Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

ದಿಗ್ವಿಜಯ್ ಹೇಳಿಕೆಗೆ ಅತೃಪ್ತಿ

Friday, 21.04.2017, 3:00 AM       No Comments

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಾಗುವುದು ಎಂಬ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನಗೊಂಡಿದ್ದಾರೆ.

ದಿಗ್ವಿಜಯ್ ರಾಜ್ಯಕ್ಕೆ ಭೇಟಿ ನೀಡಿದ ಪ್ರತಿ ಸಂದರ್ಭ ದಲ್ಲಿಯೂ ಸಿದ್ದರಾಮಯ್ಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ರೀತಿ ಏಕೆ ಮಾಡುತ್ತಾರೋ ಎಂಬ ಬಗ್ಗೆ ಪಕ್ಷದ ಹೈಕಮಾಂಡ್ ಗಮನಕ್ಕೆ ತರಲು ಮೂಲ ಕಾಂಗ್ರೆಸಿಗರು ನಿರ್ಧರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲೂ ದಿಗ್ವಿಜಯ್ ಹೇಳಿಕೆ ಬಗ್ಗೆಯೇ ಚರ್ಚೆ ನಡೆಸಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್ ಜತೆ ಚರ್ಚೆ ನಡೆಸುವ ಮೂಲಕ ಮೂಲ ಕಾಂಗ್ರೆಸಿಗರ ಹಿತಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಸಾಮೂಹಿಕ ನಾಯಕತ್ವದ ಬಗ್ಗೆ ದಿಗ್ವಿಜಯ್ ಹೇಳಬೇಕೆ ಹೊರತು ಒಬ್ಬ ವ್ಯಕ್ತಿ ನಾಯಕತ್ವದಲ್ಲಿ ಚುನಾವಣೆಗೆ ಹೋಗುವುದಾಗಿ ಹೇಳಬಾರದು. ಪಕ್ಷದಲ್ಲಿ ಅನೇಕ ಮುಖಂಡರಿದ್ದಾರೆ. ಅವರೆಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವ ಕೆಲಸವಾಗಬೇಕು. ದಿಗ್ವಿಜಯ್ ಹೇಳಿಕೆ ಮೂಲ ಕಾಂಗ್ರೆಸಿಗರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ ಎಂದು ಮೂಲಗಳು ಖಚಿತಪಡಿಸಿವೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡುವ ಸಂದರ್ಭ ದಿಗ್ವಿಜಯ್ ಈ ರೀತಿ ಮಾತನಾಡಿರಲಿಲ್ಲ. ಆದರೆ ಹುಬ್ಬಳ್ಳಿಗೆ ಹೋಗುತ್ತಿದ್ದಂತೆ ಸಿದ್ದರಾಮಯ್ಯ ಪರವಾಗಿ ಹೇಳಿಕೆ ನೀಡಿದ್ದರು. ನಂತರ ಕೆಲ ಸಚಿವರು ಹಾಗೂ ಮುಖಂಡರು ಸಹ ಅಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರಂತೂ ಮುಂದಿನ ಸಿಎಂ ನಾನೇ ಎಂಬ ಮಾತು ಹೇಳುತ್ತಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗದೇ ಇದ್ದರೆ ಪರಿಸ್ಥಿತಿ ಕಷ್ಟವಾಗುತ್ತದೆ. ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಅಶಿಸ್ತು ಬರಬಾರದು ಎಂಬುದನ್ನು ಹೈಕಮಾಂಡ್​ಗೆ ಮನವರಿಕೆ ಮಾಡಿಕೊಡಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.


 ಸಿಎಂ ಹುದ್ದೆ ಹೈ ನಿರ್ಧಾರ

ಕಲಬುರಗಿ: ಮುಂದಿನ ಚುನಾವಣೆಯಲ್ಲಿ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಹೇಳಿರುವುದರಲ್ಲಿ ತಪ್ಪೇನಿದೆ? ಹೌದು, ಮುಂದಿನ ಚುನಾವಣೆ ಪಕ್ಷದ ಅಧ್ಯಕ್ಷರು, ಸಿಎಂ ನೇತೃತ್ವದಲ್ಲಿ ನಡೆಯಲಿದೆ. ಆದರೆ, ಸಿಎಂ ಹುದ್ದೆ ನಿರ್ಧಾರ ವಿಚಾರ ಪಕ್ಷದ ಹೈಕಮಾಂಡ್​ಗೆ ಬಿಟ್ಟದ್ದು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಎರಡು ಉಪ ಚುನಾವಣೆ ಗೆದ್ದಿದ್ದೇವೆ. ಆದರೂ ಬದಲಾವಣೆ ಮಾಡೋದು, ಬಿಡೋದು ಹೈಕಮಾಂಡ್​ಗೆ ಬಿಟ್ಟದ್ದು ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಹೊಂದಾಣಿಕೆ ಇಲ್ಲ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸಿಎಂ, ಪಕ್ಷದ ಅಧ್ಯಕ್ಷರು, ನಾಯಕರ ನೇತೃತ್ವದಲ್ಲಿ ಮುಂಬರುವ ಚುನಾವಣೆ ಎದುರಿಸಲಿದ್ದೇವೆ ಎಂದು ಖರ್ಗೆ ತಿಳಿಸಿದರು.


ಪರಿಸ್ಥಿತಿ ಆಧರಿಸಿ ನೇಮಕ

ಚಿಕ್ಕಮಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಸಮಯವಿದ್ದು, ರಾಜಕೀಯ ಪರಿಸ್ಥಿತಿ ಆಧರಿಸಿ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ಕೈಗೊಳ್ಳುವ ತೀರ್ವನಕ್ಕೆ ಬದ್ಧನಾಗಿರುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಚುನಾವಣಾ ಕಣಕ್ಕೆ ಇಳಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆಂತರಿಕವಾಗಿ ನಡೆದಿದೆ. ವೀಕ್ಷಕರು ಪ್ರತಿಯೊಂದು ಕ್ಷೇತ್ರಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ರ್ಚಚಿಸಲಿದ್ದಾರೆ. 124 ಶಾಸಕರಿದ್ದು, ಅವರೆಲ್ಲರಿಗೂ ಟಿಕೆಟ್ ಕೊಡಬೇಕೇ ಎಂಬ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಕ್ರೋಡೀಕರಿಸಿ ವೀಕ್ಷಕರು ರಾಜ್ಯ ಸಮಿತಿಗೆ ವರದಿ ನೀಡಲಿದ್ದಾರೆ. ದೆಹಲಿಯಲ್ಲಿ ನಡೆಯುವ ಸ್ಕ್ರೀನಿಂಗ್ ಕಮಿಟಿ ಪರಿಶೀಲನೆ ಮಾಡಿದ ನಂತರ ಕೇಂದ್ರ ಸಮಿತಿ ಪ್ರಕಟಿಸಲಿದೆ ಎಂದು ತಿಳಿಸಿದರು. ಶಾಸಕ ಅಂಬರೀಶ್ ಅವರನ್ನು ಸಿಎಂ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಅವರನ್ನು ಪುನಃ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆಗೆ ‘ನನಗೆ ಗೊತ್ತಿಲ್ಲ’ ಎಂದು ಹೇಳಿದರು.


ಎಸ್ಪಿಗೆ ಗದರಿದ ಸಿಎಂ

ಮಂಡ್ಯ: ಮಳವಳ್ಳಿ ಪ್ರವಾಸಿ ಮಂದಿರದಲ್ಲಿ ಗುರುವಾರ ಮಧ್ಯಾಹ್ನ ಊಟ ಮುಗಿಸಿದ ಸಿಎಂ ಸಿದ್ದರಾಮಯ್ಯ ಶಾಂತಿ ಕಾಲೇಜು ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಸರ್ಕಾರಿ ಬಸ್ ನಿಲ್ದಾಣದ ಬಳಿ ಸಿಎಂ ಅವರ ಕಾರಿಗೆ ಅಡ್ಡಲಾಗಿ ನಿಂತು ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಘೊಷಣೆ ಕೂಗಿದರು. ಅಲ್ಲದೆ, ಮುಖಂಡನೊಬ್ಬ ಅಡ್ಡಲಾಗಿ ಮಲಗಿ ಬಿಟ್ಟ. ಕೂಡಲೇ ಪೊಲೀಸರು ಆತನನ್ನು ಎಳೆದು ಕಾರು ಮುಂದೆ ಸಾಗಲು ಅನುವು ಮಾಡಿಕೊಟ್ಟರು. ಇದರಿಂದ ಕೆಂಡಾಮಂಡಲವಾದ ಸಿಎಂ ವೇದಿಕೆಗೆ ತೆರಳಿ ಆಸೀನರಾಗುತ್ತಿದ್ದಂತೆ ಎಸ್ಪಿ ಸುಧೀರ್​ಕುಮಾರ್ ರೆಡ್ಡಿ ಅವರನ್ನು ಕರೆಸಿಕೊಂಡು ‘ಏನು ಮಾಡುತ್ತಿದ್ದೀರಿ ನೀವು? ಅವರಿಗೆ ಪ್ರತಿಭಟಿಸಲು ಅವಕಾಶ ಮಾಡಿಕೊಟ್ಟಿದ್ದೀರಾ?’ ಎಂದು ಗದರಿದರು.

Leave a Reply

Your email address will not be published. Required fields are marked *

Back To Top