Wednesday, 26th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ದುಃಖ ತೋಡಿಕೊಂಡ ಸಂಭಾಷಣೆ ವೈರಲ್

Wednesday, 10.01.2018, 3:03 AM       No Comments

ಚಿಕ್ಕಮಗಳೂರು: ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಧನ್ಯಶ್ರೀ ಅವರ ತಾಯಿ ದೂರವಾಣಿ ಯಲ್ಲಿ ದುಃಖ ತೋಡಿಕೊಂಡ ಸಂಭಾಷಣೆಯ ತುಣುಕೊಂದು ವಾಟ್ಸ್​ಆಪ್​ನಲ್ಲಿ ಹರಿದಾಡುತ್ತಿದೆ.

ಬಂಧಿತ ಅನಿಲ್ ಬಗ್ಗೆ ತಾವು ಯಾವುದೇ ದೂರು ನೀಡಿಲ್ಲ. ಡೆತ್​ನೋಟನ್ನು ಪೊಲೀಸರೇ ತಮ್ಮೆದುರು ಓದಿ ಹೇಳಿದ್ದು, ಅದರಲ್ಲಿ ಯಾರ ಹೆಸರಿರಲಿಲ್ಲ ಎಂದು ಆಕೆ ತಾಯಿ ವ್ಯಕ್ತಿಯೊಬ್ಬನ ಜತೆ ದೂರವಾಣಿಯಲ್ಲಿ ನಡೆಸಿರುವ ಸಂಭಾಷಣೆಯಲ್ಲಿ ಹೇಳಿದ್ದಾರೆ.

ಬಜರಂಗದಳ ಹೆಸರಿನಲ್ಲಿ ಬೆಳ್ತಂಗಡಿಯವ ನೆಂದು ಮೊಬೈಲ್​ನಲ್ಲಿ ಪರಿಚಯಿಸಿಕೊಂಡ ಸಂತೋಷ ಒಮ್ಮೆ ಮಂಗಳೂರಿನವನು, ಮತ್ತೊಮ್ಮೆ ಉಜಿರೆಯವನು ಎಂದು ಪದೇಪದೆ ಕರೆ ಮಾಡಿ ‘ನೀನು ಮುಸ್ಲಿಂ ಯುವಕನನ್ನು ಬೆಂಬಲಿಸುತ್ತೀಯಾ?’ ಎಂದು ಬೆದರಿಕೆ ಹಾಕುತ್ತಿದ್ದ. ತಮ್ಮ ಪತಿ ಆತನ ಜತೆ ಮಾತನಾಡಿದಾಗಲೂ ‘ನಿಮ್ಮ ಮಗಳನ್ನು ಮುಸ್ಲಿಮನಿಗೆ ಕೊಟ್ಟು ಮದುವೆ ಮಾಡಲು ಮುಂದಾಗಿದ್ದೀರಿ. ನಿಮ್ಮ ಕಾಲಿಗೆ ಬೀಳುತ್ತೇವೆ, ಮುಸ್ಲಿಮರನ್ನು ಬೆಂಬಲಿಸಬೇಡಿ. ನಿಮಗೆ ಹಿಂದು ಹುಡುಗರು ಸಿಗಲಿಲ್ಲವೇ..’ ಎಂದೆಲ್ಲ ಹೇಳುತ್ತಿದ್ದ. ಈ ಕಾರಣಕ್ಕೆ ನಾವು ಧನ್ಯಶ್ರೀ ಬಳಿ ಇದ್ದ ಮೊಬೈಲ್ ಕಿತ್ತಿಟ್ಟುಕೊಂಡೆವು ಎಂದು ತಿಳಿಸಿದ್ದಾರೆ.

ಸಂತೋಷ ಪದೇಪದೆ ಬಜರಂಗದಳ ಹೆಸರು ಹೇಳುತ್ತಿದ್ದ ಕಾರಣ ನನ್ನ ಮಗಳೇ ನ್ಯಾಯ ಸಿಗಲಿ ಎನ್ನುವ ಕಾರಣಕ್ಕೆ ಅಧ್ಯಕ್ಷರನ್ನು ಕಳಿಸಿ ಎಂದು ಕೇಳಿಕೊಂಡಿದ್ದಳು. ಆದರೆ ಅನಿಲ್ ಸೇರಿ ಬಂದಿದ್ದ ನಾಲ್ವರಲ್ಲಿ ಸಂತೋಷನಿಂದಾಗುತ್ತಿದ್ದ ಕಿರುಕುಳದ ಬಗ್ಗೆ ತೋಡಿಕೊಂಡಿದ್ದೆವು. ಅಷ್ಟು ಬಿಟ್ಟರೆ ಯಾರ ಬಗ್ಗೆಯೂ ತಾವು ದೂರು ನೀಡಿಲ್ಲ. ಆದರೆ ಪದೇಪದೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಸಂತೋಷ್​ನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆದರಿಕೆ ಸಂದೇಶ ವೈರಲ್

ಮೂಡಿಗೆರೆ: ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೆ ವಾಟ್ಸ್​ಆಪ್ ಗ್ರೂಪೊಂದರಲ್ಲಿ ಹುಡುಗಿಯರಿಗೆ ಕೊನೆಯ ಸಂದೇಶ ಎನ್ನುವ ಬೆದರಿಕೆ ಧಾಟಿಯ ಸಂದೇಶ ಸಂಘಟನೆಯೊಂದರ ಹೆಸರಿನಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

Back To Top