Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ದಿನಪತ್ರಿಕೆ ಓದುವ ಹವ್ಯಾಸ ಬೆಳಸಿಕೊಳ್ಳಿ

Thursday, 12.07.2018, 3:43 AM       No Comments

ತ್ಯಾಮಗೊಂಡ್ಲು: ನಿತ್ಯ ದಿನಪತ್ರಿಕೆ ಓದುವ ಹವ್ಯಾಸ ಬೆಳಸಿಕೊಂಡರೆ ಸಾಮಾನ್ಯ ಜ್ಞಾನದ ಜತೆಗೆ ಪ್ರಚಲಿತ ವಿದ್ಯಮಾನಗಳ ಅರಿವು ಉಂಟಾಗುತ್ತದೆ ಎಂದು ಮಣ್ಣೆ ಗ್ರಾಪಂ ಅಧ್ಯಕ್ಷ ಎಂ.ಗಂಗಣ್ಣ ಹೇಳಿದರು.

ಮಣ್ಣೆ ಗ್ರಾಪಂ ವತಿಯಿಂದ ಬುಧವಾರ ಮಣ್ಣೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ

ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಿ ಮಾತನಾಡಿದರು. ನಿತ್ಯ ಪತ್ರಿಕೆ ಓದುವುದರಿಂದ ಭಾಷೆಯ ಮೇಲೆ ಹಿಡಿತ ಸಿಗುತ್ತದೆ ಎಂದರು.

ಕಳೆದ ಸಾಲಿನಲ್ಲಿಯೂ ವಿದ್ಯಾರ್ಥಿ ಉದ್ಯೋಗ ಮಿತ್ರ ಉಚಿತವಾಗಿ ವಿತರಿಸಿದ್ದರಿಂದ ಹಲವು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿರುವುದನ್ನು ತಿಳಿದು ಸಂತೋಷವಾಯಿತು. ಪತ್ರಿಕೆ ಜತೆಗೆ ಶಿಕ್ಷಕರೂ ಅಭಿನಂದನೆಗೆ ಅರ್ಹರು ಎಂದರು.

ವಿದ್ಯಾರ್ಥಿ ಮಿತ್ರ ಸಂಚಿಕೆಯಲ್ಲಿ ಸಿಗುವ ಮಾಹಿತಿ ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ಅಭ್ಯಾಸ ನಡೆಸಬೇಕು. ಉಚಿತವಾಗಿ ಪತ್ರಿಕೆ ಸಿಗುತ್ತದೆ ಎಂದು ಅಸಡ್ಡೆ ಮಾಡದೆ ಅಭ್ಯಾಸಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ತಾಪಂ ಸದಸ್ಯ ನಾಗಭೂಷಣ್ ಮಾತನಾಡಿ, ಮಣ್ಣೆ ಗ್ರಾಪಂ ಸದಸ್ಯರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಪತ್ರಿಕೆ ನೀಡುತ್ತಿರುವುದು ಸಂತೋಷ. ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದರು.

ಮುಖ್ಯಶಿಕ್ಷಕ ಶಿವಾನಂದ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸಮನಾದ ಪೈಪೋಟಿ ನೀಡಲು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಹಕಾರಿ ಎಂದರು.

ಗ್ರಾಪಂ ಸದಸ್ಯ ಕರಿಗಿರಿಯಪ್ಪ, ಲೋಕೇಶ್, ಸೌಮ್ಯ, ಪಾರ್ವತಮ್ಮ ಎಸ್​ಡಿಎಂಸಿ ಅಧ್ಯಕ್ಷೆ ಕಲ್ಪನಾ, ಶಿಕ್ಷಕರಾದ ಶಾಂತಯ್ಯ, ಶಾಂತಮ್ಮ, ಲೀಲಾವತಿ, ರಾಘವೇಂದ್ರ, ಜಯರಾಂ, ಸುಜಾತಾ, ಹನುಮಂತರಾಜು ಇದ್ದರು.

Leave a Reply

Your email address will not be published. Required fields are marked *

Back To Top