Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ದೇವರಿಗಾಗಿ ಬಡಿದಾಟದಲ್ಲಿ ಹಲವರಿಗೆ ಗಾಯ

Monday, 02.10.2017, 3:01 AM       No Comments

ಸಿರಗುಪ್ಪ (ಬಳ್ಳಾರಿ): ತಾಲೂಕಿನ ಗಡಿಗ್ರಾಮ, ಕರ್ಲೂಲು ಜಿಲ್ಲೆ ಆಲೂರು ತಾಲೂಕು ನೇರಣಿಕಿ ಗ್ರಾಮದ ದೇವರಗುಡ್ಡದಲ್ಲಿರುವ ಗ್ರಾಮದಲ್ಲಿ ಪ್ರತಿ ವರ್ಷ ವಿಜಯದಶಮಿಯ ದಿನ ನಡೆವ ದೇವರ ಉತ್ಸವ ಮೂರ್ತಿಗಳಿಗಾಗಿ ಹೊಡೆದಾಡುವ ಹಬ್ಬದಲ್ಲಿ ಈ ಬಾರಿ 17 ಜನರಿಗೆ ಶನಿವಾರ ಗಾಯಗಳಾಗಿವೆ.

ಆಂಧ್ರ, ಮಹಾರಾಷ್ಟ್ರ, ಕರ್ನಾಟಕದ ಸಾವಿರಾರು ಕುಟುಂಬಗಳ ಮನೆ ದೇವರು ಗುಡ್ಡದ ಮಲ್ಲಯ್ಯ. ಈ ದೇವರ ಕಲ್ಯಾಣೋತ್ಸವ ವಿಜಯದಶಮಿಯಂದು ಉತ್ಸವ ಮೂರ್ತಿ ಮೆರವಣಿಗೆ ಮತ್ತು ಕಾರಣಿಕ (ಭವಿಷ್ಯನುಡಿ) ನಡೆಯುತ್ತದೆ. ಶನಿವಾರ ನಡೆದ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಬೇಕೆಂದು ಸುತ್ತಲಿನ ಹಲವು ಗ್ರಾಮಗಳ ಸಾವಿರಾರು ಭಕ್ತರು ಬಡಿಗೆ, ಬೆಂಕಿ ಹಚ್ಚಿದ ಪಂಜುಗಳಲ್ಲಿ ಮಧ್ಯರಾತ್ರಿಯಿಂದಲೇ ಹೊಡೆದಾಡಿಕೊಂಡರು. ಗಾಯ, ರಕ್ತ ಸೋರಿ ದರೂ ಬಡಿದಾಟ ನಿಲ್ಲಲಿಲ್ಲ. ಕೊನೆಗೆ ಸ್ಥಳೀಯ (ನೇರಣಿಕೆ) ಗ್ರಾಮಸ್ಥರು ಮೂರ್ತಿಯನ್ನು ಉಳಿಸಿಕೊಳ್ಳಲು ಯಶಸ್ವಿಯಾದರು. ಬಡಿದಾಟದಲ್ಲಿ ಗಾಯಗೊಂಡ 17ಕ್ಕೂ ಹೆಚ್ಚು ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. ಭಕ್ತಿಯ ಪರಾಕಾಷ್ಠೆಯ ಸಂಕೇತವೇ ಈ ಹಬ್ಬ.

ಗಾಯಕ್ಕೆ ಬಂಡಾರ ಲೇಪಿಸಿಕೊಂಡು ‘ಮಲ್ಲಯ್ಯ ಉದೋ ಉದೋ ಚಾಂಗ್​ಬಲ ಉದೋ ಮಲ್ಲಯ್ಯ’, ‘ಡುರ್ರೇ ಡುರ್ರ್ ಡುರ್ರ್’ ಎನ್ನುವ ಘೊಷಣೆ ಕೂಗುತ್ತಾ ಹೊಡೆದಾಡುತ್ತಾರೆ.

ಅರ್ಚಕರ ಭವಿಷ್ಯವಾಣಿ

ಇದೇ ವೇಳೆ ಅರ್ಚಕರು ಕಾರಣಿಕ (ಭವಿಷ್ಯ ವಾಣಿ) ನುಡಿದರು. ‘ಶಿವಗಂಗೆ ಪಾರ್ವತಿ ಸವಾರಿ ಮಾಡ್ಯಾರ, ಭೂಲೋಕದಲ್ಲಿ ಧನಸ್ಸು ಹಿಡಿದು ಬೋಪರಾಕ್. 4700 ನಗಳ್ಳಿ, ಜೋಳ 1400, 3-6, 6-3 ಆದೀತು‘ ಎನ್ನುವ ಭವಿಷ್ಯವಾಣಿಯನ್ನು ಅರ್ಚಕರು ಈ ಬಾರಿ ನುಡಿದಿದ್ದಾರೆ. ಶಿವ, ಪಾರ್ವತಿ, ಗಂಗೆ ಧನಸ್ಸು ಹಿಡಿದು ಭೂಲೋಕಕ್ಕೆ ಬರುತ್ತಾರೆ ಎನ್ನುವ ನುಡಿಯನ್ನು ‘ಎಲ್ಲರೂ ಒಗ್ಗಟ್ಟಾಗಿ ದುಷ್ಟರನ್ನು ಸಂಹರಿಸಿ, ಇದು ದೇಶದ ಅಭಿವೃದ್ದಿಗೆ ಪೂರಕ’ ಎಂಬುದಾಗಿ ಭಕ್ತರು ವಿಶ್ಲೇಷಿಸಿದರೆ, ‘ಹತ್ತಿಬೆಳೆಗೆ 4,700 ರೂ. ಬೆಲೆ, ಜೋಳಕ್ಕೆ 1,400 ರೂ. ಮೇಲ್ಪಟ್ಟು ದರ ಸಿಗುತ್ತದೆ. ಮೊದಲು ಕಡಿಮೆಯಾದ ದರಗಳು ನಂತರ ಹೆಚ್ಚಾಗುತ್ತವೆ’ ಎಂದು ರೈತರು ಅರ್ಥೈಸಿಕೊಂಡರು.

Leave a Reply

Your email address will not be published. Required fields are marked *

Back To Top