Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಥಗ್ಸ್ ನಟಿಗೆ ಥ್ರೋನ್ಸ್ ಆಸೆ

Thursday, 24.08.2017, 3:00 AM       No Comments

ಟಿ ಕತ್ರಿನಾ ಕೈಫ್ ಕಾಲ್​ಶೀಟ್​ಗಾಗಿ ಕಾದಿರುವ ನಿರ್ವಪಕರ ಸಾಲು ದೊಡ್ಡದಿದೆ. ಸೋಲು-ಗೆಲುವುಗಳ ಲೆಕ್ಕಾಚಾರ ಏನೇ ಇದ್ದರೂ ಬಾಲಿವುಡ್​ನಲ್ಲಿ ಹೊಸ ಹೊಸ ಆಫರ್​ಗಳನ್ನು ಗಿಟ್ಟಿಸುತ್ತಿರುವುದು ಕತ್ರಿನಾ ಹೆಚ್ಚುಗಾರಿಕೆ. ಪ್ರಸ್ತುತ ‘ಥಗ್ಸ್ ಆಫ್ ಹಿಂದುಸ್ತಾನ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇಂಥ ನಟಿ, ‘ನನಗೆ ಅವಕಾಶ ಕೊಡಿ, ಪ್ಲೀಸ್…’ ಎಂದು ತಾನಾಗಿಯೇ ಕೇಳಿಕೊಂಡರೆ ಹೇಗಿರುತ್ತದೆ? ಅದು ಕೂಡ ಲಕ್ಷಾಂತರ ಅಭಿಮಾನಿಗಳಿಗೆ ಗೊತ್ತಾಗುವಂತೆ ಬಹಿರಂಗವಾಗಿಯೇ ಅಂಗಲಾಚಿದರೆ ಏನಾಗಬಹುದು? ಇಂಥ ಘಟನೆ ನಡೆದಿದೆ. ಅವಕಾಶಕ್ಕಾಗಿ ಕತ್ರಿನಾ ಕೈಚಾಚಿದ್ದಾರೆ!

ಅವಕಾಶಗಳ ಕೊರತೆಯಿಂದಾಗಿ ಅವರು ಹೀಗೆ ಮಾಡಿಲ್ಲ. ಅದಕ್ಕೆ ಕಾರಣ ಆಗಿರುವುದು ಇಂಗ್ಲಿಷ್​ನ ಖ್ಯಾತ ಟೆಲಿವಿಷನ್ ಸರಣಿ ‘ಗೇಮ್ ಆಫ್ ಥ್ರೋನ್ಸ್’. ಈಗಾಗಲೇ ಜಗತ್ತಿನಾದ್ಯಂತ ಫೇಮಸ್ ಆಗಿರುವ ‘…ಥ್ರೋನ್ಸ್’ಗೆ ಕತ್ರಿನಾ ಕೂಡ ಫಿದಾ ಆಗಿದ್ದಾರೆ. ಇತ್ತೀಚೆಗೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದ ಅವರು, ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದರು. ಜತೆಯಲ್ಲಿ, ‘ನಾನು ಗೇಮ್ ಆಫ್ ಥ್ರೋನ್ಸ್​ನಲ್ಲಿ ನಟಿಸಬಹುದೇ ಪ್ಲೀಸ್… ಐ ಲವ್ ಜಾನ್ ಸ್ನೋ. ಪ್ಲೀಸ್ ನನ್ನನ್ನು ಶೋಗೆ ಸೇರಿಸಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.

ಕತ್ರಿನಾ ಏನೋ ಹೀಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಅವರ ಆಸೆ ಈಡೇರುವುದು ಅನುಮಾನ. ಏಕೆಂದರೆ ಪ್ರಸ್ತುತ ‘…ಥ್ರೋನ್ಸ್’ನ ಏಳನೇ ಸೀಸನ್ ಜಾರಿಯಲ್ಲಿದ್ದು, ಕೊನೇ ಎಪಿಸೋಡ್ ಪ್ರಸಾರವಾಗುವುದು ಮಾತ್ರ ಬಾಕಿ ಇದೆ. ಹಾಗಾಗಿ ಈ ಸೀಸನ್​ನಲ್ಲಿ ಕತ್ರಿನಾ ನಟಿಸಲು ಸಾಧ್ಯವಾಗುವುದಿಲ್ಲ. ಇನ್ಸ್​ಟಾಗ್ರಾಮ್ಲ್ಲಿ 4.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಟಿ ತಾನಾಗಿಯೇ ಮನವಿ ಮಾಡಿಕೊಂಡಿರುವಾಗ, ‘…ಥ್ರೋನ್ಸ್’ ನಿರ್ವಪಕರು ಇದನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಹಾಗಾಗಿ 8ನೇ ಸೀಸನ್​ನಲ್ಲಿ ಕತ್ರಿನಾ ಬಣ್ಣ ಹಚ್ಚುವ ಚಾನ್ಸ್ ಗಿಟ್ಟಿಸಿಕೊಂಡರೂ ಅಚ್ಚರಿ ಇಲ್ಲ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top