Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ದಾಳಿಂಬೆ ಬೆಳೆದು ಮಾದರಿಯಾದ ರೈತ!

Wednesday, 11.07.2018, 10:03 PM       No Comments

ರೋಣ: ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತ ಬರಗಾಲದ ಮಧ್ಯೆಯೂ ಪಟ್ಟಣದ ರೈತರೊಬ್ಬರು ತಮ್ಮ ಜಮೀನಿನಲ್ಲಿ ದಾಳಿಂಬೆ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಪಟ್ಟಣದ ರೈತ ಬಸಣ್ಣ ರಡ್ಡೇರ ಎಂಬುವರೇ ಈ ಸಾಧನೆ ಮಾಡಿರುವುದು. ನೀರಿನ ಮಹತ್ವ ಅರಿತಿರುವ ಬಸಣ್ಣ, ಒಂದು ಹನಿ ನೀರನ್ನೂ ವ್ಯರ್ಥ ಮಾಡದೆ ಸಮರ್ಪಕವಾಗಿ ಬಳಸಿ, ದಾಳಿಂಬೆ ಬೆಳೆದಿದ್ದಾರೆ.  ಈ ಹಿಂದೆ ತಮ್ಮ ಜಮೀನಿನಲ್ಲಿ ಹೆಸರು, ಗೋವಿನಜೋಳ, ಕಡಲೆ ಬೆಳೆ ಬೆಳೆಯುತ್ತಿದ್ದರು. ಆದರೆ, ಹಾಕಿದ ಬಂಡವಾಳ ಕೂಡ ಲಭಿಸದೆ ನಷ್ಟದಲ್ಲಿದ್ದರು. ಹೀಗಾಗಿ, ತೋಟಗಾರಿಕೆ ಬೆಳೆಯತ್ತ ಮುಖ ಮಾಡಿದ ಅವರು, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ 65 ಸಾವಿರ ರೂಪಾಯಿ ಪ್ರೋತ್ಸಾಹ ಧನದಲ್ಲಿ 3 ಎಕರೆ ಜಮೀನಿನಲ್ಲಿ 1,250 ದಾಳಿಂಬೆ ಗಿಡಗಳನ್ನು ನೆಟ್ಟರು. 2014ರಲ್ಲಿ ದಾಳಿಂಬೆ ಫಸಲು ಕೈಗೆ ಬಂದಿತು. ಅದರಿಂದ 4 ಲಕ್ಷ ರೂ. ಆದಾಯ ಗಳಿಸಿದರು. ಅದೇ ರೀತಿ 2015ರಲ್ಲಿ 4.5 ಲಕ್ಷ ರೂ., 2016ರಲ್ಲಿ 4 ಲಕ್ಷ ರೂ. ಹಾಗೂ 2017ರಲ್ಲಿ 5 ಲಕ್ಷ ರೂ. ಆದಾಯ ಗಳಿಸಿದ್ದಾರೆ. 2016ರಲ್ಲಿ ಮತ್ತೆ 80 ಸಾವಿರ ರೂ. ಪ್ರೋತ್ಸಾಹಧನ ಪಡೆದು 1,250 ದಾಳಿಂಬೆ ಗಿಡಗಳನ್ನು ನೆಟ್ಟರು. ಈ ಗಿಡಗಳು ಕೂಡ 2018ರ ಸೆಪ್ಟೆಂಬರ್​ನಲ್ಲಿ ಫಲ ನೀಡಲಿವೆ. ಒಟ್ಟು ಆರು ಎಕರೆ ದಾಳಿಂಬೆ ಫಸಲಿನಿಂದ ಈ ಬಾರಿ 12 ಲಕ್ಷ ರೂ. ಆದಾಯ ಬರಬಹುದು ಎನ್ನುತ್ತಾರೆ ರೈತ ಬಸಣ್ಣ ರಡ್ಡೇರ.

2017ರಲ್ಲಿ ಜಮೀನಿನಲ್ಲಿರುವ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ತೋಟಗಾರಿಕೆ ಇಲಾಖೆಯಿಂದ 75 ಸಾವಿರ ಪ್ರೋತ್ಸಾಹ ಧನ, ಹನಿ ನೀರಾವರಿ ಅಳವಡಿಸಲು 50 ಸಾವಿರ ರೂ. ಹಾಗೂ ಪ್ರತಿ ವರ್ಷ ರೋಗಬಾಧೆಗೆ ಅನುಗುಣವಾಗಿ 20 ರಿಂದ 30 ಸಾವಿರ ರೂ.ಗಳವರೆಗೆ ಔಷಧೋಪಚಾರಕ್ಕೆ ಪ್ರೋತ್ಸಾಹಧನ ಪಡೆದಿದ್ದಾರೆ.

ಕೈ ಹಿಡಿದ ಕೃಷಿ ಹೊಂಡ

ರೈತ ಬಸಣ್ಣ ದಾಳಿಂಬೆ ಬೆಳೆ ಬೆಳೆಯಲು ಹೊಲದಲ್ಲಿ ಹೊಸದಾಗಿ ಎರಡು ಕೊಳವೆಬಾವಿ ಕೊರೆಸಿದರು. ಅವುಗಳಲ್ಲಿ ಒಂದಿಂಚಿಗಿಂತ ಹೆಚ್ಚು ನೀರು ಬೀಳಲಿಲ್ಲ. ಆ ನೀರು ಗಿಡಗಳ ಬುಡಕ್ಕೂ ತಲುಪದಷ್ಟು ಕ್ಷೀಣವಾಗಿತ್ತು. ಇದರಿಂದ ಧೃತಿಗಡೆದ ಅವರು, ತೋಟಗಾರಿಕೆ ಇಲಾಖೆಯ ಸಹಾಯಧನದೊಂದಿಗೆ 29 ಅಡಿ ಉದ್ದ 29 ಅಡಿ ಅಗಲ ಹಾಗೂ 9 ಅಡಿ ಆಳದ ಕೃಷಿ ಹೊಂಡ ನಿರ್ವಿುಸಿದರು. ಕೊಳವೆ ಬಾವಿಯ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿದರು. ಬಳಿಕ ಎರಡು ಪಂಪ್ ಸೆಟ್​ಗಳಿಂದ ದಾಳಿಂಬೆ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರು ಹರಿಸಿ, ಬೆಳೆ ರಕ್ಷಿಸಿದರು.

ಕೆಜಿಗೆ 80 ರಿಂದ 100 ರೂ.

ಸ್ಥಳೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬೆಂಗಳೂರಿನ ಖರೀದಿದಾರರು ಬಸಣ್ಣ ಅವರ ಜಮೀನಿಗೆ ಆಗಮಿಸಿ ಗ್ರೇಡ್ ಆಧಾರದ ಮೇಲೆ ದಾಳಿಂಬೆ ಖರೀದಿಸುತ್ತಾರೆ. ಗ್ರೇಡ್-1 ದಾಳಿಂಬೆಗೆ ಪ್ರತಿ ಕೆಜಿಗೆ 80 ರಿಂದ 102 ರೂ., ಗ್ರೇಡ್- 2ಗೆ 40 ರಿಂದ 60 ರೂ., ಗ್ರೇಡ್- 3ಗೆ 40 ರೂ.ಗಳಂತೆ ಖರೀದಿಸುತ್ತಾರೆ.

ಸದ್ಯ ಲಭ್ಯವಿರುವ ನೀರಿನಿಂದಲೇ ದಾಳಿಂಬೆ ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. 6 ಎಕರೆಯಲ್ಲಿ 2,500 ದಾಳಿಂಬೆ ಗಿಡಗಳಿವೆ. ಗೊಬ್ಬರ, ಔಷಧೋಪಚಾರ, ಆಳುಗಳ ಖರ್ಚು ಸೇರಿ ಒಂದು ವರ್ಷಕ್ಕೆ 1 ಲಕ್ಷ ರೂ. ಖರ್ಚಾಗಿದೆ. ಪ್ರತಿ ಎಕರೆಗೆ 2 ಲಕ್ಷ ರೂ.ಗಳಂತೆ ಕನಿಷ್ಠ 12 ಲಕ್ಷ ರೂ., ಆದಾಯ ಬರುವ ನಿರೀಕ್ಷೆಯಿದೆ. 
ಬಸಣ್ಣ ರಡ್ಡೇರ, ದಾಳಿಂಬೆ ಬೆಳೆದ ರೈತ

 ಸಮಗ್ರ ತೋಟಗಾರಿಕೆ ಅಭಿಯಾನ ಯೋಜನೆ, ಹನಿ ನೀರಾವರಿ, ಕೀಟ, ರೋಗಭಾದೆ ನಿಯಂತ್ರಣಕ್ಕೆ ಔಷಧೋಪಚಾರ ಹಾಗೂ ಕೃಷಿ ಹೊಂಡದ ಪ್ರೋತ್ಸಾಹಧನ ಪಡೆದಿರುವ ರೈತ ಬಸಣ್ಣ ರಡ್ಡೇರ ಅವರು ದಾಳಿಂಬೆ ಉತ್ತಮ ಬೆಳೆ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಸದ್ಯದ ಬೆಲೆಯಂತೆ ಅಂದಾಜು 15 ಲಕ್ಷ ರೂಪಾಯಿ ಆದಾಯ ಗಳಿಸುವ ಸಾಧ್ಯತೆಯಿದೆ.
| ಎಂ.ಎಂ. ತಾಂಭೋಟಿ, ತೋಟಗಾರಿಕೆ ಇಲಾಖೆ ನಿರ್ದೇಶಕ

Leave a Reply

Your email address will not be published. Required fields are marked *

Back To Top