Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ದೇವನಹಳ್ಳಿ ಭೂಮಿಗೆ ಬಂತು ಬಂಗಾರದ ಬೆಲೆ

Saturday, 09.09.2017, 3:00 AM       No Comments

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಹಾಗೂ ಜಿಲ್ಲಾ ಕೇಂದ್ರವನ್ನಾಗಿ ದೇವನಹಳ್ಳಿ ಸಮೀಪದ ಬೀರಸಂದ್ರ ಗ್ರಾಮವನ್ನು ಸರ್ಕಾರ ಅಭಿವೃದ್ಧಿಪಡಿಸಿದ ವೇಳೆ ದೇವನಹಳ್ಳಿ ಹಾಗೂ ಸುತ್ತ-ಮುತ್ತಲಿನ ಪ್ರದೇಶದ ಜಮೀನು ಬೆಲೆ ಗಗನಕ್ಕೇರಿದ್ದು ಈಗ ಇತಿಹಾಸ. ಈಗ ಮತ್ತೆ ಅದೇ ರೀತಿಯ ಪರಿಸ್ಥಿತಿ ನಿರ್ವಣವಾಗಿದೆ. ಸರ್ಕಾರ ದೇವನಹಳ್ಳಿಗೆ ಚಲ್ಲಘಟ್ಟ ಹಾಗೂ ಹೆಬ್ಬಾಳ ಕಣಿವೆಯ ತ್ಯಾಜ್ಯ ನೀರನ್ನು ಸಂಸ್ಕರಿಸಿ ಹರಿಸುವ ಯೋಜನೆ ಜಾರಿಗೊಳಿಸುತ್ತಿದ್ದಂತೆ ದೇವನಹಳ್ಳಿ ತಾಲೂಕಿನ ಕೃಷಿ ಭೂಮಿಯ ಬೆಲೆ ಮತ್ತಷ್ಟು ಏರಿಕೆ ಕಂಡಿದೆ.

| ಹೊಸಹಟ್ಟಿ ಕುಮಾರ ಬೆಂಗಳೂರು

ಈಗಾಗಲೇ ದೇವನಹಳ್ಳಿ ತಾಲೂಕಿನಲ್ಲಿ ಭೂಮಿಬೆಲೆ ಊಹೆಗೂ ನಿಲುಕದಷ್ಟು ದರ ಏರಿಕೆಯಾಗಿದೆ. ಇದರ ನಡುವೆ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸಿಎಂ ಚಾಲನೆ ನೀಡುತ್ತಿದ್ದಂತೆ ಭೂಮಿ ಬೆಲೆಯಲ್ಲಿ ಏರಿಕೆಯ ಬಿರುಗಾಳಿ ಆರಂಭವಾಗಿದೆ.

ನೀರಾವರಿ ಯೋಜನೆ ಇಲ್ಲದೆ ಮಳೆ ಹಾಗೂ ಅಂತರ್ಜಲವನ್ನು ನಂಬಿ ಕೃಷಿ ನಡೆಸುತ್ತಿದ್ದ ದೇವನಹಳ್ಳಿ ತಾಲೂಕಿನ ಭೂಮಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಿದ್ದು ಶುಕ್ರದೆಸೆ ತಂದಿತು. ನಂತರ ಜಿಲ್ಲಾ ಕೇಂದ್ರ ಘೋಷಣೆ, ಐಟಿಎಂಆರ್ ನಿರ್ವಣಕ್ಕೆ ಜಮೀನು ಗುರುತಿಸುವ ಕೆಲಸ ಆರಂಭವಾಗುತ್ತಿದ್ದಂತೆ ಪ್ರತಿ ಎಕರೆ ಜಮೀನು ಬೆಲೆ 10ರಿಂದ 20 ಲಕ್ಷ ರೂ. ಹೆಚ್ಚಾಯಿತು. ಪ್ರಸ್ತುತ ಎಕರೆ ಜಮೀನಿಗೆ 1ರಿಂದ 1.50 ಕೋಟಿ ರೂಪಾಯಿ ಬೆಲೆ ಇದೆ. ದೇವನಹಳ್ಳಿಯಲ್ಲಿ ಇತ್ತೀಚೆಗೆ ನೀರಾವರಿ ಯೋಜನೆಗೆ ಸಿಎಂ ಚಾಲನೆ ನೀಡಿದ್ದು ಕೂಡ ದರ ಏರಿಕೆಗೆ ಕಾರಣವಾಗಿ ಬೃಹತ್ ರಿಯಾಲ್ಟಿ ಕಂಪನಿಗಳು ಚಿತ್ತ ಹರಿಸಿವೆ.

ನೈಜವಾದ ದಾಖಲೆ ಇರುವ ಕಂದಾಯ ಜಮೀನಿಗೆ ರಿಯಲ್ ಎಸ್ಟೇಟ್ ಕಂಪನಿಗಳು ಹಿಂದು-ಮುಂದು ನೋಡದೆ ಹಣ ಸುರಿಯುತ್ತಿವೆ. ರೈತರೂ ಇದನ್ನೇ ನೆಪ ಮಾಡಿಕೊಂಡು ದರವನ್ನು ಹೆಚ್ಚಿಸತೊಡಗಿದ್ದಾರೆ.

ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ದೇವನಹಳ್ಳಿ ತಾಲೂಕಿನ ಬಹುತೇಕ ಪ್ರದೇಶ ಒಣ ಭೂಮಿ. ಇಲ್ಲಿ ಕೃಷಿ ಮಾಡಬೇಕಾದರೆ ಅಂತರ್ಜಲ ಒಂದೇ ನೀರಿನ ಮೂಲವಾಗಿತ್ತು. ಅಂತರ್ಜಲ ಮಟ್ಟ 1,500 ಅಡಿಗೆ ಕುಸಿದು ಅಷ್ಟು ಆಳದಿಂದ ನೀರು ಮೇಲೆತ್ತುವುದು ಕಷ್ಟವಾಗಿತ್ತು. ಹೀಗಾಗಿ ರೈತರು ಭೂಮಿ ಮಾರಾಟ ಮಾಡಿ ನಗರ ಪ್ರದೇಶಗಳಿಗೆ ತೆರಳುತ್ತಿದ್ದರು. ಕೆಲವರು ಕೊಳವೆ ಬಾವಿ ಕೊರೆಸಿ ವ್ಯವಸಾಯ ಮಾಡುತ್ತಿದ್ದರು. ಅಂತರ್ಜಲ ಕೂಡ ಕುಸಿದ ಹಿನ್ನೆಲೆಯಲ್ಲಿ ರೈತರು ಅನಿವಾರ್ಯವಾಗಿ ರೈತರು ರಿಯಾಲ್ಟಿ ಕಂಪನಿಗಳಿಗೆ ಜಮೀನು ಮಾರಾಟ ಮಾಡಲು ಮುಂದಾಗಿದ್ದಾರೆ.

ತಲೆಎತ್ತುತ್ತಿರುವ ಐಟಿಎಂಆರ್

ಸರ್ಕಾರ ಗ್ರಾಮಾಂತರ ಜಿಲ್ಲಾ ಕೇಂದ್ರ ಘೊಷಣೆ ಮಾಡಿರುವ ಬಳಿಯಲ್ಲೇ ಐಟಿ ಕಾರಿಡಾರ್ ಆರಂಭವಾಗುತ್ತಿದೆ. ವಿಶ್ವನಾಥಪುರ ಹಾಗೂ ಬೀರಸಂದ್ರ ಗ್ರಾಮದ ಬಳಿ 1,200 ಎಕರೆ ಪ್ರದೇಶದಲ್ಲಿ ಐಟಿಎಂಆರ್(ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್​ವೆುಂಟ್ ಆಂಡ್ ರಿಸರ್ಚ್) ತಲೆ ಎತ್ತುತ್ತಿದೆ. ಇದಕ್ಕಾಗಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ ಸುಮಾರು 150 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಕೂಡ ನಿರ್ವಣವಾಗಲಿದೆ. ಬೀರಸಂದ್ರ ಗ್ರಾಮಕ್ಕೆ ಹೊಂದಿಕೊಂಡತೆ ಸುತ್ತಲಿನ ಪ್ರದೇಶಗಳಲ್ಲಿ ಹಲವು ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಶಾಲೆಗಳು ತಲೆ ಎತ್ತಿವೆ. ಇಲ್ಲಿಗೆ ರಾಷ್ಟ್ರದ ವಿವಿಧ ಕಡೆಗಳಿಂದ ವಿದ್ಯಾರ್ಥಿಗಳು ಕಲಿಯಲು ಆಗಮಿಸುತ್ತಿದ್ದಾರೆ. ಅಲ್ಲದೆ ವಿವಿಧ ಬಡಾವಣೆಗಳು ಕೂಡ ನಿರ್ವಣವಾಗಿವೆ. ಯಲಹಂಕದಿಂದ ಆರಂಭವಾಗುವ ಬಡಾವಣೆಗಳು ಚಪ್ಪರದಕಲ್ಲು ಗ್ರಾಮದವರೆಗೂ ನಿರ್ವಣವಾಗಿವೆ. ಸಾವಿರಾರು ಎಕರೆ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಕಂಪನಿಗಳು ನಿವೇಶನ ನಿರ್ಮಾಣ ಮಾಡಿವೆ. ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಿ ಕೊಳವೆ ಬಾವಿಗಳಲ್ಲಿ ನೀರು ಸಂಗ್ರಹವಾಗುವುದರಿಂದ ಮತ್ತೊಮ್ಮೆ ಕೃಷಿ ಚಟುವಟಿಕೆ ಗರಿಗೆದರಲಿದೆ. ಕೃಷಿ ಜತೆಗೆ ರಿಯಾಲ್ಟಿ ಕ್ಷೇತ್ರ ಕೂಡ ಚೇತರಿಕೆಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

Leave a Reply

Your email address will not be published. Required fields are marked *

Back To Top