Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ದೆಹಲಿ ಅಂಗಳಕ್ಕೆ ಅನರ್ಹತೆ ಪ್ರಕರಣ

Thursday, 14.09.2017, 3:03 AM       No Comments

ಬೆಂಗಳೂರು: ವಿಧಾನಪರಿಷತ್ ಸದಸ್ಯರ ಅನರ್ಹತೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನ ಹಿರಿಯ ವಕೀಲರು ಹಾಗೂ ಕೇಂದ್ರ ಚುನಾವಣೆ ಆಯೋಗದ ಅಭಿಪ್ರಾಯ ಪಡೆಯಲು ಸಭಾಪತಿ ಮುಂದಾಗಿದ್ದಾರೆ.

ವಿಧಾನಪರಿಷತ್​ನ ಎಂಟು ಸದಸ್ಯರು ಬಿಬಿಎಂಪಿ ಸೇರಿ ತಮ್ಮ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಲ್ಲಿ ಮತ ಹಾಕಿದ ಪ್ರಕರಣಕ್ಕೆ ರ್ತಾಕ ಅಂತ್ಯ ಕಾಣಿಸುವುದು ಹೇಗೆ ಎಂಬ ಜಿಜ್ಞಾಸೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ನಿರ್ಧರಿಸಿದ್ದಾರೆ. ಈಗಾಗಲೇ ಚುನಾವಣೆ ಆಯೋಗದ ರಾಜ್ಯ ಮುಖ್ಯ ಆಯುಕ್ತರು, ಕೇಂದ್ರ ಆಯೋಗಕ್ಕೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದಾರೆ. ಆದರೆ, ಕೇಂದ್ರದಿಂದ

ಯಾವುದೇ ಉತ್ತರ ಬಂದಿಲ್ಲ. ಏತನ್ಮಧ್ಯೆ ಈ ಪ್ರಕರಣ ದೇಶದಲ್ಲಿಯೇ ಮೊದಲಾಗಿರುವುದರಿಂದ ಕಾನೂನು ತಜ್ಞರ ಸಲಹೆ ಪಡೆಯಲು ತೀರ್ವನಿಸಿದ್ದಾರೆ.

ರಘು ಆಚಾರ್ ಹೊರತುಪಡಿಸಿ 7 ಸದಸ್ಯರು ಪ್ರಜಾಪ್ರತಿನಿಧಿ

ಕಾಯ್ದೆ ವ್ಯಾಪ್ತಿಯಡಿ ಎರಡು ಕಡೆ ಮತದಾನ ಮಾಡಿದ್ದರೆ ಅಕ್ಷಮ್ಯ ಅಪರಾಧ. ಇದಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ ಈ ವಿಚಾರದಲ್ಲೂ ಸ್ಪಷ್ಟತೆ ಇಲ್ಲ. ಕೆಲವು ಸದಸ್ಯರ ಮಾಹಿತಿ ಸಭಾಪತಿ ಕಚೇರಿ ತಲುಪಿದ್ದು, ಎರಡು ಕಡೆ ಮತದಾನ ಮಾಡಿದ್ದಾರೆ ಎನ್ನಲಾಗಿದೆ.

ಸದಸ್ಯರು ಮತದಾನ ಉದ್ದೇಶಕ್ಕಾಗಿಯೇ ವಿಳಾಸ ಬದಲಿಸಿ ಕೊಂಡಿದ್ದಾರೆ ಎಂಬುವುದನ್ನು ಸಾಬೀತು ಮಾಡುವುದು ಹೇಗೆ ಎಂಬುದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ಪ್ರಶ್ನೆ. ಆಯೋಗ ಯಾವುದೇ ರೀತಿ ತೀರ್ಮಾನ ಕೈಗೊಂಡರೂ ಅದು ಭವಿಷ್ಯದ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಆಯ್ಕೆ ಸಂದರ್ಭ ಪರಿಣಾಮ ಬೀರುವ ಕಾರಣ, ಎಚ್ಚರಿಕೆ ಹೆಜ್ಜೆ ಇಡುವ ಅನಿವಾರ್ಯತೆ ಎದುರಾಗಿದೆ.

 

ಪ್ರಕರಣವನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದೆ. ಸ್ಥಳೀಯ ಅಧಿಕಾರಿಗಳ ಜತೆ ರ್ಚಚಿಸಿದ್ದು, ದೆಹಲಿಯಿಂದ ಮಾಹಿತಿ ಬಂದಿಲ್ಲ.

| ಡಿ.ಎಚ್. ಶಂಕರಮೂರ್ತಿ ಮೇಲ್ಮನೆ ಸಭಾಪತಿ

Leave a Reply

Your email address will not be published. Required fields are marked *

Back To Top