Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ತೇಜೂ ಹೇಳಿದ ಬಿಗ್ ಸತ್ಯಗಳು

Tuesday, 14.11.2017, 3:05 AM       No Comments

‘ಬಿಗ್ ಬಾಸ್’ ಮನೆಯಲ್ಲಿ ಯಾವ ಜಗಳ ಇಲ್ಲದೆ, ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳದೆ, ಕೊಟ್ಟ ಕೆಲಸವನ್ನು ಕೈಲಾದಷ್ಟು ಮಾಡಿ, ಕೆಲವು ಅನುಭವದ ಮೂಟೆ ಹೊತ್ತು ಬಂದಿದ್ದಾರೆ ನಟಿ ತೇಜಸ್ವಿನಿ ಪ್ರಕಾಶ್. ನಾಲ್ಕನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿರುವ ಅವರು ಈ ಜನಪ್ರಿಯ ರಿಯಾಲಿಟಿ ಶೋನ ಒಳಹೊರಗುಗಳ ಬಗ್ಗೆ ‘ನಮಸ್ತೆ ಬೆಂಗಳೂರು’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

| ಮಂಜು ಕೊಟಗುಣಸಿ ಬೆಂಗಳೂರು

# ನಾಲ್ಕು ವಾರಕ್ಕೆ ಹೊರಬಂದ್ರಿ, ಬೇಗ ಬಂದೆ ಅಂತ ಅನಿಸಲಿಲ್ಲವೇ?

ಇನ್ನೂ ಕೆಲ ವಾರಗಳ ಕಾಲ ಇರುತ್ತೇನೆ ಅಂದುಕೊಂಡಿದ್ದೆ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ತಂದೆಗೆ ಹುಷಾರಿಲ್ಲದ ಕಾರಣ ಮನೆಯಿಂದ ಆಚೆ ಬಂದು ಮತ್ತೆ ಒಳಹೋಗಬೇಕಾಯಿತು. ಗೇಮ್ ತಿಳಿದುಕೊಂಡು ಮತ್ತೆ ಮನೆಗೆ ಬಂದೆ ಎಂಬ ಕಾರಣಕ್ಕೂ ನಾನು ಹೊರಬಂದಿರಬಹುದು. ಮನೆಯಲ್ಲಿದ್ದಾಗ 2 ಸಲ ನಾಮಿನೇಟ್ ಆಗಿದ್ದೆ ಅಷ್ಟೇ.

# ಮನೆಯಲ್ಲಿ ತುಂಬ ಸೈಲೆಂಟ್ ಇದ್ರಿ. ಅದೇ ನಿಮ್ಮನ್ನು ಹೊರಬರುವಂತೆ ಮಾಡಿತಾ?

ಇರಬಹುದು.. ನಾನು ತೀರಾ ಸಿಂಪಲ್ ಹುಡುಗಿ. ನಮ್ಮ ಮನೆಯಲ್ಲಿ ನಾನು ಹೇಗಿರುತ್ತಿದ್ದೆನೋ ಬಿಗ್ ಬಾಸ್ ಮನೆಯಲ್ಲೂ ಹಾಗೇ ಇದ್ದೆ. ನನ್ನತನವನ್ನು ನಾನು ಎಲ್ಲಿಯೂ ಕಳೆದುಕೊಂಡಿಲ್ಲ. ಒಳ್ಳೆಯ ಕಾಮಿಡಿ ಮಾಡಿದೆ. ತರಲೆ, ಜಗಳ ಎಲ್ಲವೂ ನಡೆಯಿತು. ಇಷ್ಟೆಲ್ಲ ಮಾಡಿದರೂ ಎಲ್ಲೋ ಒಂದು ಕಡೆ ವರ್ಕೌಟ್ ಆಗಲಿಲ್ಲವೇನೋ ಅನ್ನಿಸುತ್ತಿದೆ.

# ಸೆಲೆಬ್ರಿಟಿ ವರ್ಸಸ್ ಕಾಮನ್ ಮ್ಯಾನ್ ಬಗ್ಗೆ ನಿಮ್ಮ ಅಭಿಪ್ರಾಯ

ಅಲ್ಲಿದ್ದಾಗ ಆ ಥರಹದ ವಿಚಾರಗಳು ಯಾರ ತಲೆಗೂ ಬಂದಿರಲಿಲ್ಲ. ಟಾಸ್ಕ್ ವಿಚಾರಕ್ಕೆ ನೋಡುಗರಿಗೆ ಹಾಗೆನ್ನಿಸಿರಬಹುದು. ಮನೆಯಲ್ಲಿದ್ದವರ ತಲೆಯಲ್ಲಿ ಸೆಲೆಬ್ರಿಟಿ ವರ್ಸಸ್ ಕಾಮನ್​ವ್ಯಾನ್ ಎಂಬ ಭಾವನೆ ಓಡಾಡುತ್ತಿರಲಿಲ್ಲ. ನೋಡುಗರಿಗೆ ಆ ಥರಹದ ಫೀಲ್ ಆಗಿರಬಹುದು. ನನಗಂತೂ ಆ ಥರದ ಅನುಭವ ಆಗಿಲ್ಲ.

# ನಿಮಗಿಷ್ಟವಾದ ಸ್ಪರ್ಧಿಗಳು ಯಾರ್ಯಾರು?

ಮನೆಯಲ್ಲಿ ಎಲ್ಲ 16 ಮಂದಿಯೂ ತುಂಬ ಕ್ಲೋಸ್ ಆಗಿದ್ದಾರೆ. ಒಬ್ಬೊಬ್ಬರದು ಒಂದೊಂದು ರೀತಿಯ ಮನೋಭಾವ. ಎಲ್ಲರೊಂದಿಗೆ ಖುಷಿಯಾಗಿ ಒಂದು ತಿಂಗಳ ಕಾಲ ಕಳೆದಿದ್ದು ಸದಾ ನೆನಪಿನಲ್ಲಿರುತ್ತದೆ. ಇದನ್ನು ಬಿಟ್ಟು ಜೆಕೆ ಹಾಗೂ ಚಂದನ್ ನನಗಿಷ್ಟ. ಇಬ್ಬರೂ ಸ್ಥಿರವಾಗಿ ಆಟವಾಡುತ್ತಿದ್ದಾರೆ. ಇಬ್ಬರಲ್ಲಿ ಒಬ್ಬರು ಗೆಲ್ಲಬಹುದು.

# ಒಟ್ಟಾರೆ ಈ ‘ಬಿಗ್ ಬಾಸ್’ ಜರ್ನಿಯಿಂದ ನೀವು ಪಡೆದುಕೊಂಡಿದ್ದೇನು?

ಒಳ್ಳೆಯ ಸ್ನೇಹಿತರು ಸಿಕ್ಕರು. ಇದ್ದಷ್ಟು ದಿನ ಒಳ್ಳೆಯ ಮನೆಯ ಅನುಭವ ಪಡೆದೆ. ಮೊದಲು ಕಲಿತಿದ್ದು ಶಿಸ್ತು. 16 ಹೊಸ ಮುಖಗಳೊಂದಿಗೆ ಹೇಗೆ ಬೆರೆಯಬೇಕೆಂಬುದನ್ನು ಕಲಿತೆ. ಒಂದು ಹೊಸ ಟೀಮ್ ಸಿಕ್ಕ ಖುಷಿ ಇದೆ.

# ಟಾಸ್ಕ್​ವೊಂದರಲ್ಲಿ ಸಮೀರಾಚಾರ್ಯ ಅವರ ಅಂಗಿಯನ್ನು ಜಗನ್ ಹರಿದಿದ್ದು ಸರೀನಾ?

ಆವತ್ತು ನನಗೇನಾಯಿತು ಅಂತಾನೇ ಗೊತ್ತಿಲ್ಲ. ನಾನೂ ಪಕ್ಕದಲ್ಲಿದ್ದೆ ನಿಜ. ಜಗಳ ಆಯಿತು ಅನ್ನೋದಷ್ಟೇ ಗೊತ್ತು. ಆಮೇಲೆ ಗಲಾಟೆನೂ ಆಯಿತು. ಆದರೆ ಉದ್ದೇಶ ಪೂರ್ವಕವಾಗಿ ಜಗನ್ ಆಚಾರ್ಯರ ಅಂಗಿ ಹರಿದಿಲ್ಲ. ಟಾಸ್ಕ್ ವಿಚಾರದಲ್ಲಿ ನಡೆದಿದೆ.

# ಜಗನ್-ಆಶಿಕಾ ಬಗ್ಗೆ ಹೊರಗಡೆ ಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ. ನೀವೇನಂತೀರಿ?

ಹಾಗೇನೂ ಇಲ್ಲ. ಆಶಿಕಾ ಎಲ್ಲರೊಂದಿಗೆ ಬೆರೆಯುತ್ತಾಳೆ. ಯಾರನ್ನಾದರೂ ಹಚ್ಚಿಕೊಂಡರೆ ಅವರನ್ನು ತುಂಬ ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ಅದೇ ರೀತಿ ಜಗನ್ ಕೂಡ. ಜಗನ್ ಹಾಗೂ ಆಶಿಕಾ ಒಳ್ಳೆಯ ಸ್ನೇಹಿತರು. ಕ್ಲೋಸ್ ಆಗಿದ್ದಾರೆ ಅನ್ನುವ ಒಂದೇ ಕಾರಣಕ್ಕೆ ಏನೇನೋ ಪಟ್ಟ ಕಟ್ಟುವುದು ಸರಿ ಅಲ್ಲ.

# ಹೊರಬಂದಿದ್ದೀರಿ, ಮುಂದಿನ ಪ್ಲಾ್ಯನ್?

ಸದ್ಯ ನನ್ನ ತಲೆಯಲ್ಲಿ ಏನೂ ಇಲ್ಲ. ತಂದೆ ಅವರು ಹುಷಾರಾಗುತ್ತಿದ್ದಾರೆ. ಅವರ ಆರೋಗ್ಯದ ಕಡೆ ಗಮನಹರಿಸುವುದು ನನ್ನ ಮೊದಲ ಕೆಲಸ. ಇದನ್ನು ಹೊರತುಪಡಿಸಿ ಡಿಸೆಂಬರ್ ಅಂತ್ಯದವರೆಗೂ ಕೆಲವು ವೈಯಕ್ತಿಕ ಕೆಲಸಗಳಿವೆ. ಜನವರಿಯಲ್ಲಿ ನನ್ನ ತೆಲುಗು ಸಿನಿಮಾ ‘ಕಣ್ಣಲ್ಲೂ ನಿರುಪಮೆ’ ಬಿಡುಗಡೆಯಾಗಲಿದೆ. ಅದರ ಪ್ರಚಾರ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕಿದೆ.

Leave a Reply

Your email address will not be published. Required fields are marked *

Back To Top