Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ತ್ರಿಕೋನ ಪ್ರೇಮಕಥೆಯ ಕಣ್ಮಣಿ

Tuesday, 13.03.2018, 3:02 AM       No Comments

ಬೆಂಗಳೂರು: ತ್ರಿಕೋನ ಪ್ರೇಮಕಥೆ ಎಳೆ ಇಟ್ಟುಕೊಂಡು ಹೆಣೆಯಲಾದ ‘ಕಣ್ಮಣಿ’ ಹೆಸರಿನ ಹೊಸ ಧಾರವಾಹಿಯನ್ನು ಪ್ರೇಕ್ಷಕರ ಮುಂದಿಡಲು ‘ಉದಯ ವಾಹಿನಿ’ ಸಜ್ಜಾಗಿದೆ. ಮಾ.19ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ‘ಕಣ್ಮಣಿ’ ಪ್ರಸಾರವಾಗಲಿದೆ.

ನಾಯಕಿ ಅಂಜಲಿ ತನಗೆ ಇರುವ ಸಮಸ್ಯೆಗಳ ನಡುವೆಯೇ ಎಲ್ಲರಿಗೂ ಪ್ರೀತಿ ಹಂಚುವ ಕೆಲಸ ಮಾಡುತ್ತಿರುತ್ತಾಳೆ. ಕಥಾನಾಯಕಿಯ ಜೀವನದಲ್ಲಿ ಒಂದಷ್ಟು ಅಹಿತಕರ ಘಟನೆಗಳು ನಡೆದಿರುತ್ತವೆ. ಈ ಮಧ್ಯೆ ಅವಳಿಗೆ ಎದುರಾಗುವ ವ್ಯಕ್ತಿಗಳನ್ನು ಮತ್ತು ಸವಾಲುಗಳನ್ನು ಆಕೆ ಹೇಗೆ ಎದುರಿಸುತ್ತಾಳೆ? ಹೇಗೆ ಹೊಸ ಬದುಕು ಕಟ್ಟಿಕೊಳ್ಳುತ್ತಾಳೆ ಎಂಬುದೇ ಕಥೆಯ ತಿರುಳು. ತ್ರಿಕೋನ ಪ್ರೇಮಕಥೆ ಎಂದಮೇಲೆ ಇಬ್ಬರು ನಾಯಕರಿರಲೇಬೇಕು. ಅಂತೆಯೇ ಚಿತ್ರದಲ್ಲಿ ದ್ವಾರಕಾನಾಥ್ ಮತ್ತು ಕಿಶನ್ ಹೆಸರಿನ ಇಬ್ಬರು ಮುಖ್ಯಭೂಮಿಕೆಯಲ್ಲಿದ್ದಾರೆ. ಇವರಿಬ್ಬರಲ್ಲಿ ನಾಯಕಿ ಯಾರಿಗೆ ಒಲಿಯುತ್ತಾಳೆ? ಎಂಬಿತ್ಯಾದಿ ವಿಚಾರಗಳ ಮೇಲೆ ಕಥೆ ಸಾಗಲಿದೆಯಂತೆ. ‘ಪಾರಿಜಾತ ಟೆಲಿ ಎಂಟರ್​ಟೇನರ್ಸ್’ ಬ್ಯಾನರ್​ನಲ್ಲಿ ನಿರ್ವಣವಾಗುತ್ತಿರುವ ಈ ಧಾರಾವಾಹಿಯನ್ನು ಪೃಥ್ವಿರಾಜ್ ಕುಲಕರ್ಣಿ ನಿರ್ದೇಶಿಸುತ್ತಿದ್ದಾರೆ. ಅಂಜಲಿ ಪಾತ್ರದಲ್ಲಿ ದಿವ್ಯಾ ಶೈಲೇಶ್, ದ್ವಾರಕಾನಾಥ್ ಪಾತ್ರದಲ್ಲಿ ದರ್ಶಕ್ ಗೌಡ , ಕಿಶನ್ ಪಾತ್ರದಲ್ಲಿ ನಂದೀಶ್ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ನಾಗೇಶ್, ಮೈಸೂರು ಮಾಲತಿ, ಗಿರೀಶ್, ಮೈಸೂರು ಶೋಭಾ ಸೇರಿ ಹಲವರು ತಾರಾ ಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *

Back To Top