Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

ತುರ್ತು ಆರೋಗ್ಯ ಸೇವೆಗಾಗಿ ಬೈಕ್ ಆಂಬುಲೆನ್ಸ್

Wednesday, 17.01.2018, 3:02 AM       No Comments

ಬೆಂಗಳೂರು: ‘ಇಲ್ಲಿ ಅವಸರವೂ ಸಮಾಧಾನದ ಬೆನ್ನೇರಿದೆ’ ಇದು ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿನ ಸಾಲು. ಇದು ಬೆಂಗಳೂರಿನ ಸಂಚಾರ ದಟ್ಟಣೆಗೆ ಅನ್ವಯವಾಗುತ್ತದೆ. ಏಕೆಂದರೆ ಇಲ್ಲಿನ ಟ್ರಾಫಿಕ್ ನೋಡಿದರೆ ಎಷ್ಟೇ ತುರ್ತು ಇದ್ದರೂ ನಿಧಾನವಾಗಿಯೇ ಸಂಚರಿಸಬೇಕಾಗುತ್ತಿದೆ. ಅದು ಜೀವ ಉಳಿಸುವ ಆಂಬುಲೆನ್ಸ್​ಗಳಿಗೂ ಅನ್ವಯವಾಗುತ್ತದೆ.

ಈ ರೀತಿಯ ಸಂಚಾರ ದಟ್ಟಣೆ ಸಮಸ್ಯೆಯಿಂದಲೇ ಅನೇಕ ರೋಗಿಗಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಅಸು ನೀಗಿದ ಉದಾಹರಣೆಗಳಿವೆ. ಈ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿ 100 ಬೈಕ್ ಆಂಬುಲೆನ್ಸ್ ಖರೀದಿಗೆ ಮುಂದಾಗಿದೆ. 2018-19ನೇ ಸಾಲಿನಲ್ಲಿ ಈ ಯೋಜನೆಗಾಗಿಯೇ 1 ಕೋಟಿ ರೂ. ಮೀಸಲಿರಿಸಲಾಗುತ್ತಿದೆ.

ಪುರುಷ ಮತ್ತು ಮಹಿಳಾ ಸವಾರರು: ಮಹಿಳಾ ರೋಗಿಗಳಿಗೆ ಸ್ಥಳಕ್ಕೆ ತೆರಳಿ ತುರ್ತು ಚಿಕಿತ್ಸೆ ನೀಡಲು ಮತ್ತು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು 100 ಬೈಕ್ ಆಂಬುಲೆನ್ಸ್​ಗಳ ಪೈಕಿ 50ರಲ್ಲಿ ಮಹಿಳಾ ಸವಾರರಿರಲಿದ್ದಾರೆ. ಉಳಿದ 50 ಆಂಬ್ಯುಲೆನ್ಸ್​ಗಳಲ್ಲಿ ಪುರುಷ ಸವಾರರು ತುರ್ತು ಸೇವೆ ನೀಡಲಿದ್ದಾರೆ. ಅಲ್ಲದೆ ಈ ಸವಾರರು ಪರಿಣತ ಶುಶ್ರೂಷಕರಾಗಿರಲಿದ್ದು, ಅವರಿಗೆ ಬಿಬಿಎಂಪಿಯಿಂದಲೇ ವೇತನ ನಿಗದಿ ಮಾಡಲಾಗುತ್ತದೆ.

2 ವಾರ್ಡ್​ಗೆ ಒಂದು ಆಂಬುಲೆನ್ಸ್

ಯೋಜನೆ ಜಾರಿ ಬಗ್ಗೆ ಈಗಾಗಲೆ ಬಿಬಿಎಂಪಿ ಸರ್ಕಾರದೊಂದಿಗೂ ರ್ಚಚಿಸಿದೆ. ಅಲ್ಲದೆ, 2018-19ನೇ ಸಾಲಿನ ಬಜೆಟ್​ನಲ್ಲಿ ನೂತನ ಬೈಕ್ ಆಂಬುಲೆನ್ಸ್ ಸೇವೆಯನ್ನು ಘೋಷಿಸಲಾಗುತ್ತದೆ. ಅದರಂತೆ 198 ವಾರ್ಡ್​ಗಳಲ್ಲಿ ತಲಾ 2 ವಾರ್ಡ್​ಗೆ ಒಂದು ಆಂಬುಲೆನ್ಸ್ ಸೇವೆ ನೀಡಲಿದೆ.ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆರೋಗ್ಯ ಸಂಬಂಧಿ ತುರ್ತು ಸೇವೆ ನೀಡಲು ಆರೋಗ್ಯ ಇಲಾಖೆ ಈಗಾಗಲೆ ಬೈಕ್ ಆಂಬ್ಯುಲೆನ್ಸ್ ಸೇವೆ ಜಾರಿಗೆ ತಂದಿದೆ. ಕಳೆದೆರಡು ವರ್ಷಗಳಿಂದ 19 ಬೈಕ್ ಆಂಬ್ಯುಲೆನ್ಸ್​ಗಳ ಸೇವೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

Back To Top