Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ದೇವರಿಗಿಂತ ಬಿಸಿಸಿಐ ದೊಡ್ಡದಲ್ಲ!

Saturday, 12.08.2017, 3:00 AM       No Comments

ನವದೆಹಲಿ: ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ ಬಿಸಿಸಿಐ ನಿರ್ಧಾರಕ್ಕೆ ನಿಷೇಧಿತ ಕ್ರಿಕೆಟಿಗ ಎಸ್. ಶ್ರೀಶಾಂತ್ ಕಿಡಿಕಾರಿದ್ದಾರೆ. ಶ್ರೀಶಾಂತ್ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ತೆರವು ಮಾಡುವಂತೆ ಕೇರಳ ಹೈಕೋರ್ಟ್​ನ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಹೈಕೋರ್ಟ್​ನ ವಿಸ್ತ್ರತ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ಬಿಸಿಸಿಐ ನಿರ್ಧಾರ ಮಾಡಿತ್ತು.

‘ಬಿಸಿಸಿಐ ನಾನು ನಿಮ್ಮಲ್ಲಿ ಬೇಡುತ್ತಿಲ್ಲ. ನನ್ನ ಜೀವನವನ್ನು ನನಗೆ ವಾಪಾಸ್ ಕೊಡಿ ಎಂದು ಕೇಳುತ್ತಿದ್ದೇನೆ. ಇದು ನನ್ನ ಹಕ್ಕು. ನೀವೆಲ್ಲ ದೇವರಿಗಿಂತ ದೊಡ್ಡವರಲ್ಲ. ನಾನು ಮತ್ತೊಮ್ಮೆ ಕ್ರಿಕೆಟ್ ಆಡುತ್ತೇನೆ’ ಎಂದು 34 ವರ್ಷದ ವೇಗಿ ಆಕ್ರೋಶದಿಂದ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ತಾನು ನಿರಪರಾಧಿ ಎಂದು ಒಬ್ಬ ವ್ಯಕ್ತಿ ಪ್ರತಿ ಹಂತದಲ್ಲೂ ಹೇಳುತ್ತಿದ್ದರೂ… ಅವನಿಗೆ ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ಶ್ರೀಶಾಂತ್ ಮತ್ತೊಂದು ಟ್ವೀಟ್​ನಲ್ಲಿ ಬರೆದಿದ್ದಾರೆ. -ಪಿಟಿಐ/ಏಜೆನ್ಸೀಸ್

***

ಚೆನ್ನೈ, ರಾಜಸ್ಥಾನ ಕುರಿತು ಪ್ರಶ್ನೆ

‘ಭ್ರಷ್ಟಾಚಾರ ಹಾಗೂ ಮ್ಯಾಚ್ ಫಿಕ್ಸಿಂಗ್ ಕುರಿತಾಗಿ ಬಿಸಿಸಿಐ ಅತ್ಯಂತ ಕಠಿಣ ನಿಯಮ ಹೊಂದಿದೆ ಎಂದು ಹೇಳುತ್ತಿದೆ. ಹಾಗಿದ್ದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳನ್ನು ಮರಳಿ ಸೇರಿಸಿಕೊಂಡಿದ್ದೇಕೆ?’ ಎಂದು ಇನ್ನೊಂದು ಟ್ವೀಟ್​ನಲ್ಲಿ ಬರೆದಿದ್ದಾರೆ. ಮ್ಯಾಚ್ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಈ ಎರಡೂ ತಂಡಗಳಿಗೆ ಮುದ್ಗಲ್ ಸಮಿತಿ 2 ವರ್ಷಗಳ ಅಮಾನತು ಶಿಕ್ಷೆ ವಿಧಿಸಿದ್ದು, ಐಪಿಎಲ್-11ರಲ್ಲಿ ಮತ್ತೆ ಕಣಕ್ಕಿಳಿಯಲಿವೆ.

Leave a Reply

Your email address will not be published. Required fields are marked *

Back To Top