Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ತೆರಿಗೆ ವಸೂಲಾತಿಗೆ ಕ್ರಮ ಕೈಗೊಳ್ಳಿ

Friday, 13.07.2018, 3:11 AM       No Comments

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪಿಯಲ್ಲಿನ ವಾಣಿಜ್ಯ ಮಳಿಗೆ, ಕಲ್ಯಾಣ ಮಂಟಪ, ಖಾಸಗಿ ಶಾಲೆಗಳು ಲಕ್ಷಾಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಸದಸ್ಯರು ಗುರುವಾರ ತರಾಟೆ ತೆಗೆದುಕೊಂಡರು.

ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್ ನೇತೃತ್ವದಲ್ಲಿ ಗುರುವಾರ ನಗರಸಭೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ತೆರಿಗೆ ವಸೂಲಾತಿ ಕುಂಠಿತವಾಗಿರುವ ಕುರಿತು ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಚರ್ಚೆ ನಡೆಯಿತು.

ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಎರಡನೆ ನೋಟಿಸ್ ನೀಡಿ ತೆರಿಗೆ ಪಾವತಿ ಮಾಡುವಂತೆ ಹೇಳಿಲ್ಲ. ಕಲ್ಯಾಣ ಮಂದಿರ, ವಾಣಿಜ್ಯ ಮಳಿಗೆ ಮಾಲೀಕರು 5 ಲಕ್ಷ ರೂಪಾಯಿಯಿಂದ 8 ಲಕ್ಷ ರೂ.ವರೆಗೆ ಬಾಕಿ ಉಳಿಸಿಕೊಂಡಿವೆ. ಕೆಲವು ವಾರ್ಡ್​ಗಳಲ್ಲಿ ನೂರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿದ್ದರೂ ಅಧಿಕಾರಿಗಳು 17 ಮಳಿಗೆಗಳು ಎಂದು ಪಟ್ಟಿ ಮಾಡಿದ್ದಾರೆ ಎಂದು ಸದಸ್ಯರಾದ ಆರ್.ಕೆಂಪರಾಜ್,ಎಂ.ಶಿವಕುಮಾರ್, ಮಲ್ಲೇಶ್, ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.

ತೆರಿಗೆ ವಸೂಲಿಯಲ್ಲಿ ಶೇ.70 ಪ್ರಗತಿ ಸಾಧಿಸಬೇಕು. ಇಲ್ಲವಾದರೆ ಆಯಾ ವಾರ್ಡ್​ನ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಸಂಬಳ ತಡೆಹಿಡಿಯಲಾಗುವುದು. ಇದಕ್ಕಾಗಿಯೇ ವಿಶೇಷ ಸಭೆ ನಡೆಸಲು ದಿನಾಂಕ ನಿಗದಿಗೊಳಿಸಲಾಗುವುದು ಎಂದು ಟಿ.ಎನ್.ಪ್ರಭುದೇವ್ ತಿಳಿಸಿದರು.

ಸದಸ್ಯ ಎಂ.ಮಲ್ಲೇಶ್ ಮಾತನಾಡಿ, ನಗರದ ಮಧ್ಯ ಭಾಗದಲ್ಲಿರುವ ಗುಜರಿ ವಸ್ತು ಸಂಗ್ರಹಿಸುವ ಅಂಗಡಿಗಳನ್ನು ಹೊರಭಾಗಕ್ಕೆ ಸ್ಥಳಾಂತರಿಸಬೇಕು. ಇತ್ತೀಚೆಗೆ ಡಿ.ಕ್ರಾಸ್ ರಸ್ತೆಯಲ್ಲಿನ ಗುಜರಿ ವಸ್ತು ಸಂಗ್ರಹಿಸುವ ಅಂಗಡಿಗೆ ಬೆಂಕಿ ತಾಗಿ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದೆ ಎಂದರು.

ಶೌಗೃಹ ನಿರ್ವಣಕ್ಕಿಲ್ಲ ಹಣ

ಸ್ವಚ್ಛಭಾರತ್ ಮಿಷನ್ ವತಿಯಿಂದ ಬಯಲು ಶೌಚಮುಕ್ತ ನಗರ ಪ್ರಶಸ್ತಿ ಪಡೆಯಲಾಗಿದೆ. ಆದರೆ ಶೌಚಗೃಹ ನಿರ್ವಿುಸಿಕೊಳ್ಳಲು 1,299 ಅರ್ಜಿ ಸಲ್ಲಿಸಿದ್ದರೂ ಹಣ ನೀಡಿಲ್ಲ. ಅನೇಕರು ನಾಗರಕೆರೆಯಲ್ಲಿ ಬಯಲು ಶೌಚಗೃಹವನ್ನೇ ಅವಲಂಭಿಸಿದ್ದಾರೆ ಎಂದು ಸದಸ್ಯರಾದ ಎಂ.ಮಲ್ಲೇಶ್, ಪ್ರಕಾಶ್ ಸಭೆಯ ಗಮನ ಸೆಳೆದರು.

ನೀತಿ ಸಂಹಿತೆಯ ಕಾರಣದಿಂದಾಗಿ ಶೌಚಗೃಹ ನಿರ್ವಣಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಹಣ ಪಾವತಿ ಮಾಡುವುದು ವಿಳಂಬವಾಗಿದೆ ಎಂದು ಟಿ.ಎನ್.ಪ್ರಭುದೇವ್ ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ಪೌರಾಯುಕ್ತ ಆರ್.ಮಂಜುನಾಥ್, ಸದಸ್ಯರಾದ ವಡ್ಡರಹಳ್ಳಿರವಿ, ಮಂಜುಳಾ ಆಂಜನೇಯ, ಕಾರ್ಯನಿರ್ವಾಹಕ ಅಂಬಿಯಂತರ ಶೇಕ್ ಫಿರೋಜ್ ಇದ್ದರು.

 

ಫ್ಲೆಕ್ಸ್ ಅಳವಡಿಸಲು ಅನುಮತಿ ಕಡ್ಡಾಯ: ನಗರದಲ್ಲಿ ಫ್ಲೆಕ್ಸ್, ಬ್ಯಾನರ್​ಗಳ ಹಾವಳಿ ಮಿತಿಮೀರಿದೆ. ಶುಲ್ಕ ಪಾವತಿಸದ ಫ್ಲೆಕ್ಸ್ ಕಿತ್ತುಹಾಕುವಂತೆ ನಿರ್ಣಯಿಸಲಾಗಿತ್ತು. ಆದರೆ ನಗರಸಭೆ ಅಧಿಕಾರಿಗಳು ಶಾಸಕರ ಭಾವಚಿತ್ರವಿರುವ ಫ್ಲೆಕ್ಸ್ ಕಿತ್ತುಹಾಕುತ್ತಿಲ್ಲ. ಯಾರ ಭಾವಚಿತ್ರವಿದ್ದರೂ ಅನುಮತಿ ಪಡೆಯದಿದ್ದರೆ ಕಿತ್ತು ಹಾಕಬೇಕು ಎಂದು ಪಿ.ಸಿ.ಲಕ್ಷ್ಮೀನಾರಾಯಣ್ ಆಗ್ರಹಿಸಿದರು. ಧ್ವನಿಗೂಡಿಸಿದ ಸದಸ್ಯ ಶಿವಕುಮಾರ್, ನಗರದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಕಟ್ಟದಂತೆ ಕ್ರಮ ಕೈಗೊಳ್ಳಲು ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ನಗರಸಭೆಯಿಂದ ಶುಲ್ಕ ಪಾವತಿಮಾಡಿಸಿಕೊಂಡು ಅನುಮತಿ ನೀಡುವಂತಿಲ್ಲ ಎಂದರು. ನಗರಸಭೆಗೆ ಶುಲ್ಕ ಪಾವತಿ ಮಾಡಿರುವ ಅನುಮತಿ ಪತ್ರ ಇದ್ದರೆ ಫ್ಲೆಕ್ಸ್ ಮುದ್ರಿಸುವಂತೆ ಅಂಗಡಿಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಟಿ.ಎನ್.ಪ್ರಭುದೇವ್ ಉತ್ತರಿಸಿದರು.

Leave a Reply

Your email address will not be published. Required fields are marked *

Back To Top