Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ತೆರೆಮೇಲೆ ಎಟಿಎಮ್ ಅಟ್ಯಾಕ್!

Wednesday, 18.04.2018, 3:05 AM       No Comments

ಬೆಂಗಳೂರು: 2013ರಲ್ಲಿ ಬೆಂಗಳೂರಿನ ಕಾರ್ಪೆರೇಷನ್ ವೃತ್ತದ ಬಳಿ ಇರುವ ಎಟಿಎಮ್ೊಂದರಲ್ಲಿ ನಡೆದ ಕೊಲೆ ಪ್ರಯತ್ನ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆ ಘಟನೆಯನ್ನೇ ಸ್ಪೂರ್ತಿಯಾಗಿ ಇಟ್ಟುಕೊಂಡು ಹೊಸ ನಿರ್ದೇಶಕ ಅಮರ್ ‘ಎಟಿಎಮ್ ಸಿನಿಮಾ ಮಾಡಿದ್ದಾರೆ. ‘ಎಟಿಎಮ್ ಎಂದರೆ ಅಟೆಂಪ್ಟ್ ಟು ಮರ್ಡರ್ ಎಂದರ್ಥ. ‘ನಾಲ್ಕು ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಆ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದ್ದರಿಂದ ಅದನ್ನೇ ಕಥಾವಸ್ತುವನ್ನಾಗಿ ಇಟ್ಟುಕೊಂಡು ಸಿನಿಮಾ ಮಾಡಬೇಕು ಎನಿಸಿತು. ಜನರಿಗೂ ಈ ಕಥೆ ಹೆಚ್ಚು ಆಪ್ತ ಆಗುತ್ತದೆ ಎಂಬುದು ನಮ್ಮ ಆಲೋಚನೆ’ ಎನ್ನುವ ನಿರ್ದೇಶಕರು ನೈಜ ಘಟನೆಯ ಎಳೆಗೆ ಒಂದಷ್ಟು ಕಾಲ್ಪನಿಕ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ. ಈ ಕ್ರೖೆಂ ಕಥೆಯ ಜತೆಗೊಂದು ಲವ್​ಸ್ಟೋರಿಯೂ ಇರಲಿದೆಯಂತೆ.

ಪ್ರಕರಣವನ್ನು ಬೇಧಿಸುವ ತನಿಖಾಧಿಕಾರಿಯಾಗಿ ವಿನಯ್ ಬಣ್ಣ ಹಚ್ಚಿದ್ದರೆ, ಸುದ್ದಿವಾಹಿನಿಯ ವರದಿಗಾರ್ತಿಯಾಗಿ ಹೇಮಲತಾ ಕಾಣಿಸಿಕೊಂಡಿದ್ದಾರೆ. ಮುಖ್ಯ ಖಳನಾಗಿ ಸೂರ್ಯ ನಟಿಸಿದ್ದು, ಶೋಭಿತಾ, ಚಂದು ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಸೆನ್ಸಾರ್ ಮಂಡಳಿಯಿಂದ ‘ಎಟಿಎಮ್​ಗೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಅಪರಾಧವನ್ನು ಆಧರಿಸಿದ ಚಿತ್ರವಾಗಿದ್ದರೂ ಎಲ್ಲಿಯೂ ಕ್ರೌರ್ಯ ಮತ್ತು ರಕ್ತವನ್ನು ಹೆಚ್ಚಾಗಿ ತೋರಿಸದಂತೆ ನಿರ್ದೇಶಕರು ಕಾಳಜಿ ವಹಿಸಿದ್ದಾರಂತೆ. ‘ಘಟನೆಯ ಸಿಸಿಟಿವಿ ದೃಶ್ಯಗಳನ್ನು ಈಗಾಗಲೇ ಜನರು ನೋಡಿ ಬೇಸರಪಟ್ಟುಕೊಂಡಿದ್ದಾರೆ. ನಾವು ಪುನಃ ತೆರೆಮೇಲೆ ಅದನ್ನೇ ಮರುಸೃಷ್ಟಿಸುವ ಗೋಜಿಗೆ ಹೋಗಿಲ್ಲ. ಅಪರಾಧ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ತೋರಿಸಿದ್ದೇವೆ.

ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ನೋಡಬಹುದು’ ಎನ್ನುತ್ತಾರೆ ಅಮರ್. ಚಿತ್ರದ ಮೂಲಕ ಪ್ರೇಕ್ಷಕರಿಗೆ ಮೆಸೇಜ್ ನೀಡುವುದಕ್ಕಿಂತ ಹಲ್ಲೆಗೆ ಒಳಗಾದ ಮಹಿಳೆಯ ಕಥೆಯನ್ನು ಹೃದಯರ್ಸ³ಯಾಗಿ ತೆರೆಗೆ ತುರುವುದೇ ಚಿತ್ರತಂಡದ ಉದ್ದೇಶವಂತೆ.

ಅಂದಹಾಗೆ, ಈ ಹಿಂದೆ ತೆರೆಕಂಡ ‘ಶುದ್ಧಿ’ ಚಿತ್ರದಲ್ಲೂ ಎಟಿಎಮ್ ಹಲ್ಲೆಯ ವಿವರಗಳಿದ್ದವು. ಈ ಬಗ್ಗೆ ಕೇಳಿದರೆ ಉತ್ತರಿಸುವ ನಿರ್ದೇಶಕರು, ‘ಆ ಚಿತ್ರದಲ್ಲಿ ಅದರ ಒಂದು ಸಣ್ಣ ಉಲ್ಲೇಖ ಇತ್ತು ಅಷ್ಟೇ. ಆದರೆ ನಮ್ಮ ಇಡೀ ಚಿತ್ರದ ಕಥೆಯೇ ಆ ಘಟನೆಗೆ ಸಂಬಂಧಿಸಿದ್ದು’ ಎನ್ನುತ್ತಾರೆ. ಆನಿಮೇಷನ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ಅವರಿಗೆ ಇದು ಚೊಚ್ಚಲ ಸಿನಿಮಾ ಪ್ರಯತ್ನ. ಇದೇ ಶುಕ್ರವಾರ (ಏ.20) ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಎಟಿಎಮ್ ತೆರೆಕಾಣಲಿದೆ.

Leave a Reply

Your email address will not be published. Required fields are marked *

Back To Top