Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ದರ್ಶನಕ್ಕಿಳಿದ ಡಾ.ರಾಜ್ ಕುಟುಂಬದ ಕುಡಿ 

Thursday, 14.09.2017, 3:00 AM       No Comments

ಬೆಂಗಳೂರು: ಡಾ. ರಾಜ್ ಕುಟುಂಬದ ಮತ್ತೊಂದು ಕುಡಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದೆ. ಹಾಗಂತ ನಾಯಕ ನಟನಾಗಿಯೋ, ನಿರ್ಮಾಪಕನಾಗಿಯೋ ಅವರು ಬೆಳ್ಳಿತೆರೆಗೆ ಬರುತ್ತಿಲ್ಲ. ಬದಲಿಗೆ ತೆರೆ ಹಿಂದೆ ಕೈಚಳಕ ತೋರಿಸುವ ನಿರ್ದೇಶಕರಾಗಿ ಎಂಟ್ರಿ ನೀಡಲಿದ್ದಾರೆ. ಯಾರವರು? ಡಾ. ರಾಜ್​ಕುಮಾರ್ ಸಹೋದರಿ ನಾಗಮ್ಮ ಅವರ ಮೊಮ್ಮಗ ಲಕ್ಕಿ ಗೋಪಾಲ್. ಹೌದು ಕಳೆದ ಹಲವು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಲಕ್ಕಿ ಗೋಪಾಲ್, ಇದೀಗ ಶಿವರಾಜ್​ಕುಮಾರ್ ಅವರ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲು ಸಜ್ಜಾಗಿದ್ದಾರೆ.

ನಿರ್ದೇಶನದ ಪ್ಲ್ಯಾನ್ ಹೊಳೆದದ್ದು, ಸಿನಿಮಾಕ್ಕಾಗಿ ಏನೆಲ್ಲ ತಯಾರಿ ಮಾಡಿಕೊಂಡಿದ್ದಾರೆ ಎಂಬುದನ್ನು ಖುದ್ದು ಲಕ್ಕಿ ಗೋಪಾಲ್ ಹೇಳಿಕೊಂಡಿದ್ದಾರೆ. ‘ಕಳೆದ 2-3 ವರ್ಷದ ಹಿಂದೆಯೇ ನಾನು ಸಣ್ಣ ಕಥೆಯೊಂದನ್ನು ರೆಡಿ ಮಾಡಿಕೊಂಡಿದ್ದೆ. ಆವಾಗಲೇ ನಾನು ಮಾಮನಿಗೆ (ಶಿವರಾಜ್​ಕುಮಾರ್) ಹೇಳಿದ್ದೆ. ಕಥೆ ಡೆವಲಪ್ ಮಾಡು ಅಂದಿದ್ದರು. ಅಂದಿನಿಂದ ಕಥೆಯಲ್ಲಿ ಹಲವು ತಿದ್ದುಪಡಿ ಮಾಡುತ್ತ ಬಂದಿದ್ದೆ. ಇದೀಗ ಚಿತ್ರಕ್ಕೆ ಕಿರಣ್​ಕುಮಾರ್ ಎಂಬ ನಿರ್ವಪಕರು ಸಿಕ್ಕಿದ್ದಾರೆ. ನವೆಂಬರ್ 1ರಂದು ಶೀರ್ಷಿಕೆ ಬಹಿರಂಗಗೊಳಿಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಗೋಪಾಲ್.

ಈ ಹಿಂದೆ ವಿನಯ್ ರಾಜ್​ಕುಮಾರ್ ನಟನೆಯ ‘ಸಿದ್ಧಾರ್ಥ್’, ‘ರನ್ ಆಂಟನಿ’ ಪುನೀತ್ ಅವರ ‘ದೊಡ್ಮನೆ ಹುಡುಗ’ ಚಿತ್ರದ ನಿರ್ದೇಶನದ ವಿಭಾಗದಲ್ಲಿ ಗೋಪಾಲ್ ಕೆಲಸ ಮಾಡಿದ್ದರು. ಸದ್ಯ ಮಲ್ಪೆಯಲ್ಲಿ ಶೂಟಿಂಗ್​ನಲ್ಲಿ ಬಿಜಿಯಾಗಿರುವ ‘ಟಗರು’ ಚಿತ್ರದಲ್ಲೂ ಸೂರಿ ಅವರೊಂದಿಗೆ ತೊಡಗಿಸಿಕೊಂಡಿದ್ದಾರೆ. ನಿರ್ದೇಶನದತ್ತ ವಾಲಿದ್ದೇಕೆ ಎಂಬುದಕ್ಕೂ ಗೋಪಾಲ್ ಅವರ ಬಳಿ ಉತ್ತರವಿದೆ. ‘ಮೊದಲಿನಿಂದಲೂ ನಾನು ಮತ್ತು ವಿನಯ್, ಶಿವರಾಜ್​ಕುಮಾರ್, ಪುನೀತ್ ಅವರ ಸಿನಿಮಾ ಶೂಟಿಂಗ್ ಇದ್ದ ಕಡೆಗಳಲ್ಲಿ ಹೋಗುತ್ತಿದ್ವಿ. ಆಗ ನಟನೆಗಿಂತ ನಿರ್ದೇಶನ ನನ್ನನ್ನು ಸೆಳೆದಿತ್ತು. ಆ ಬಳಿಕ ಹಲವು ಕಿರುಚಿತ್ರಗಳನ್ನು ಮಾಡಿದ್ದೆ. ಅದೇ ಇದೀಗ ಪೂರ್ಣ ಪ್ರಮಾಣದ ನಿರ್ದೇಶಕನನ್ನಾಗಿ ಮಾಡಿದೆ’ ಎನ್ನುತ್ತಾರವರು.

ಸದ್ಯ ಶಿವರಾಜ್​ಕುಮಾರ್ ಅವರಿಗೆ ಆಕ್ಷನ್-ಕಟ್ ಹೇಳಲು ಹೊರಟಿರುವ ಚಿತ್ರ ಪಕ್ಕಾ ಆಕ್ಷನ್ ಕಂಟೆಂಟ್ ಇರುವಂಥದ್ದು ಎನ್ನುವ ಲಕ್ಕಿ ಗೋಪಾಲ್, ‘ಸಿನಿಮಾದಲ್ಲಿ ಇನ್ನುಳಿದ ತಾರಾಗಣ, ಲೊಕೇಷನ್ ಆಯ್ಕೆ ಮಾಡುವ ಕೆಲಸಗಳಿವೆ. ಪ್ರಮುಖ ತಂತ್ರಜ್ಞರು ಈಗಾಗಲೇ ಆಯ್ಕೆ ಆಗಿದ್ದಾರೆ. ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ಹೊರಹಾಕುತ್ತೇವೆ’ ಎನ್ನುತ್ತಾರೆ. ಮಾರ್ಚ್ ಅಥವಾ ಮೇ ತಿಂಗಳಲ್ಲಿ ಮುಹೂರ್ತ ನೆರವೇರಿಸಿಕೊಂಡು ಚಿತ್ರೀಕರಣ ಶುರು ಮಾಡಲಿದ್ದಾರಂತೆ.

 

Leave a Reply

Your email address will not be published. Required fields are marked *

Back To Top