Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ದುಡಿಮೆಯೇ ಸನ್ಮಾರ್ಗ

Saturday, 11.08.2018, 3:02 AM       No Comments

ಬ್ಬ ಶ್ರೀಮಂತ ಯಾವಾಗಲೂ ತನ್ನ ಮಕ್ಕಳಿಗೆ ಕೆಲಸ ಮಾಡಿ, ಸುಮ್ಮನೆ ಕೂರಬೇಡಿ ಎನ್ನುತ್ತಿದ್ದ. ಆದರೆ, ಆ ಮಕ್ಕಳು ಕೆಲಸ ಮಾಡಲು ಮುಂದಾಗುತ್ತಿರಲಿಲ್ಲ. ಒಂದು ದಿನ ಆತ ತನ್ನ ಚಿಕ್ಕ ಮಗನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕೆಲಸ ಮಾಡುವಂತೆ ತಿಳಿಸಿದ. ಆ ಶ್ರೀಮಂತನ ಸ್ನೇಹಿತ ಇದನ್ನು ನೋಡಿ ‘ನಿನ್ನ ಮಗ ಹೊಲದಲ್ಲಿ ಕೆಲಸ ಮಾಡಿ ಏನು ಸಾಧಿಸಬೇಕಿದೆ? ನಿನಗ್ಯಾಕೆ ಇಂಥ ಹುಚ್ಚು? ನಿನ್ನ ಮಗ ಎಷ್ಟೇ ಕೆಲಸ ಮಾಡಿದರೂ ಬೆಳೆ ಹೇಗೆ ಬರಬೇಕೋ ಹಾಗೆಯೇ ಬರುತ್ತವೆ. ಚೆನ್ನಾಗಿ ಬೆಳೆ ತೆಗೆಯಬೇಕೆಂದಿದ್ದರೆ ಕೆಲಸಗಾರರಲ್ಲಿ ಹೇಳಿದರೆ ಇನ್ನಷ್ಟು ಕೆಲಸ ಮಾಡುವುದಿಲ್ಲವೇ?’ಎಂದು ಕೇಳಿದ. ತನ್ನ ಸ್ನೇಹಿತನ ಕೆಲಸ ಅವನಿಗೆ ಸರಿ ಕಾಣಲಿಲ್ಲ. ಆಗ ಶ್ರೀಮಂತ ಹೇಳಿದ, ‘ಬೆಳೆ ಬೆಳೆಸುವುದು ನನ್ನ ಉದ್ದೇಶವಲ್ಲ, ಮಗನನ್ನು ಬೆಳೆಸಬೇಕಿದೆ’ಎಂದ. ಮಗನಿಗೂ ತಂದೆಯ ಮಾತಿನ ಮರ್ಮ ಅರಿವಾಯಿತು. ಕಷ್ಟಪಟ್ಟು ದುಡಿಯಲು ಆರಂಭಿಸಿದ. ಬಡವನಾಗಿ ಹುಟ್ಟಿ, ಕಷ್ಟದಿಂದ ಬೆಳೆದಿದ್ದ ಆ ತಂದೆಗೆ ದುಡಿಮೆಯ ಮಹತ್ವ ಗೊತ್ತಿತ್ತು. ಅದನ್ನು ತನ್ನ ಮಕ್ಕಳೂ ಗೊತ್ತು ಮಾಡಿಕೊಳ್ಳಲಿ ಎಂದಷ್ಟೇ ಆತ ಬಯಸಿದ್ದ. ಅಲ್ಲದೇ ಮಕ್ಕಳು ಶ್ರಮ ವಹಿಸಿ ಕೆಲಸ ಮಾಡುವುದನ್ನು, ಕಷ್ಟಗಳನ್ನು ಎದುರಿಸುವುದನ್ನು ಕಲಿಯಬೇಕು ಎನ್ನುವುದು ಅವನ ಉದ್ದೇಶವಾಗಿತ್ತು. ನಮ್ಮಲ್ಲಿ ಎಷ್ಟು ಮಂದಿಗೆ ದುಡಿಮೆಯ ಬೆಲೆ ಗೊತ್ತಿದೆ ಹೇಳಿ? ಬಸ್​ಸ್ಟ್ಯಾಂಡು, ಚಾ ಅಂಗಡಿಯ ಮೇಲೆ, ಅರಳೀಕಟ್ಟೆಯ ಸುತ್ತಮುತ್ತ ಕುಳಿತುಕೊಂಡು ಸುಮ್ಮನೆ ಊರ ಪಂಚಾಯ್ತಿಯ ಮಾತುಗಳನ್ನು, ಕೆಲಸಕ್ಕೆ ಬಾರದ ರಾಜಕೀಯ ವಿಶ್ಲೇಷಣೆ ಮಾಡುತ್ತ ಸಮಯ ಕಳೆಯುವವರನ್ನು ನಿಮ್ಮೂರಲ್ಲೇ ನೀವು ನೋಡಿರಬಹುದು. ಅಂಥ ಮಾತುಗಳು, ಹಾಗೆ ಸಮಯ ಕಳೆಯುವುದು ಕೆಲವೊಮ್ಮೆ ಅತ್ಯಾಕರ್ಷಕವಾಗಿ ಕಂಡಿರಲೂಬಹುದು. ಆದರೆ, ಮೈ ಬಗ್ಗಿಸಿ ದುಡಿಯದೇ ಇದ್ದರೆ ಏನಾಗುತ್ತದೆ ಹೇಳಿ? ಯಾವುದೇ ಕಾಲಕ್ಕೂ ಏನನ್ನೂ ಸಾಧಿಸಲು, ಶ್ರಮಿಕರಾಗಲು, ಬದುಕಿನ ಸಾರ್ಥಕತೆ ಅರಿಯಲು ಸಾಧ್ಯವೇ ಆಗುವುದಿಲ್ಲ. ದುಡಿಯದಿದ್ದರೆ ಬದುಕಿಗೆ ಅಗತ್ಯಗಳನ್ನು ಹೇಗೆ ಪೂರೈಸಿಕೊಳ್ಳುವುದು? ಅದಕ್ಕೆ ಬೇಕಾದ ಹಣವೆಲ್ಲಿಂದ ಸಿಗುತ್ತದೆ? ಜೀವನದ ಅಗತ್ಯಗಳನ್ನು ತೀರಿಸಿಕೊಳ್ಳುವುದು ಹೇಗೆ? ಅಷ್ಟಕ್ಕೂ ದುಡಿಮೆ ಕೇವಲ ದುಡ್ಡಿನ ತಾಯಿ ಮಾತ್ರವಲ್ಲ, ಅದು ಬದುಕಿನ ಸನ್ಮಾರ್ಗ ಹಾಗೂ ರಾಜಮಾರ್ಗ. ದುಡಿಮೆ ಎನ್ನುವ ರಾಜಮಾರ್ಗದಲ್ಲಿ ನಡೆದರೆ ಯಾವತ್ತೂ, ಯಾರಿಗೂ ಹೆದರಬೇಕಾದ ಪ್ರಶ್ನೆಯೇ ಇರುವುದಿಲ್ಲ. ಶ್ರೀಮಂತಿಕೆ ಇವತ್ತು ಇರುತ್ತದೆ, ನಾಳೆ ಇಲ್ಲವಾಗಬಹುದು. ಇರುವುದನ್ನು ಉಳಿಸಿಕೊಳ್ಳಲಿಕ್ಕೆ, ಇಲ್ಲದಿರುವುದನ್ನು ಗಳಿಸಿಕೊಳ್ಳಲಿಕ್ಕೆ ಶ್ರಮಪಟ್ಟು ದುಡಿಯುವುದು ಗೊತ್ತಿರಬೇಕು. ಏಕೆಂದರೆ, ಕುಳಿತು ಉಂಡರೆ ಕುಡಿಕೆ ಹೊನ್ನು ಕೂಡ ಸಾಲದು. ಅಲ್ಲವೇ? ಶ್ರೀಮಂತಿಕೆಯಿದ್ದರೂ ದುಡಿತದ ಬೆಲೆ ಮಕ್ಕಳಿಗೆ ತಿಳಿಯಬೇಕು ಎಂದು ಆ ಶ್ರೀಮಂತ ಪ್ರಯತ್ನ ಪಟ್ಟಿದ್ದುದು ಅದಕ್ಕಾಗಿಯೇ ಆಗಿತ್ತು. ನಾವೂ ಅದರ ಮರ್ಮ ಅರಿತು ದುಡಿಯೋಣ, ಅದು ಚಿಕ್ಕ ಕೆಲಸ, ಇದು ದೊಡ್ಡದು ಎನ್ನುವ ಮನೋಭಾವ ಬೇಡ. ಶ್ರಮ ಶ್ರಮವೇ, ಅದಕ್ಕೆ ಯಾವತ್ತೂ ಬೆಲೆಯಿದೆ.

Leave a Reply

Your email address will not be published. Required fields are marked *

Back To Top