗಗಳಲ್ಲಿ, ಪಂಚಕರ್ಮದ ಶರೀರಶುದ್ಧಿ ಚಿಕಿತ್ಸೆಯ ಬಳಿಕ, ಎಣ್ಣೆತಿಂಡಿ ಹೆಚ್ಚಾಗಿ ಸೇವಿಸಿದಾಗ, ಒಣಚರ್ಮವಿರುವವರಿಗೆ ಪ್ರಶಸ್ತ. 3.ತೈಲಾಹಾರ ವಾತಪ್ರಕೃತಿಯವರು, ಒಣಚರ್ಮವುಳ್ಳವರು, ದೈಹಿಕ ಶ್ರಮಜೀವಿಗಳು, ಅತಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವರಿಗೆ ಹಿತವಾದುದು.

4.ಮೃದುವಲ್ಲದ ಗಡಸುಆಹಾರ ದೇಹದಬೊಜ್ಜು ಅಧಿಕವಿದ್ದಾಗ, ತೈಲಾಂಶ ಸೇವನೆಯ ಬಳಿಕ, ಮೂತ್ರದ ತೊಂದರೆಗಳಲ್ಲಿ ಉಪಯುಕ್ತ. 5.ದ್ರವಾಹಾರ- ನೀರಿನಾಂಶ ದೇಹದಲ್ಲಿ ಕಡಿಮೆಯಾಗಿ ಬಾಯಾರಿಕೆ ಹಾಗೂ ದುರ್ಬಲದೇಹದಿಂದ ಪರಿತಪಿಸುತ್ತಿರುವವರಿಗೆ ಉತ್ತಮ. 6.ಒಣ/ಶುಷ್ಕಾಹಾರ- ದೇಹದಲ್ಲಿ ನೀರಿನಾಂಶ ಹೆಚ್ಚಾಗಿದ್ದಾಗ, ಗಾಯ ಹಾಗೂ 20ವಿಧವಾದ ಮೂತ್ರ ರೋಗಗಳಲ್ಲಿ ಬಳಸಬೇಕು. ವಿದೇಶೀ ವೈದ್ಯಪದ್ಧತಿಗಳು ಹಲವಾರು ಸಂಶೋಧನೆಗಳನ್ನು ನಡೆಸಿ ಕಿಡ್ನಿ ವೈಫಲ್ಯದ ರೋಗಿಗಳಿಗೆ ಕಡಿಮೆ ದ್ರವಾಂಶವುಳ್ಳ ಆಹಾರಸೇವನೆ ಉಪದೇಶಿಸುತ್ತಿರುವುದನ್ನು ಆಯುರ್ವೆದ ಎಂದೋ ಹೇಳಿದೆ! 7.ಏಕಾಹಾರ ಜೀರ್ಣಶಕ್ತಿ ಕಡಿಗೆಯಿದ್ದವರಿಗೆ ಸರಿಯಾಗುವ ತನಕ ದಿನದಲ್ಲಿ ಒಂದೇ ಆಹಾರ ಅನುಕೂಲಕಾರಿ. 8.ಎರಡುಆಹಾರ- ಪಚನಕ್ರಿಯೆ ಚೆನ್ನಾಗಿರುವವರು ದಿನದಲ್ಲಿ ಎರಡುಬಾರಿ ಉಣ್ಣಬಹುದು. 9.ಔಷಧಾಹಾರ- ರೋಗಿಯು ಔಷಧ ಸೇವಿಸಲು ಅಸಹ್ಯಪಟ್ಟರೆ ಅಥವಾ ನಿರಾಕರಿಸುತ್ತಿದ್ದರೆ ಆಹಾರದೊಂದಿಗೆ ಮಿಶ್ರಮಾಡಿ ನೀಡಬೇಕು. ಇಂದಿನ ಮಾನಸಿಕರೋಗ ತಜ್ಞರು ಅನೇಕ ರೋಗಿಗಳಲ್ಲಿ ಇದನ್ನು ಬಳಸುತ್ತಿರುವುದು ನೋಡಿರಬಹುದು. 10.ಅಲ್ಪಾಹಾರ- ಜಠರಾಗ್ನಿ ದುರ್ಬಲವಾಗಿರುವ ರೋಗಿಗಳಿಗೆ ಸ್ವಲ್ಪವೇ ಪ್ರಮಾಣದಲ್ಲಿ ಕೆಲಕಾಲ ಆಹಾರ ನೀಡಬಹುದು. 11.ಶಮನಾಹಾರ- ಪ್ರದೇಶ, ಋತುವಿಗೆ ಅನುಗುಣವಾದ ಆಹಾರ. 12.ಸ್ವಸ್ಥಾಹಾರ- ಸ್ವಸ್ಥರಿಗೆ ಎಲ್ಲಾ ಬಗೆಯ ಆಹಾರ. ಈ ಹನ್ನೆರಡು ಆಹಾರದ ವಿಚಾರಗಳಲ್ಲಿ ಹನ್ನೊಂದನ್ನು ರೋಗಿಗಳನ್ನು ಕೇಂದ್ರೀಕರಿಸಿ ವಿವರಿಸಲಾಗಿದೆ. ರೋಗವನ್ನು ಗುಣಪಡಿಸಲು ಆಹಾರದಲ್ಲಿ ಕೇವಲ ಕ್ಯಾಲೊರಿ, ಪೋಷಕಾಂಶ ಲೆಕ್ಕಾಚಾರ ಏನೇನೂ ಸಾಲದೆಂಬುದನ್ನು ನಾವು ಇನ್ನಾದರೂ ಮನಗಾಣಲೇಬೇಕು.

ಪಂಚಸೂತ್ರಗಳು

* ಅಶ್ವಗಂಧಬೇರು: ಕೆಮ್ಮು, ಆಸ್ತಮಾಗಳಲ್ಲಿ ಸಹಾಯಕ.

* ಬಿಲ್ವಹಣ್ಣು: ಮಧುಮೇಹಿಗಳಿಗೆ ಒಳ್ಳೆಯದು.

* ತೊಂಡೆಕಾಯಿ: ಮೂತ್ರರೋಗಗಳಲ್ಲಿ ಉಪಯುಕ್ತ.

* ಸಿಹಿಹಾಲೆಸೊಪ್ಪು: ಜ್ವರದಲ್ಲಿ ಹಿತ.

* ಮರದರಶಿನ: ಸರ್ಪಸುತ್ತು ಇದ್ದಾಗ ಉಪಕಾರಿ.

ಕೊನೇ ಹನಿ

 ಗುಂಡುತಗಚೆ (ಚೊಗಟೆ)ಎಲೆಯನ್ನು ಮೊಸರಿನಲ್ಲಿ ಅರೆದ ಲೇಪನದಿಂದ ರಿಂಗ್​ವಮ್ರ್ ಗುಣ.

Leave a Reply

Your email address will not be published. Required fields are marked *

Back To Top