Monday, 22nd January 2018  

Vijayavani

ಸರಹದ್ದು ಮೀರಿ ವರ್ತಿಸ್ತಿದೆ ಪಾಪಿ ಪಾಕ್​- ಐದು ದಿನಗಳಿಂದ ಗುಂಡಿನ ದಾಳಿಗೆ ಪರಿಸ್ಥಿತಿ ಉಲ್ಭಣ- ಗಡಿಯಲ್ಲಿ ಯುದ್ಧ ಸ್ಥಿತಿ ನಿರ್ಮಾಣ        ದಾವೋಸ್​ನಲ್ಲಿ 48ನೇ ವಿಶ್ವ ಆರ್ಥಿಕ ವೇದಿಕೆ ಸಮಾವೇಶ- ಸ್ವಿಸ್​ಗೆ ಹಾರಿದ ಪ್ರಧಾನಿ ಮೋದಿ- ವಿದೇಶಿ ಬಂಡವಾಳ ಸೆಳೆಯುವತ್ತ ಹಲವುಸೂತ್ರ        ಗ್ಯಾಸ್​ ರೀಫಿಲ್ಲಿಂಗ್ ವೇಳೆ ಲೀಕ್​ಆಗಿ ಹೊತ್ತಿಕೊಂಡ ಬೆಂಕಿ- ಆರು ಜನರಿಗೆ ಗಂಭೀರ ಗಾಯ- ಬೆಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ        ಬೀದರ್​ನಲ್ಲಿ ವೀರಭದ್ರನ ಪಲ್ಲಕ್ಕಿ ಉತ್ಸವ- ಶಸ್ತ್ರಧಾರಣೆ ಮೂಲಕ ಭಕ್ತಿಯ ಪರಾಕಷ್ಠೆ- ಅತ್ತ ಮಂಗಳೂರಿನಲ್ಲಿ ಕಲವರದ ಪುತ್ತೂರು ಕಂಬಳ        ರಿಲೀಸ್​ ಡೇಟ್ ಫಿಕ್ಸ್​ ಆದ್ರೂ ಪದ್ಮಾವತ್​​ಗೆ ಸಂಕಷ್ಟ- 25ಕ್ಕೆ ಬಿಡುಗಡೆಯಾದ್ರೆ ದೇಶಾದ್ಯಂತ ಬಂದ್​- ಕರ್ಣಿಸೇನಾ ರಕ್ತಪಾತದ ಡೈಲಾಗ್​ಗೆ ಬೆವರಿದ ಬನ್ಸಾಲಿ       
Breaking News :

ದರ್ಶನ್​ಗೆ ಕುಮಾರ್ ಆಕ್ಷನ್-ಕಟ್

Wednesday, 13.09.2017, 3:04 AM       No Comments

 

ಬೆಂಗಳೂರು: ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಬಳಿಕ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟಿಸಲಿರುವ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಅವರೇ ಅಧಿಕೃತ ಮಾಹಿತಿ ನೀಡಿರುವಂತೆ, 51ನೇ ಚಿತ್ರವನ್ನು ಬಿ.ಸುರೇಶ ಮತ್ತು ಶೈಲಜಾ ನಾಗ್ ಅವರ ಮೀಡಿಯಾ ಹೌಸ್ ಸಂಸ್ಥೆ ನಿರ್ಮಾಣ ಮಾಡಲಿದೆ. ಹಾಗಾದರೆ, ಈ ಚಿತ್ರಕ್ಕೆ ನಿರ್ದೇಶಕರು ಯಾರು? ಪಿ.ಕುಮಾರ್. ಈ ಹಿಂದೆ ‘ವಿಷ್ಣುವರ್ಧನ’, ‘ಜೈಲಲಿತ’, ‘ರಾಜ ರಾಜೇಂದ್ರ’ ಮುಂತಾದ ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದ ಕುಮಾರ್, ಇದೇ ಮೊದಲ ಬಾರಿಗೆ ದರ್ಶನ್ ಜತೆ ಸಿನಿಮಾ ಮಾಡುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮೀಡಿಯಾ ಹೌಸ್​ನ ಶೈಲಜಾ ನಾಗ್, ‘ಕಥೆ ಈಗಾಗಲೇ ಓಕೆ ಆಗಿದ್ದು, ಚಿತ್ರವನ್ನು ಪಿ. ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಪ್ರಿ-ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ವಿಶೇಷವೆಂದರೆ, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಕೂಡ ಸ್ಕ್ರಿಪ್ಟ್ ಕೆಲಸಗಳಲ್ಲಿ ಕೈಜೋಡಿಸಿದ್ದಾರೆ. ಜತೆಗೆ ಸಂಗೀತ ನಿರ್ದೇಶನದ ಹೊಣೆಯೂ ಅವರದ್ದೇ’ ಎನ್ನುತ್ತಾರೆ. ‘..ಕುರುಕ್ಷೇತ್ರ’ದ ನಂತರ ಬೇರೆ ನಿರ್ವಪಕರ ಜತೆ ದರ್ಶನ್ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅವೆಲ್ಲವುಗಳಿಗೆ ಈಗ ಫುಲ್​ಸ್ಟಾಪ್ ಬಿದ್ದಿದೆ. ‘ಬೇರೆ ಬ್ಯಾನರ್​ನಲ್ಲಿ ದರ್ಶನ್ ಸಿನಿಮಾ ಮಾಡುವುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ, 51ನೇ ಸಿನಿಮಾವನ್ನು ನಾವೇ ನಿರ್ಮಾಣ ಮಾಡುವುದೆಂದು ಬಹಳ ಹಿಂದೆಯೇ ನಿರ್ಧಾರವಾಗಿತ್ತು’ ಎಂದು ಮಾಹಿತಿ ನೀಡುತ್ತಾರೆ ಶೈಲಜಾ ನಾಗ್.

ಮೀಡಿಯಾ ಹೌಸ್ ಸಂಸ್ಥೆಯಡಿ ನಿರ್ವಣವಾದ ಸಿನಿಮಾಗಳೆಲ್ಲ ಬೇರೆ ಜಾನರ್​ನಲ್ಲಿದ್ದವು. ದರ್ಶನ್ ಮಾಸ್ ಹೀರೋ ಆಗಿರುವುದರಿಂದ, ಅವರಿಗೆ ಸೂಕ್ತ ಎನಿಸುವಂತಹ ಕಥೆಯನ್ನೇ ಆಯ್ಕೆ ಮಾಡಲಾಗಿದೆಯಂತೆ. ‘ಇದೊಂದು ಪಕ್ಕಾ ಮನರಂಜನೆ ಚಿತ್ರ. ಇದುವರೆಗೂ ಬಿ. ಸುರೇಶ್ ನಿರ್ದೇಶನದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೆವು. ಆದರೆ, ಇದು ದರ್ಶನ್ ಸಿನಿಮಾ. ಅವರಿದ್ದಾರೆ ಎಂದಮೇಲೆ ಮಾಸ್ ಅಂಶಗಳು ಇರಲೇಬೇಕು. ಆ ನಿಟ್ಟಿನಲ್ಲಿ ಕಥೆ ಮಾಡಿಕೊಂಡಿದ್ದೇವೆ. ಈವರೆಗೂ ದರ್ಶನ್ ಮಾಡಿದ ಸಿನಿಮಾಗಳಿಗಿಂತ ಇದು ಭಿನ್ನವಾಗಿರಲಿದೆ’ ಎನ್ನುತ್ತಾರೆ ಅವರು. ಇದಿಷ್ಟು ಬಿಟ್ಟರೆ ಬೇರೆ ಕಲಾವಿದರ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ಅಂತಿಮಗೊಂಡ ಬಳಿಕ ಅಧಿಕೃತ ಮಾಹಿತಿ ಹೊರಬೀಳಲಿದೆ. ಸದ್ಯ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಚಿತ್ರೀಕರಣ ಹೈದರಾಬಾದ್​ನಲ್ಲಿ ಬಿರುಸಿನಿಂದ ನಡೆಯುತ್ತಿದೆ. ಅದು ಮುಗಿಯುತ್ತಿದ್ದಂತೆಯೇ ಈ ಸಿನಿಮಾ ಶುರುವಾಗಲಿದೆ.

ಆಕ್ಷನ್, ಲವ್ ಎಲ್ಲ ಅಂಶಗಳು ಇರುವಂತಹ ಸಿನಿಮಾವಿದು. ದರ್ಶನ್ ಅವರಂತಹ ಸ್ಟಾರ್ ನಟ ಇರುವಾಗ ಅವರಿಗೆ ಸೂಕ್ತವಾಗುವಂತಹ ಕಥೆ, ಚಿತ್ರಕಥೆಯನ್ನೇ ಮಾಡಬೇಕು. ಅದಕ್ಕಾಗಿ ನಾವು ಪ್ರಾಮಾಣಿಕವಾಗಿ ಆ ಕೆಲಸ ಮಾಡುತ್ತಿದ್ದೇವೆ.

| ಶೈಲಜಾ ನಾಗ್ ನಿರ್ವಪಕಿ

Leave a Reply

Your email address will not be published. Required fields are marked *

Back To Top