Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ದಲಿತ ಬಾಲಕಿ ಅತ್ಯಾಚಾರ ಕೊಲೆಗೆ ಜನಾಕ್ರೋಶ ಸ್ಫೋಟ

Thursday, 21.12.2017, 3:03 AM       No Comments

ವಿಜಯಪುರ: ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆಗೈದಿರುವ ಪ್ರಕರಣ ಭಾರಿ ಜನಾಕ್ರೋಶಕ್ಕೆ ಕಾರಣವಾಗಿದ್ದು, ಅತ್ಯಾಚಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಲಕಿ ಶವವಿಟ್ಟು ಕುಟುಂಬಸ್ಥರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಮಂಗಳವಾರ ರಾತ್ರಿ ಹೋರಾಟ ಆರಂಭಿಸಿದ ಕುಟುಂಬ ಸದಸ್ಯರಿಗೆ ಹಲವು ದಲಿತ ಪರ ಸಂಘಟನೆಗಳು ಬೆಂಬಲ ಸೂಚಿಸಿದವು. ಕೊರೆಯುವ ಚಳಿ ಲೆಕ್ಕಿಸದೆ ನೂರಾರು ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಪ್ರಮುಖ ಮಾರ್ಗಗಳಲ್ಲಿ

ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಸಿಎಂ ಸಿದ್ದರಾಮಯ್ಯ ಬಾಲಕಿಯ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿ 8.5 ಲಕ್ಷ ರೂ. ಪರಿಹಾರ ಘೋಷಿಸಿದರು.

ಆರೋಪಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಘಟನೆ ಮಾನವೀಯತೆಗೆ ವಿರುದ್ಧ. ಇದನ್ನ ಯಾರೂ ಸಹಿಸೋದಿಲ್ಲ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಏನಿದು ಘಟನೆ

ವಿಜಯಪುರದ ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣ ಬೆಳಕಿಗೆ ಬಂದಿತ್ತು. ದೀಪಕ ಮುಳಸಾವಳಗಿ (20) ಪ್ರಮುಖ ಆರೋಪಿ ಎನ್ನಲಾಗುತ್ತಿದ್ದು, ಇನ್ನುಳಿದ ಆರೋಪಿಗಳ ಮಾಹಿತಿ ಸ್ವಷ್ಟವಾಗಿಲ್ಲ. ಮೃತ ಬಾಲಕಿಯೊಂದಿಗಿದ್ದ ಇನ್ನೋರ್ವ ಬಾಲಕಿ ಹೇಳಿಕೆ ಪಡೆದ ಪೊಲೀಸರು, 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಜನಾಂಗೀಯ ದೌರ್ಜನ್ಯ, ಫೋಕ್ಸೊ, ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಮುಖ ಆರೋಪಿ ಪತ್ತೆಗೆ ಹುಡುಕಾಟ ನಡೆದಿದೆ.

Leave a Reply

Your email address will not be published. Required fields are marked *

Back To Top