Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ತೆರಿಗೆಗೆ ಹೊಸ ಸೂಚ್ಯಂಕ

Monday, 25.09.2017, 3:00 AM       No Comments

| ಸಿಎ ನಾರಾಯಣ ಭಟ್

ಕೇಂದ್ರ ಸರ್ಕಾರ ಕಳೆದ ಮುಂಗಡಪತ್ರದಲ್ಲಿ ಪ್ರಸ್ತಾಪ ಮಾಡಿದಂತೆ, ಕ್ಯಾಪಿಟಲ್ ಸ್ಥಿರ ಆಸ್ತಿ ಮಾರಿದಾಗ ಬರುವ ಲಾಭವನ್ನು ಕಂಡುಹಿಡಿಯಲು ಕೆಲವು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಈ ವರ್ಷದಿಂದ ಸ್ಥಿರಾಸ್ತಿಗಳನ್ನು ಮಾರಾಟ ಮಾಡಿದಾಗ ಲಾಭ ಲೆಕ್ಕ ಹಾಕುವ ವಿಧಾನವೂ ಬದಲಾಗಿದೆ. ಈ ಹೊಸ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಅಲ್ಪಾವಧಿ ಹಾಗೂ ದೀರ್ಘಾವಧಿ ಆಸ್ತಿಗಳು: ನಾವು ಮಾರಾಟ ಮಾಡ ಹೊರಟಿರುವ ಆಸ್ತಿಯನ್ನು ನಾವು ಅನುಭವಿಸತೊಡಗಿರುವ ಅವಧಿಗೆ ಅನುಗುಣವಾಗಿ ಅಲ್ಪಾವಧಿ ಮತ್ತು ದೀರ್ಘಾವಧಿ ಎಂದು ಪರಿಗಣಿಸಲಾಗುತ್ತದೆ. ಮೂರು ವರ್ಷ ಕಾಲ ನಾವು ಆಸ್ತಿಯನ್ನು ಹೊಂದಿದ್ದರೆ ಅಂಥ ಸ್ಥಿರಾಸ್ತಿಯನ್ನು ದೀರ್ಘಾವಧಿ ಎಂದು ಕಳೆದ ವರ್ಷದವರೆಗೆ ಪರಿಗಣಿಸಲಾಗುತ್ತಿತ್ತು. ಈ ವರ್ಷದಿಂದ ಆ ಅವಧಿಯನ್ನು ಎರಡು ವರ್ಷಗಳಿಗೆ ಇಳಿಸಲಾಗಿದೆ. ಇದರಂತೆ ಮನೆ, ನಿವೇಶನಗಳನ್ನು ಖರೀದಿಸಿ ಎರಡು ವರ್ಷಗಳ ನಂತರ ಮಾರಾಟ ಮಾಡಿದರೆ ಅದನ್ನು ‘ದೀರ್ಘಾವಧಿ ಆಸ್ತಿ’ ಎಂದು ಪರಿಗಣಿಸಲಾಗುವುದು. ದೀರ್ಘಾವಧಿ ಆಸ್ತಿ ಎಂದೆನಿಸಿದರೆ ಮಾತ್ರ, ಖರೀದಿ ಅಥವಾ ಮನೆ ಕಟ್ಟಿದ ವೆಚ್ಚಕ್ಕೆ ನಾವು ಸೂಚ್ಯಂಕ ವೃದ್ಧಿ ಅಳವಡಿಸಬಹುದು. ದೀರ್ಘಾವಧಿ ಆಸ್ತಿಯಾದಾಗ ಮಾತ್ರ ಕ್ಯಾಪಿಟಲ್ ಗೇನ್ಸ್ ತೆರಿಗೆಗೆ ವಿನಾಯಿತಿಗಳು ಲಭ್ಯವಾಗುತ್ತವೆ. ಲಾಭವನ್ನು ವಾಸಮನೆ ಖರೀದಿಗೆ ಅಥವಾ ಕಟ್ಟಿಸಲು ಬಳಸಿದರೆ ತೆರಿಗೆ ವಿನಾಯಿತಿ ಲಭ್ಯ. ಅಂತೆಯೇ ಸರ್ಕಾರ ಹೇಳಿದ ಬಾಂಡ್​ಗಳಲ್ಲಿ 50 ಲಕ್ಷ ರೂಪಾಯಿವರೆಗೆ ವಿನಿಯೋಗಿಸಿದರೆ ತೆರಿಗೆ ವಿನಾಯಿತಿ ಉಂಟು. ದೀರ್ಘಾವಧಿ ಕ್ಯಾಪಿಟಲ್ ಲಾಭಕ್ಕೆ 20% ತೆರಿಗೆ ಇದೆ. ಬದಲಿಗೆ ಅಲ್ಪಾವಧಿ ಕ್ಯಾಪಿಟಲ್ ಲಾಭವಾಗಿದ್ದರೆ ಮೇಲೆ ಹೇಳಿದ ಯಾವುದೆ ರೀತಿಯ ವಿನಾಯಿತಿ/ರಿಯಾಯಿತಿ ಇರುವುದಿಲ್ಲ. ಬದಲಿಗೆ ತೆರಿಗೆ ದರವೂ ತಮ್ಮ ಇತರ ಆದಾಯಗಳ ಜೊತೆ ಸೇರಿ 30% ಆಗಿರಬಹುದಾಗಿರುತ್ತದೆ. ಈ ಕುರಿತಾದ ಮತ್ತಷ್ಟು ವಿವರಗಳನ್ನು ಮುಂದಿನ ಕಂತಿನಲ್ಲಿ ನೋಡೋಣ.

Leave a Reply

Your email address will not be published. Required fields are marked *

Back To Top