Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ದಾವೂದ್ ಆಸ್ತಿ ರೂ. 11.5 ಕೋಟಿಗೆ ಹರಾಜು

Wednesday, 15.11.2017, 3:00 AM       No Comments

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ದಕ್ಷಿಣ ಮುಂಬೈನ ಮೂರು ಆಸ್ತಿಗಳು ಮಂಗಳವಾರ ಹರಾಜಾಗಿವೆ. ಬಿಡ್​ನಲ್ಲಿ ಅತಿಹೆಚ್ಚು ಮೊತ್ತ ನಮೂದಿಸಿದ್ದ ಸೈಫಿ ಬುರ್ಹಾನಿ ಅಪ್​ಲಿಫ್ಟ್​ಮೆಂಟ್ ಟ್ರಸ್ಟ್ 11.5 ಕೋಟಿ ರೂ.ಗೆ ಆಸ್ತಿಗಳನ್ನು ಖರೀದಿಸಿದೆ. ರೌನಕ್ ಅಫ್ರೋಜ್ ಅಲಿಯಾಸ್ ದೆಹಲಿ ಝೈಕಾ ಹೋಟೆಲ್ 4.53 ಕೋಟಿ ರೂ.ಗೆ, ಶಬನಮ್ ಗೆಸ್ಟ್ ಹೌಸ್ 3.52 ಕೋಟಿ ರೂ.ಗೆ ಮತ್ತು ದಾಮರ್​ವಾಲಾದಲ್ಲಿನ ಕಟ್ಟಡದ ಆರು ಮಳಿಗೆಗಳು 3.53 ಕೋಟಿ ರೂಪಾಯಿಗೆ ಮಾರಾಟವಾಗಿದೆ.

ಎಸ್​ಎಎಫ್​ಇಎಂಎ (ಕಳ್ಳಸಾಗಣೆ ದಾರರು ಮತ್ತು ವಿದೇಶಿ ವಿನಿಮಯ ಬದಲಾವಣೆಗಾರರು) ಆಸ್ತಿ ಮುಟ್ಟುಗೋಲು ಕಾಯ್ದೆ ಅನ್ವಯ ವಿತ್ತ ಸಚಿವಾಲಯ ಹರಾಜಿಗೆ ಆದೇಶಿಸಿತ್ತು. ಖಾಸಗಿ ಹರಾಜು ನಿರ್ವಹಣೆ ಕಂಪನಿ ಇಂಡಿಯನ್ ಮರ್ಚೆಂಟ್ ಚೇಂಬರ್ಸ್ ಇ-ಹರಾಜು ಮತ್ತು ಸಾರ್ವಜನಿಕ ಹರಾಜು ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಿದೆ.

ಭೇಂಡಿ ಕಟ್ಟಡ ದುರಂತದ ಹೊಣೆ: 2009ರಿಂದ ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ಕಾರ್ಯಾರಂಭಿಸಿದ ಸೈಫಿ ಬುರ್ಹಾನಿ ಅಪ್​ಲಿಫ್ಟ್ ಮೆಂಟ್ ಟ್ರಸ್ಟ್ (ಎಸ್​ಬಿಯುಟಿ) ಭೇಂಡಿ ಬಜಾರ್ ಪ್ರದೇಶದ ಪುನರ್ ಅಭಿವೃದ್ಧಿ ಯೋಜನೆಯನ್ನು ಕೇಂದ್ರೀಕರಿಸಿದೆ. ಸ್ಥಳೀಯರ ಅನುಕೂಲಕ್ಕಾಗಿ ಬೊಹ್ರಾ ಸಮುದಾಯದ ಡಾ. ಸೈಯೇದ್ನಾ ಮೊಹಮ್ಮದ್ ಬುರ್ಹಾನುದ್ದೀನ್ ಟ್ರಸ್ಟ್ ಸ್ಥಾಪಿಸಿದ್ದರು. ಆದರೆ ಆಗಸ್ಟ್​ನಲ್ಲಿ ಭೇಂಡಿ ಬಜಾರ್​ನಲ್ಲಿನ ಕಟ್ಟಡವೊಂದು ಕುಸಿದು 22 ಮಂದಿ ಮೃತರಾದ ಪ್ರಕರಣದಲ್ಲಿ ಮಹಾರಾಷ್ಟ್ರ ಗೃಹ ನಿರ್ಮಾಣ ಮಂಡಳಿ ಸೈಫಿ ಟ್ರಸ್ಟ್ ಮೇಲೆ ಆರೋಪ ಹೊರಿಸಿತ್ತು. ಶಿಥಿಲ ಕಟ್ಟಡ ವಾಸಕ್ಕೆ ಯೋಗ್ಯವಲ್ಲ ಎಂದರೂ ಟ್ರಸ್ಟ್ ನಿರ್ಲಕ್ಷ್ಯದಿಂದ ಕಟ್ಟಡ ಕೆಡವಿರಲಿಲ್ಲ ಎಂದಿತ್ತು.

ಗುಲ್ಶನ್ ಹತ್ಯೆ ಆರೋಪಿಗೆ ದಾವೂದ್ ರಕ್ಷೆ: 1997ರಲ್ಲಿ ದುಷ್ಕರ್ವಿುಗಳ ಗುಂಡಿಗೆ ಬಲಿಯಾದ ಬಾಲಿವುಡ್​ನ ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಟೀ-ಸಿರೀಸ್ ಕಂಪನಿ ಸಂಸ್ಥಾಪಕ ಗುಲ್ಶನ್ ಕುಮಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಕ್ಷಣೆಗೆ ದಾವೂದ್ ನಿಂತಿರುವುದು ದೃಢಪಟ್ಟಿದೆ. ಆರೋಪಿ ಸದೀಂ ಸೈಫಿ ಲಂಡನ್​ನಲ್ಲಿ ಅಪಾಯದಲ್ಲಿದ್ದಾನೆ. ಅವನನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಏರ್ಪಾಡು ಮಾಡಿದ್ದೇವೆ ಎಂದು ದಾವೂದ್ ಮತ್ತು ಆತನ ಸಹಚರನ ನಡುವಿನ ಸಂಭಾಷಣೆ ತುಣುಕುಗಳು ಬಯಲಾಗಿವೆ. ಬಿಗ್ ಉಸ್ತಾದ್ ಎಂದು ಸೈಫಿ ಎಂದು ಸಂಬೋಧಿಸುವ ದುಬೈನಲ್ಲಿ ಅವಿತಿರುವ ದಾವೂದ್ ಸಹಚರ ಸಂಕ್ಷಿಪ್ತ ಸಂಭಾಷಣೆ ನಡೆಸಿದ್ದಾನೆ. ಮತ್ತೊಂದು ಧ್ವನಿಮುದ್ರಿತ ತುಣುಕಿನಲ್ಲಿ ದಾವೂದ್ ಪತ್ನಿ ಮೆಹಜಾಬಿನ್ ಶೇಖ್ ದುಬೈನಲ್ಲಿರುವ ಹ್ಯಾಂಡ್​ಬ್ಯಾಗ್ ಶೋರೂಂನಲ್ಲಿ ತಮ್ಮ ನೆಚ್ಚಿನ ಬ್ಯಾಗ್ ಕುರಿತು ವಿಚಾರಿಸಲು ದಾವೂದ್ ಸಹಚರನಿಗೆ ಸೂಚಿಸುತ್ತಿರುವುದು ಬಹಿರಂಗವಾಗಿದೆ. -ಏಜೆನ್ಸೀಸ್

ನಮ್ಮ ಭೇಂಡಿ ಬಜಾರ್ ಮರು ಅಭಿವೃಧಿ್ಧ ಯೋಜನೆ ವ್ಯಾಪ್ತಿಯಲ್ಲಿ ಹರಾಜಿಗಿರಿಸಲಾಗಿದ್ದ ಆಸ್ತಿಗಳಿದ್ದವು. ವಾಸಕ್ಕೆ ಯೋಗ್ಯವಾದ ಸ್ಥಿತಿಯಲ್ಲಿ ಕಟ್ಟಡಗಳಿರಲಿಲ್ಲ. ಹಾಗಾಗಿ ಕಟ್ಟಡ ಬೀಳಿಸಿ ಯೋಜನೆ ವಿಸ್ತರಿಸಲು ಚಿಂತಿಸಿದ್ದೆವು. ಅದರಂತೆ ಬಿಡ್​ನಲ್ಲಿ ಮೊತ್ತ ನಮೂದಿಸಿ ಖರೀದಿಸಿದ್ದೇವೆ.

| ಸೈಫಿ ಟ್ರಸ್ಟ್ ವಕ್ತಾರ

ಯಾವ್ಯಾವ ಆಸ್ತಿ

· ಶಬನಮ್ ಅತಿಥಿ ಗೃಹ: ಭೇಂಡಿ ಬಜಾರ್​ನ ಯಾಕೂಬ್ ರಸ್ತೆಯಲ್ಲಿರುವ ಎರಡು ಮಹಡಿ ಕಟ್ಟಡ. ಸರ್ಕಾರ ನಿಗದಿಪಡಿಸಿದ್ದ ಮೊತ್ತ 1.23 ಕೋಟಿ ರೂ.

· ದಮರ್​ವಾಲಾ ಕಟ್ಟಡ: ಪಾಕ್ಮೋಡಿಯಾ ರಸ್ತೆಯಲ್ಲಿರುವ ಈ ಕಟ್ಟಡದಲ್ಲಿ ದಾವೂದ್ ಕುಟುಂಬ 80ರ ದಶಕದಲ್ಲಿ ವಾಸವಿತ್ತು. ದಾವೂದ್ ಬಲಗೈ ಬಂಟ ಕಸ್ಕರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಇದೇ ಕಟ್ಟಡದಿಂದ ‘ಡಿ’ ಗ್ಯಾಂಗ್​ನ ಎಲ್ಲ ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದ. ಸರ್ಕಾರ ನಿಗದಿಪಡಿಸಿದ ಮೊತ್ತ 1.55 ಕೋಟಿ ರೂ.

· ರೌನಕ್ ಅಫ್ರೋಜ್ ರೆಸ್ಟೊರೆಂಟ್: 2015ರಲ್ಲಿ ರೆಸ್ಟೊರೆಂಟ್​ನ ಕೆಲವು ಭಾಗಗಳನ್ನು ಕೆಡವಲಾಗಿತ್ತು. 4.28 ಕೋಟಿ ರೂ.ಗೆ ಮಾಜಿ ಪತ್ರಕರ್ತ ಎಸ್. ಬಾಲಕೃಷ್ಣನ್ ಇದನ್ನು ಖರೀದಿಸಿದ್ದರು. ಆದರೆ ದಾವೂದ್ ಗ್ಯಾಂಗ್​ನಿಂದ ಬೆದರಿಕೆ ಕರೆ ಬಂದ ಹಿನ್ನೆಲೆ ಹಿಂಜರಿದ ಕಾರಣ ಪುನಃ ಹರಾಜಿಗೆ ಇಡಲಾಗಿತ್ತು. ಸರ್ಕಾರ ನಿಗದಿಪಡಿಸಿದ್ದ ಮೊತ್ತ 1.18 ಕೋಟಿ ರೂ.

ಸಾರ್ವಜನಿಕ ಶೌಚಗೃಹ ನಿರ್ವಿುಸಲು ಹರಾಜಿನಲ್ಲಿ ಹಿಂದು ಮಹಾಸಭಾ ಭಾಗಿ

ಹಿಂದು ಮಹಾಸಭಾ ಕೂಡ ಹರಾಜಿನಲ್ಲಿ ಭಾಗವಹಿಸಿತ್ತು. ಭಯೋತ್ಪಾದಕರ ಅಟ್ಟಹಾಸ ಅಂತ್ಯಕ್ಕಾಗಿ ದಾವೂದ್ ಆಸ್ತಿ ಖರೀದಿಸಿ, ಅದನ್ನು ಸಾರ್ವಜನಿಕ ಶೌಚಗೃಹವಾಗಿ ಬಳಕೆಗೆ ಬಿಡಲಾಗುವುದು ಸಂಘಟನೆ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದರು. ದಾವೂದ್ ಗ್ಯಾಂಗ್​ನಿಂದ ಚಕ್ರಪಾಣಿಗೆ ಹಲವು ಬೆದರಿಕೆ ಕರೆಗಳು ಬಂದಿದ್ದವು. ಈ ಹಿನ್ನೆಲೆ ಅಧಿಕ ಮೊತ್ತ ನಮೂದಿಸಲು ಸೈಫಿ ಟ್ರಸ್ಟ್ ಮೇಲೆ ದಾವೂದ್ ಒತ್ತಡ ತಂದಿರಬಹುದು ಎಂದು ಮುಂಬೈ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Back To Top