Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :

ದೇವನಹಳ್ಳಿಯಲ್ಲಿ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಖಚಿತ

Saturday, 20.05.2017, 3:00 AM       No Comments

ನವದೆಹಲಿ: ಮುಂದಿನ ಎರಡು ವರ್ಷದ ಒಳಗಾಗಿ ಬೆಂಗಳೂರಿನಲ್ಲಿ ಸುಸಜ್ಜಿತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ನಿರ್ವಣವಾಗಲಿದೆ ಎಂದು ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿಕೆ ಖನ್ನಾ ಹೇಳಿದ್ದಾರೆ. ಎನ್​ಸಿಎ ನಿರ್ವಣಕ್ಕಾಗಿ ನೀಡಿದ ಜಾಗದ ಕುರಿತು ಕರ್ನಾಟಕ ಸರ್ಕಾರದ ಜತೆ ನಡೆದಿದ್ದ ದೀರ್ಘಕಾಲದ ಕಲಹವನ್ನು ಬಿಸಿಸಿಐ ಬಗೆಹರಿಸಿಕೊಂಡಿದೆ.

‘ದೀರ್ಘಕಾಲದ ವಿವಾದವನ್ನು ಬಗೆಹರಿಸಿಕೊಂಡಿದ್ದಕ್ಕೆ ಬಿಸಿಸಿಐ ಹಾಗೂ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳು. ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಲು ಹೆಚ್ಚಿನ ಪ್ರಯತ್ನ ಪಟ್ಟ ಅಮಿತಾಭ್ ಚೌಧರಿಗೆ ವಿಶೇಷ ಅಭಿನಂದನೆ’ ಎಂದು ಸಿಕೆ ಖನ್ನಾ ತಿಳಿಸಿದ್ದಾರೆ. ಬಿಸಿಸಿಐ ಕೊನೆಗೂ ಎನ್​ಸಿಎಗಾಗಿ ತನ್ನದೇ ಆದ ಆಸ್ತಿಯನ್ನು ಹೊಂದಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲೂ ಬಿಸಿಸಿಐ ತನ್ನದೇ ಆದ ಹಲವು ಯೋಜನೆಗಳನ್ನು ಹೊಂದಿದೆ. ಶಿಫಾರಸು ಮಾಡಿರುವ ಹೊಸ ಎನ್​ಸಿಎ ಪ್ರಾಜೆಕ್ಟ್, ದೇವನಹಳ್ಳಿಯ ಏರೋಸ್ಪೇಸ್​ನಲ್ಲಿ ನಿರ್ವಣವಾಗಲಿದೆ. ಬಹುಶಃ ಮುಂದಿನ ಎರಡು ವರ್ಷದ ಒಳಗಾಗಿ ಎನ್​ಸಿಎ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ. ಇದರಿಂದ ಎನ್​ಸಿಎ ಬೆಂಗಳೂರಿನಿಂದ ಬೇರೆಡೆ ಸ್ಥಳಾಂತರಗೊಳ್ಳುವ ಸಾಧ್ಯತೆಯೂ ದೂರವಾಗಿದೆ.

ವಿಶ್ವದರ್ಜೆಯ ವ್ಯವಸ್ಥೆಗಳನ್ನು ಅಕಾಡೆಮಿಯಲ್ಲಿ ನೀಡಲು ಬಿಸಿಸಿಐ ಯೋಜನೆ ರೂಪಿಸಿದೆ. 25 ಎಕರೆ ಜಾಗ ಬಿಸಿಸಿಐಗೆ ಹೆಸರಿಗೆ ಬಂದ ಬೆನ್ನಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದಿದ್ದಾರೆ. ಗುರುವಾರ ಜಾಗದ ಕುರಿತಾಗಿ ಸರ್ಕಾರದೊಂದಿಗೆ ಕಾಗದಪತ್ರದ ಕೆಲಸವನ್ನು ಬಿಸಿಸಿಐ ಮುಗಿಸಿದೆ. ನೋಂದಣಿ ಪತ್ರಕ್ಕೆ ಬಿಸಿಸಿಐನ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಹಿ ಹಾಕಿದರು. ಅವರೊಂದಿಗೆ ಮುಖ್ಯ ವ್ಯವಸ್ಥಾಪಕ ಎಂವಿ ಶ್ರೀಧರ್ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸಂಜಯ್ ದೇಸಾಯಿ ಉಪಸ್ಥಿತರಿದ್ದರು.

ಹೈಕೋರ್ಟ್ ತಡೆ ನೀಡಿತ್ತು

ಕೆಐಎಡಿಬಿಯಿಂದ 2013ರಲ್ಲಿ ಬಿಸಿಸಿಐ ದೇವನಹಳ್ಳಿ ಸಮೀಪವೇ 49 ಎಕರೆ ಜಾಗ ಖರೀದಿಸಿತ್ತು. ಆದರೆ, ಈ ನೋಂದಣಿ ಅಕ್ರಮ ಎಂದು ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದರಿಂದ, ಕರ್ನಾಟಕ ಹೈಕೋರ್ಟ್ ಕೂಡ ವಿಚಾರಣೆ ನಡೆಸಿ ಈ ಒಪ್ಪಂದ ಅಕ್ರಮ ಎಂದು ತೀರ್ಪು ನೀಡಿತ್ತು. ಪ್ರಸ್ತುತ ಎನ್​ಸಿಎ, ಚಿನ್ನಸ್ವಾಮಿ ಸ್ಟೇಡಿಯಂನ ಆವರಣದಲ್ಲಿದೆ.

ಧರ್ಮಶಾಲಾಗೆ ಶಿಫ್ಟ್ ಮಾಡುವ ಚಿಂತನೆಯಲ್ಲಿತ್ತು…

ವಿವಾದ ಬಗೆಹರಿಯುವ ಲಕ್ಷಣ ಕಾಣದೇ ಇದ್ದುದರಿಂದ ಬಿಸಿಸಿಐ, ಎನ್​ಸಿಎಯನ್ನು ಬೆಂಗಳೂರಿನಿಂದ ಸ್ಥಳಾಂತರ ಮಾಡುವ ಚಿಂತನೆಯನ್ನೂ ಮಾಡಿತ್ತು. ಧರ್ಮಶಾಲಾ ಮೊದಲ ಆಯ್ಕೆಯ ತಾಣವೆಂದೂ ಪ್ರಕಟಿಸಲಾಗಿತ್ತು. ಅದರೊಂದಿಗೆ ಮೊಹಾಲಿ ಹಾಗೂ ಪುಣೆ ಕೂಡ ರೇಸ್​ನಲ್ಲಿದ್ದವು.

Leave a Reply

Your email address will not be published. Required fields are marked *

Back To Top