Tuesday, 20th February 2018  

Vijayavani

ಸದನದಲ್ಲಿ ಶಾಸಕರಿಲ್ಲದೆ ಬಣಬಣ - ಇಂದಿನ ಕಲಾಪಕ್ಕೆ ಬರೀ 22 ಮಂದಿ ಹಾಜರ್​ - ಬಜೆಟ್​ ಅಧಿವೇಶನವೂ 3 ದಿನ ಮೊಟಕು.        ಒಬ್ಬರಿಗಿಂತ ಮತ್ತೊಬ್ಬ ಖತರ್ನಾಕ್​​ - ಎಂಎಲ್​ಎ ಪುತ್ರನ ಟೀಂನಲ್ಲಿ 8 ಮಂದಿ - ಇದು ನಲಪಾಡ್​​​​​ ಗ್ಯಾಂಗ್​ನ ಕಂಪ್ಲೀಟ್​ ಕಹಾನಿ.        ವಿದ್ವತ್​ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ - ಮೂಗಿನ ಮೂಳೆ‌ ಕಟ್​​​, ಮೂಖ ಊದಿಕೊಂಡಿದೆ - ಐಸಿಯುನಲ್ಲೇ ಚಿಕಿತ್ಸೆ ಅಂದ್ರು ಮಲ್ಯ ಆಸ್ಪತ್ರೆ ವೈದ್ಯರು.        ವಿದ್ವತ್​​​​​​​​​​ ಬಿಜೆಪಿ ಕಾರ್ಯಕರ್ತ ವಿಚಾರ - ವಿವಾದದ ಬಳಿಕ ತಪ್ಪು ಸರಿಪಡಿಸಿಕೊಂಡ ಬಿಜೆಪಿ - ಅವ್ರು ನಮ್ಮ ಕಾರ್ಯಕರ್ತನಲ್ಲ ಅಂತಾ ಅಮಿತ್ ಷಾ ಸ್ಪಷ್ಟನೆ.        ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟ - ಇಬ್ಬರ ದುರ್ಮರಣ, ಲಾರಿ ಚಾಲಕನ ಸ್ಥಿತಿ ಗಂಭೀರ.       
Breaking News

ದರ್ಶನ್51ನೇ ಚಿತ್ರಕ್ಕೆ ರಶ್ಮಿಕಾ ಕನ್ಪರ್ಮ್​!

Tuesday, 16.01.2018, 3:04 AM       No Comments

ನಟ ದರ್ಶನ್ ನಾಯಕತ್ವದ 51ನೇ ಚಿತ್ರ ಯಾವುದು ಎಂಬುದಕ್ಕೆ ಕೊನೆಗೂ ಸ್ಪಷ್ಟ ಚಿತ್ರಣ ಸಿಕ್ಕಿದೆ. ಬಿ. ಸುರೇಶ್-ಶೈಲಜಾ ನಾಗ್ ನಿರ್ವಣದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಸೋಮವಾರ ಮುಹೂರ್ತ ನೆರವೇರಿದೆ. ಮತ್ತೊಂದು ವಿಶೇಷವೆಂದರೆ, ದರ್ಶನ್​ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕನ್ಪಮ್ರ್ ಆಗಿದ್ದಾರೆ!

ಈ ಮೊದಲು ಕೇಳಿಬಂದಿದ್ದ ಸುದ್ದಿ ಪ್ರಕಾರ, ರಚಿತಾ ರಾಮ್ ಈ ಸಿನಿಮಾದ ನಾಯಕಿ ಎನ್ನಲಾಗಿತ್ತು. ಇದೀಗ ರಶ್ಮಿಕಾ ಆಯ್ಕೆಯಾಗುವ ಮೂಲಕ ಅಂತೆ-ಕಂತೆಗಳಿಗೆ ತೆರೆ ಎಳೆಯಲಾಗಿದೆ. ‘ನಾಯಕಿ ಪಾತ್ರಕ್ಕೆ ಕಲಾವಿದರನ್ನು ಹುಡುಕುವಾಗ ಕೆಲವು ನಟಿಯರ ಜತೆ ನಾನು ಮತ್ತು ನಮ್ಮ ತಂಡ ಮಾತನಾಡುತ್ತೇವೆ. ಅವರ ಡೇಟ್ಸ್​ಗೂ, ನಮ್ಮ ಡೇಟ್ಸ್​ಗೂ ಹೊಂದಾಣಿಕೆ ಆದ ಮೇಲೆ ನಾಯಕಿಯ ಆಯ್ಕೆ ಮಾಡುತ್ತೇವೆ. ಇದೀಗ ರಶ್ಮಿಕಾ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ಇಬ್ಬರು ಹೀರೋಯಿನ್ಸ್ ಇರಲಿದ್ದು, ಮತ್ತೋರ್ವ ನಾಯಕಿಗಾಗಿ ಹುಡುಕಾಟ ನಡೆದಿದೆ. ಶೀಘ್ರದಲ್ಲೇ ಫೈನಲ್ ಮಾಡಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ನಿರ್ವಪಕಿ ಶೈಲಜಾ ನಾಗ್. ಇನ್ನು, ಈ ಸಿನಿಮಾ ಪಕ್ಕಾ ಕಮರ್ಷಿಯಲ್ ಮಾದರಿಯಲ್ಲೇ ಸಿದ್ಧಗೊಳ್ಳಲಿದೆ. ‘ಇದುವರೆಗೂ ದರ್ಶನ್ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಇಡೀ ಸಿನಿಮಾ ಕಮರ್ಷಿಯಲ್ ಸೂತ್ರದಡಿಯಲ್ಲೇ ನಿರ್ವಣಗೊಳ್ಳಲಿದೆ. 6 ಹಾಡು, 6-7 ಫೈಟ್, ಹಾಸ್ಯ ಎಲ್ಲವೂ ಹದವಾಗಿ ಬೆರೆತ ಪ್ಯಾಕೇಜ್ ಇದಾಗಿರಲಿದೆ. ದರ್ಶನ್ ಅಭಿಮಾನಿಗಳ ಜತೆಗೆ ಎಲ್ಲ ವರ್ಗಕ್ಕೂ ಈ ಸಿನಿಮಾ ಇಷ್ಟವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಅವರು.

ಇನ್ನೊಂದು ವಿಶೇಷವೆಂದರೆ, ಇದುವರೆಗೂ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ವಿ. ಹರಿಕೃಷ್ಣ ಈ ಚಿತ್ರದಿಂದ ಕ್ರಿಯೇಟಿವ್ ಹೆಡ್ ಆಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯಿಂದಿ ಡಿದು ಪ್ರತಿಯೊಂದು ವಿಭಾಗದಲ್ಲೂ ಹರಿಕೃಷ್ಣ ಮುಖ್ಯ ಪಾತ್ರ ವಹಿಸಲಿದ್ದಾರಂತೆ. ‘ಹರಿಕೃಷ್ಣ ಅವರ ಸಂಗೀತ ಎಷ್ಟು ಚೆನ್ನಾಗಿರುತ್ತದೆಯೋ, ಅಷ್ಟೇ ಉತ್ತಮವಾಗಿ ಈ ಕ್ರಿಯೇಟಿವ್ ಹೆಡ್ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಶೈಲಜಾ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ‘ಭರ್ಜರಿ’ ನಿರ್ದೇಶಕ ಚೇತನ್​ಕುಮಾರ್ ಸಂಭಾಷಣೆ ಬರೆಯಲಿದ್ದು, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಲಿದ್ದಾರೆ. ಪಿ. ಕುಮಾರ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಪೋಷಕ ಪಾತ್ರಗಳಿಗೆ ರವಿಶಂಕರ್ ಮತ್ತು ದೇವರಾಜ್ ಆಯ್ಕೆ ಅಂತಿಮಗೊಂಡಿದೆ. ಮಿಕ್ಕಂತೆ ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಬೆಂಗಳೂರು, ಮೈಸೂರು, ಮುಂಬೈ, ಕಳಸ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಲ್ಯಾಂಬೋರ್ಗಿನಿ ಒಡೆಯ ದರ್ಶನ್

ನಟ ದರ್ಶನ್​ಗೆ ಕಾರುಗಳ ಬಗ್ಗೆ ವಿಶೇಷ ಕ್ರೇಜ್ ಇದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಈ ವರ್ಷ ಸಂಕ್ರಾಂತಿ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಲು ಅವರು ಹೊಸದೊಂದು ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದಾರೆ. ಈಗಾಗಲೇ ಅವರ ಕಲೆಕ್ಷನ್​ನಲ್ಲಿ ಇರುವ ದುಬಾರಿ ಕಾರುಗಳ ಸಾಲಿಗೆ ಈಗ ಲ್ಯಾಂಬೋರ್ಗಿನಿ ಕೂಡ ಸೇರ್ಪಡೆ ಆಗಿದೆ. ಹೊಸ ಕಾರಿಗೆ ಅವರು ಪೂಜೆ ಮಾಡಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಚಾಲೆಂಜಿಂಗ್ ಸ್ಟಾರ್’ ಅಭಿಮಾನಿಗಳು ಸಿಕ್ಕಾಪಟ್ಟೆ ಲೈಕ್ಸ್ ಒತ್ತಿದ್ದಾರೆ.

Leave a Reply

Your email address will not be published. Required fields are marked *

Back To Top