Monday, 19th February 2018  

Vijayavani

ಶ್ರವಣಬೆಳಗೊಳದ ಮಹಾಮಜ್ಜನದಲ್ಲಿ ಮೋದಿ - ಮೆಟ್ಟಿಲುಗಳ, ಬಾಹುಬಲಿ ಆಸ್ಪತ್ರೆ ಉದ್ಘಾಟನೆ - ಚಾವುಂಡರಾಯ ವೇದಿಕೆಯಲ್ಲಿ ಭಾಷಣ.        ಮೈಸೂರಿನಲ್ಲಿ ಪರಿವರ್ತನಾ ಯಾತ್ರೆಗೆ ಕ್ಷಣಗಣನೆ - ಸಿಎಂ ತವರಲ್ಲಿ ಅಬ್ಬರಿಸಲಿದ್ದಾರೆ ಮೋದಿ - ಸಿದ್ದರಾಮಯ್ಯಗೆ ಟಾಂಗ್ ಕೊಡ್ತಾರಾ ಪ್ರಧಾನಿ?        ಮೋದಿ ಯಾತ್ರೆಗೆ ಬೆದರಿದ್ರಾ ಸಿದ್ದರಾಮಯ್ಯ - ಪ್ರಧಾನಿ ಪ್ರವಾಸದ ವೇಳೆಯೇ ರೌಂಡ್ಸ್ - ಜನರ ಸಮಸ್ಯೆ ಆಲಿಸಿದ ಸಿಎಂ.        ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಮಹಮ್ಮದ್‌ ವಿರುದ್ಧ ಸೆಕ್ಷನ್ 307 ಕೇಸ್ ದಾಖಲು - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ.        ಕೆ.ಆರ್‌.ಆಸ್ಪತ್ರೆಯಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಪಾರ್ಥಿವ ಶರೀರ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ.       
Breaking News

ದರ್ಶನ್​ಗೆ ಧನಂಜಯ್ ವಿಲನ್?

Tuesday, 13.02.2018, 3:02 AM       No Comments

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದೆಲ್ಲೆಡೆ ‘ಟಗರು’ ಚಿತ್ರದ ಹವಾ ಜೋರಾಗಲಿದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ಧನಂಜಯ್ ಬಗ್ಗೆಯಂತೂ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಸೃಷ್ಟಿಯಾಗಿದೆ. ‘ಬಲುಮ ಬಲುಮ..’ ಹಾಡಿನಲ್ಲಿ ಅವರು ಕಾಣಿಸಿಕೊಂಡಿರುವ ಗೆಟಪ್ ನೋಡಿದವರೆಲ್ಲ ಫಿದಾ ಆಗಿದ್ದಾರೆ. ಅವರ ಈ ವಿಲನ್ ಗತ್ತು ಇಷ್ಟಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕೇಳಿಬರುತ್ತಿರುವ ಬ್ರೇಕಿಂಗ್ ನ್ಯೂಸ್ ಏನೆಂದರೆ ಮುಂದಿನ ಕೆಲವು ಚಿತ್ರಗಳಲ್ಲೂ ಅವರು ವಿಲನ್ ಆಗಿ ಮಿಂಚಲಿದ್ದಾರಂತೆ. ಸದ್ಯ ಅವರು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್​ಗೆ ಎದುರಾಳಿಯಾಗಿ ನಿಲ್ಲುತ್ತಾರೆ ಎನ್ನಲಾಗುತ್ತಿದೆ. ಅರ್ಥಾತ್, ದರ್ಶನ್ ನಟಿಸಲಿರುವ 51ನೇ ಚಿತ್ರದಲ್ಲಿ ಧನಂಜಯ್ ಖಳನಾಗಿ ಅಬ್ಬರಿಸಲಿದ್ದಾರೆ ಎನ್ನುತ್ತಿವೆ ಮೂಲಗಳು.

ಈಗಾಗಲೇ ಈ ಚಿತ್ರದ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಕೆಲವೇ ದಿನಗಳ ಹಿಂದೆ ಮುಹೂರ್ತ ನೆರವೇರಿಸಲಾಗಿತ್ತು. ತಾರಾಗಣದ ಕಾರಣಕ್ಕಾಗಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡುತ್ತಿರುವ 51ನೇ ಸಿನಿಮಾದಲ್ಲಿ ನಾಯಕಿಯರಾಗಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ಅಭಿನಯಿಸಲಿದ್ದಾರೆ. ದರ್ಶನ್​ಗೆ ಮುಖಾಮುಖಿಯಾಗಿ ನಿಲ್ಲುವ ಪಾತ್ರಕ್ಕೆ ಧನಂಜಯ್ ಬಣ್ಣ ಹಚ್ಚಿದರೆ ಒಳಿತು ಎಂಬ ಅಭಿಪ್ರಾಯ ಚಿತ್ರತಂಡದ ಸದಸ್ಯರಲ್ಲಿ ಕೇಳಿಬಂದಿದೆ. ಆ ಪ್ರಕಾರ, ಧನಂಜಯ್ ಜತೆ ಮಾತುಕತೆ ಕೂಡ ನಡೆದಿದ್ದು ಅವರೂ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನು, ಈ ಚಿತ್ರದಲ್ಲಿ ಖಳನಟರ ಖದರ್ ಜೋರಾಗಿಯೇ ಇರಲಿದೆ. ಧನಂಜಯ್ ಮಾತ್ರವಲ್ಲದೆ, ಇನ್ನೂ ಇಬ್ಬರು ವಿಲನ್​ಗಳು ಇರಲಿದ್ದಾರೆ. ಆ ಪಾತ್ರಗಳಿಗೆ ಠಾಕೂರ್ ಅನೂಪ್ ಸಿಂಗ್ ಮತ್ತು ರವಿಶಂಕರ್ ಬಣ್ಣ ಹಚ್ಚುವುದು ಬಹುತೇಕ ಖಚಿತವಂತೆ.

ಅಂದಹಾಗೆ, ಚಂದನವನಕ್ಕೆ ಹೀರೋ ಆಗಿ ಎಂಟ್ರಿ ನೀಡಿದ್ದ ಧನಂಜಯ್ ‘ಡೈರೆಕ್ಟರ್ ಸ್ಪೆಷಲ್’, ‘ಜಸ್ಸಿ’, ‘ರಾಟೆ’, ‘ಬದ್ಮಾಶ್’, ‘ಎರಡನೇ ಸಲ’ ಮುಂತಾದ ಚಿತ್ರಗಳ ಮೂಲಕ ಸಿನಿಪ್ರಿಯರ ಮನಗೆದ್ದಿದ್ದಾರೆ. ಈ ನಡುವೆ ‘ಟಗರು’ ಚಿತ್ರದಲ್ಲಿ ವಿಲನ್ ಪಾತ್ರ ಒಪ್ಪಿಕೊಳ್ಳುವ ಮೂಲಕ ವೃತ್ತಿಜೀವನದ ಸಾಧ್ಯತೆಗಳನ್ನು ವಿಸ್ತರಿಸಿಕೊಂಡರು. ಈಗ ಅವರು ದರ್ಶನ್​ಗೆ ಖಳನಾಗಿ ನಟಿಸಲಿರುವುದರಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈ ಯಾವ ವಿಷಯಗಳ ಬಗ್ಗೆಯೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಫೆ. 16ರಂದು ದರ್ಶನ್ ಜನ್ಮದಿನದಂದು ಘೋಷಣೆ ಮಾಡುವ ಸಾಧ್ಯತೆ ಇದೆಯಂತೆ. ಈ ಚಿತ್ರಕ್ಕೆ ಪಿ. ಕುಮಾರ್ ನಿರ್ದೇಶನ ಮಾಡುತ್ತಿದ್ದು, ಬಿ. ಸುರೇಶ್ ಮತ್ತು ಶೈಲಜಾ ನಾಗ್ ಬಂಡವಾಳ ಹೂಡುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top