Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ತೆಪ್ಪೋತ್ಸವ ಸ್ಪರ್ಧೆ

Monday, 02.10.2017, 3:00 AM       No Comments

ಕೊಲ್ಹಾರ (ವಿಜಯಪುರ): ಅವಳಿ ಜಿಲ್ಲೆಯ ಜೀವನಾಡಿ ಕೃಷ್ಣಾ ನದಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಮೀನುಗಾರರಿಗೆ ರಾಜ್ಯ ಮಟ್ಟದ ತೆಪ್ಪೋತ್ಸವ (ಬುಟ್ಟಿ) ಸ್ಪರ್ಧೆ ಜನಾಕರ್ಷಿಸಿತು.

ಕೊರ್ತಿ-ಕೊಲ್ಹಾರ ಸೇತುವೆ ಪುನರ್ ನಿರ್ಮಾಣ ಹೋರಾಟ ಸಮಿತಿ, ಮೀನುಗಾರಿಕೆ ಇಲಾಖೆ ವಿಜಯಪುರ ಹಾಗೂ ಪಪಂ ಸಹಯೋಗದಲ್ಲಿ ಸ್ನೇಹ ಮಿಲನ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಿತ್ತು. 3 ಕಿ.ಮೀ. ಉದ್ದದ ಕೊರ್ತಿ- ಕೊಲ್ಹಾರ ಸೇತುವೆಯ ಬೀಳಗಿ ತಾಲೂಕಿನ ಟಕ್ಕಳಕಿ ದಡದಿಂದ ಕೊಲ್ಹಾರ ದಡದವರೆಗೆ ಸಮುದ್ರದಂತೆ ಕಾಣುವ ನದಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಸೇತುವೆ ಮೇಲ್ಗಡೆ ನಿಂತು ಹರಿಗೋಲು ಸ್ಪರ್ಧೆಯ ದೃಶ್ಯಾವಳಿಗಳನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಹರಿಗೋಲು ಸ್ಪರ್ಧೆಗೆ ಬಾವುಟ ತೋರಿಸುವ ಮೂಲಕ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ರಾಮನಗೌಡ ಜಕ್ಕನಗೌಡರ ಚಾಲನೆ ನೀಡಿದರು. ಬೀಳಗಿ ಶುಗರ್ಸ್ ಪ್ರಥಮ, ಗಂಗಾಧರ ಕುಂಟೋಜಿ ದ್ವಿತೀಯ, ಭೀಮನಗೌಡ ಪಾಟೀಲ ತೃತೀಯ ಬಹುಮಾನ ಕೊಡ ಮಾಡಿದರು.

ದುರುಗಪ್ಪ, ಹನುಮಂತ ಜೋಡಿಗೆ ಪ್ರಥಮ ಸ್ಥಾನ ಅರಳದಿನ್ನಿಯ ದುರುಗಪ್ಪ, ಹನುಮಂತ ಜೋಡಿ ತಂಡ ಪ್ರಥಮ ಸ್ಥಾನ(15,000 ರೂ.) ತಮ್ಮದಾಸಿಕೊಂಡಿತು. ಚಂದ್ರು, ಮಂಜು ಜೋಡಿ ದ್ವಿತೀಯ ಸ್ಥಾನ (10,000 ರೂ.), ತಾಯಪ್ಪ, ಅನೀಲ ಜೋಡಿ ತೃತೀಯ ಸ್ಥಾನ (7,500 ರೂ.) ಗಳಿಸಿದರು.

 

Leave a Reply

Your email address will not be published. Required fields are marked *

Back To Top