Friday, 19th October 2018  

Vijayavani

ನಾಡಿನೆಲ್ಲೆಡೆ ವಿಜಯದಶಮಿ ಸಡಗರ-ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ-ಸಾಂಸ್ಕೃತಿಕ ನಗರಿಯತ್ತ ಜನಸ್ತೋಮ        ತೂಕ ಹೆಚ್ಚಿಸಿಕೊಂಡ ಅರ್ಜುನ & ಟೀಂ-ಅಂಬಾರಿ ಹೊರಲು ಕ್ಯಾಪ್ಟನ್ ಗ್ರೀನ್‌ ಸಿಗ್ನಲ್-ಮೈಸೂರು ನಗರಿಗೆ ಬಿಗಿ ಬಂದೋಬಸ್ತ್​​​        ಡಿಕೆಶಿ ತಪ್ಪೊಪ್ಪಿಗೆಗೆ ಕಾಂಗ್ರೆಸ್​​​​​​ನಲ್ಲಿ ಭಿನ್ನಮತ-ಕನಕಪುರ ನಾಯಕನ ವಿರುದ್ಧ ದಿಗ್ಗಜರ ಆಕ್ರೋಶ        ಶಬರಿಮಲೆ ಸುತ್ತ ನಿಲ್ಲದ ಪ್ರತಿಭಟನೆ-ಸುಪ್ರೀಂಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಸಭೆ-ಅಯ್ಯಪ್ಪನ ಪೂಜೆಗೆ ಕರ್ನಾಟಕದ ಅರ್ಚಕ ನೇಮಕ        ಅಮೆರಿಕ ಅಧ್ಯಕ್ಷನಿಂದ ಮತ್ತೊಂದು ಶಾಕ್​-ಎಚ್​​1 ಬಿ ವೀಸಾ ನಿಯಮ ಮತ್ತಷ್ಟು ಬಿಗಿ ಮಾಡಲು ಸಿದ್ಧತೆ-ಅನಿವಾಸಿ ಭಾರತೀಯರಿಗೆ ಶಾಕ್​        ಕಲೆಕ್ಷನ್​​​​​​ನಲ್ಲಿ ಧೂಳೆಬ್ಬಿಸುತ್ತಿದ್ಧಾನೆ ವಿಲನ್​-ಮೊದಲ ದಿನವೇ ಇಪ್ಪತ್ತುವರೆ ಕೋಟಿ ಸಂಗ್ರಹ​-ಸ್ಯಾಂಡಲ್​​​ವುಡ್​​​​ ದಾಖಲೆಗಳೆಲ್ಲ ಪೀಸ್​ ​​       
Breaking News

ದೆಹಲಿ ಟೆಸ್ಟ್ ಜಯ ತಪ್ಪಿಸಿದ ಧನಂಜಯ

Thursday, 07.12.2017, 3:05 AM       No Comments

ನವದೆಹಲಿ: ಮೊದಲ ಇನಿಂಗ್ಸ್​ನಲ್ಲಿ ತಂಡದ ಅತ್ಯಂತ ಅನುಭವಿ ಆಟಗಾರರು ಭಾರತಕ್ಕೆ ಪ್ರತಿರೋಧ ನೀಡಿದರೆ, 2ನೇ ಇನಿಂಗ್ಸ್​ನಲ್ಲಿ ಶ್ರೀಲಂಕಾದ ಭವಿಷ್ಯದ ತಾರೆಯರು ಟೀಮ್ ಇಂಡಿಯಾದ ಗೆಲುವಿಗೆ ಅಡ್ಡಿಯಾದರು.

11ನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್​ನ 3ನೇ ಶತಕ ಸಿಡಿಸಿದ ಧನಂಜಯ ಡಿ ಸಿಲ್ವಾ ಹಾಗೂ ಪದಾರ್ಪಣಾ ಪಂದ್ಯದಲ್ಲಿ ರೋಶನ್ ಡಿ ಸಿಲ್ವಾ ಬಾರಿಸಿದ ಅರ್ಧಶತಕದ ಸಾಹಸದಿಂದ ಶ್ರೀಲಂಕಾ ತಂಡ ದೆಹಲಿ ಟೆಸ್ಟ್ ಪಂದ್ಯದಲ್ಲಿ ಹೋರಾಟದ ಆಟವಾಡಿ ಡ್ರಾ ಮಾಡಿಕೊಂಡಿತು. ಇದರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡ ವಿರಾಟ್ ಕೊಹ್ಲಿ ಟೀಮ್ ವಿಶ್ವದಾಖಲೆಯ ಸತತ 9 ಟೆಸ್ಟ್ ಸರಣಿ ಗೆಲುವಿನ ದಾಖಲೆಯನ್ನು ಸರಿಗಟ್ಟಿತು. ಭಾರತವಲ್ಲದೆ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳೂ ಸತತ 9 ಟೆಸ್ಟ್ ಸರಣಿಗಳನ್ನು ಗೆದ್ದಿವೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳುವ ಏಕೈಕ ಗುರಿಯೊಂದಿಗೆ ಬ್ಯಾಟಿಂಗ್ ಮಾಡಿದ ಲಂಕಾ ಅದರಲ್ಲಿ ಸಂಪೂರ್ಣ ಯಶ ಕಂಡಿತು. 3 ವಿಕೆಟ್​ಗೆ 31 ರನ್​ಗಳಿಂದ ಅಂತಿಮ ದಿನದ ಆಟ ಆರಂಭಿಸಿದ ಲಂಕಾ, 52.2 ಓವರ್​ಗಳಲ್ಲಿ 5 ವಿಕೆಟ್​ಗೆ 246 ರನ್ ಗಳಿಸಿದ್ದ ವೇಳೆ ಉಭಯ ತಂಡಗಳ ನಾಯಕರು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು. ಮೊದಲ ಇನಿಂಗ್ಸ್​ನಲ್ಲಿ 163 ರನ್ ಮುನ್ನಡೆ ಪಡೆದಿದ್ದ ಭಾರತ ತಂಡ 2ನೇ ಇನಿಂಗ್ಸ್​ನಲ್ಲಿ 5 ವಿಕೆಟ್​ಗೆ 246 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದಲ್ಲದೆ, ಲಂಕಾಗೆ 410 ರನ್​ಗಳ ಸವಾಲು ನೀಡಿತ್ತು.

ಧನಂಜಯ ಡಿ ಸಿಲ್ವ ಬಾರಿಸಿದ ಮೊತ್ತ, ಭಾರತದಲ್ಲಿ ಪ್ರವಾಸಿ ತಂಡದ ಬ್ಯಾಟ್ಸ್​ಮನ್ ಪಂದ್ಯದ 4ನೇ ಇನಿಂಗ್ಸ್​ನಲ್ಲಿ ಬಾರಿಸಿದ ಗರಿಷ್ಠ ಮೊತ್ತವೆನಿಸಿದೆ. 1987-88ರಲ್ಲಿ ವಿಂಡೀಸ್​ನ ವಿವಿಯನ್ ರಿಚರ್ಡ್ಸ್ ಕೋಟ್ಲಾ ಟೆಸ್ಟ್ ನಲ್ಲಿಯೇ ಅಜೇಯ 109 ರನ್ ಬಾರಿಸಿದ್ದು ದಾಖಲೆಯಾಗಿತ್ತು.

ಭಾರತದಲ್ಲಿ ನಡೆದ ಟೆಸ್ಟ್​ನ ಚೇಸಿಂಗ್ ಮಾಡುವ ವೇಳೆ ಪ್ರವಾಸಿ ತಂಡದ ಬ್ಯಾಟ್ಸ್​ಮನ್ ಶತಕ ಬಾರಿಸಿದ್ದು ಇದು ನಾಲ್ಕನೇ ಬಾರಿ. 2007-08ರಲ್ಲಿ ಈಡನ್ ಗಾರ್ಡನ್ಸ್​ನಲ್ಲಿ ನಡೆದ ಟೆಸ್ಟ್​ನಲ್ಲಿ ಪಾಕಿಸ್ತಾನದ ಯೂನಿಸ್ ಖಾನ್ ಶತಕ ಬಾರಿಸಿದ್ದರು.

3 ಪಂದ್ಯಗಳ ಏಕದಿನ ಸರಣಿ

ಮೊದಲ ಪಂದ್ಯ: ಭಾನುವಾರ

ಎಲ್ಲಿ: ಧರ್ಮಶಾಲಾ, ಆರಂಭ: ಬೆಳಗ್ಗೆ 11.30

ಧನಂಜಯ ಡಿಸಿಲ್ವಾ ಶತಕ

ಕಳೆದ ಪಂದ್ಯದಲ್ಲಿ ಟೆಸ್ಟ್ ಇತಿಹಾಸದ ತನ್ನ ಅತ್ಯಂತ ಕೆಟ್ಟ ಸೋಲನ್ನು ಎದುರಿಸಿದ್ದ ಶ್ರೀಲಂಕಾ, ಕೋಟ್ಲಾ ಟೆಸ್ಟ್ ಡ್ರಾ ಮಾಡಿಕೊಂಡ ರೀತಿ ಗೆಲುವಿನಷ್ಟೇ ಸಿಹಿ ನೀಡಿದೆ. ಧನಂಜಯ ಡಿ ಸಿಲ್ವಾ (119 ರನ್, 219 ಎಸೆತ, 15 ಬೌಂಡರಿ, 1 ಸಿಕ್ಸರ್), ಪ್ರಥಮ ದರ್ಜೆ ಕ್ರಿಕೆಟ್​ನ ಅಪಾರ ಅನುಭವಿ ರೋಶನ್ ಸಿಲ್ವಾ (74 ರನ್, 154 ಎಸೆತ, 11 ಬೌಂಡರಿ) ಭರ್ಜರಿ ನಿರ್ವಹಣೆಯಿಂದಾಗಿ ಭಾರತ ತಂಡ ಅಂತಿಮ ದಿನ 87 ಓವರ್ ಎಸೆದರೂ ಕೇವಲ 2 ವಿಕೆಟ್ ಉರುಳಿಸಲಷ್ಟೇ ಯಶ ಕಂಡಿತು. ಮೊದಲ ಇನಿಂಗ್ಸ್​ನ ಶತಕ ಸಾಧಕರಾದ ಏಂಜೆಲೋ ಮ್ಯಾಥ್ಯೂಸ್ (1) ಹಾಗೂ ನಾಯಕ ದಿನೇಶ್ ಚಾಂಡಿಮಲ್ (36 ರನ್, 90 ಎಸೆತ, 2 ಬೌಂಡರಿ) ವಿಕೆಟ್​ಗಳನ್ನು ಕ್ರಮವಾಗಿ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಬುಟ್ಟಿಗೆ ಹಾಕಿಕೊಂಡರು. ಚಾಂಡಿಮಲ್ ಹಾಗೂ ಧನಂಜಯ 112 ರನ್​ಗಳ ಜತೆಯಾಟವಾಡಿದರೆ, ಧನಂಜಯ ಹಾಗೂ ರೋಶನ್ ಸಿಲ್ವಾ 58 ರನ್ ಒಟ್ಟುಗೂಡಿಸಿದರು. ಈ ವೇಳೆ ಧನಂಜಯ ಗಾಯದಿಂದಾ ನಿವೃತ್ತಿಯಾಗಿದ್ದರಿಂದ, ರೋಶನ್ ಸಿಲ್ವ ಹಾಗೂ ನಿರೋಶನ್ ಡಿಕ್​ವೆಲ್ಲಾ (44 ರನ್, 72 ಎಸೆತ, 6 ಬೌಂಡರಿ) ಮುರಿಯದ 6ನೇ ವಿಕೆಟ್​ಗೆ 94 ರನ್ ಕೂಡಿಸಿದರು. ಲಂಕಾ ಬ್ಯಾಟಿಂಗ್​ಗೆ ಪಿಚ್ ಕೂಡ ಸಹಕಾರ ನೀಡಿತು. ಸಾಂಪ್ರದಾಯಿಕವಾಗಿ ಭಾರತದ 5ನೇ ದಿನದ ಟೆಸ್ಟ್ ಪಿಚ್​ಗಳು ಸ್ಪಿನ್​ಗೆ ಅಪಾರ ನೆರವು ನೀಡುತ್ತವೆ. ಅದರ ಸ್ವಲ್ಪ ಲಕ್ಷಣವೂ ಸ್ಪಿನ್ ಖೆಡ್ಡಾ ಎನಿಸಿಕೊಂಡ ಕೋಟ್ಲಾ ಮೈದಾನದಲ್ಲಿ ಕಾಣಲಿಲ್ಲ. ಅಂತಿಮ ದಿನ ಭಾರತ ಪ್ರವಾಸಿ ತಂಡದ ಬ್ಯಾಟ್ಸ್​ಮನ್​ಗಳಿಗೆ ನಾಲ್ಕು ಜೀವದಾನ ನೀಡಿತು. -ಏಜೆನ್ಸೀಸ್

ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ

ಭಾರತ ಪ್ರಥಮ ಇನಿಂಗ್ಸ್: 7 ವಿಕೆಟ್​ಗೆ 536 ಡಿ

ಶ್ರೀಲಂಕಾ ಪ್ರಥಮ ಇನಿಂಗ್ಸ್: 373

ಭಾರತ ದ್ವಿತೀಯ ಇನಿಂಗ್ಸ್: 5 ವಿಕೆಟ್​ಗೆ 246 ಡಿ.

ಶ್ರೀಲಂಕಾ ದ್ವಿತೀಯ ಇನಿಂಗ್ಸ್:

(ಗೆಲುವಿನ ಗುರಿ: 410 ರನ್)

103 ಓವರ್​ಗಳಲ್ಲಿ 5 ವಿಕೆಟ್​ಗೆ 299

(ಮಂಗಳವಾರ 3 ವಿಕೆಟ್​ಗೆ 31)

ಧನಂಜಯ ಡಿಸಿಲ್ವಾ ಗಾಯಗೊಂಡು ನಿವೃತ್ತಿ 119

ಮ್ಯಾಥ್ಯೂಸ್ ಸಿ ರಹಾನೆ ಬಿ ಜಡೇಜಾ 1

ದಿನೇಶ್ ಚಾಂಡಿಮಲ್ ಬಿ ಅಶ್ವಿನ್ 36

ರೋಶನ್ ಸಿಲ್ವಾ ಅಜೇಯ 74

ನಿರೋಶನ್ ಡಿಕ್​ವೆಲ್ಲಾ ಅಜೇಯ 44

ಇತರೆ: 7, ವಿಕೆಟ್ ಪತನ: 3-31, 4-35, 5-147, 5-205 (ಡಿಸಿಲ್ವ ಗಾಯಗೊಂಡು ನಿವೃತ್ತಿ). ಬೌಲಿಂಗ್: ಇಶಾಂತ್ ಶರ್ಮ 13-2-32-0, ಶಮಿ 15-6-50-1, ಅಶ್ವಿನ್ 35-3-126-1, ಜಡೇಜಾ 38-13-81-3, ವಿಜಯ್ 1-0-3-0, ಕೊಹ್ಲಿ 1-0-1-0.

ಭಾರತದ ಸತತ 9 ಟೆಸ್ಟ್ ಸರಣಿ ಗೆಲುವು

ವರ್ಷ- ಎದುರಾಳಿ- ಅಂತರ(ಪಂದ್ಯ)

2015- ಶ್ರೀಲಂಕಾ*- 2-1 (3)

2015-ದಕ್ಷಿಣ ಆಫ್ರಿಕಾ- 3-0 (4)

2016- ವೆಸ್ಟ್ ಇಂಡೀಸ್*- 2-0 (4)

2016- ನ್ಯೂಜಿಲೆಂಡ್- 3-0 (3)

2016- ಇಂಗ್ಲೆಂಡ್- 4-0 (5)

2017- ಬಾಂಗ್ಲಾದೇಶ- 1-0 (1)

2017- ಆಸ್ಟ್ರೇಲಿಯಾ- 2-1 (4)

2017- ಶ್ರೀಲಂಕಾ*- 3-0 (3)

2017- ಶ್ರೀಲಂಕಾ- 1-0 (3)

Leave a Reply

Your email address will not be published. Required fields are marked *

Back To Top