Saturday, 23rd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ತುಂಬಿ ಹರಿದ ಹಳ್ಳಕೊಳ್ಳಗಳು

Wednesday, 13.06.2018, 5:29 AM       No Comments

ಬೇಲೂರು: ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ.

ಅರೇಹಳ್ಳಿ ಹೋಬಳಿಯ ಸುಂಡೇಕೆರೆ-ನಾರ್ವೆ ಮಾರ್ಗ ಮಾಧ್ಯದ ಸೇತುವೆ ಹಾಗೂ ನಾರ್ವೆ ಗ್ರಾಮದ ಹದ್ದಿಕಟ್ಟೆ ಹಳ್ಳ ತುಂಬಿ ಸಂಪರ್ಕ ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ಜನ, ಜಾನುವಾರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಹದ್ದಿಕಟ್ಟೆ ಹಳ್ಳದ ನೀರು ಗದ್ದೆ ಹಾಗೂ ತೋಟಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿದೆ. ಅಲ್ಲದೆ, ತಗ್ಗು ಪ್ರದೇಶದಲ್ಲಿರುವ ಈ ಭಾಗದ ಸುಲಗಳಲೆ, ಗೊರವನಹಳ್ಳಿ ಹಾಗೂ ಹಳೇ ನಾರ್ವೆ ಗ್ರಾಮಗಳ ಸಂಪರ್ಕ ರಸ್ತೆ ಬಂದ್ ಆಗಿದ್ದು, ಗ್ರಾಮಗಳು ದ್ವೀಪದಂತಾಗಿವೆ. ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಗ್ರಾಮಸ್ಥರು ಗ್ರಾಮದಲ್ಲೇ ಉಳಿಯುವ ಸ್ಥಿತಿ ನಿರ್ವಣವಾಗಿದೆ.

ಕೊಂಚ ಬಿಡುವು ನೀಡಿದ ಮಳೆ: (ಅರಕಲಗೂಡು) ತಾಲೂಕಿನಲ್ಲಿ ಎಡಬಿಡದೆ ಅಬ್ಬರಿಸುತ್ತಿದ್ದ ವರ್ಷಧಾರೆ ಮಂಗಳವಾರ ಸ್ವಲ್ಪ ಬಿಡುವು ನೀಡಿದ್ದು, ರೈತರಲ್ಲಿ ನಿರಾಳ ಭಾವ ಮೂಡಿಸಿತು.

ಮಂಗಳವಾರ ಬೆಳಗ್ಗೆ ಸ್ವಲ್ಪ ಹೊತ್ತು ಸುರಿದ ಮಳೆ ದಿನವಿಡೀ ಆಗಾಗ್ಗೆ ತುಂತುರು ಹನಿಯಾಗಿ ಉದುರಿದ್ದು ಬಿಟ್ಟರೆ ಜೋರಾಗಿ ಆರ್ಭಟಿಸಲಿಲ್ಲ. ರೈತರು ಜಮೀನುಗಳತ್ತ ತೆರಳಿ ಬೆಳೆ ಪ್ರದೇಶದಲ್ಲಿ ನಿಂತ ಮಳೆಯ ನೀರನ್ನು ಹೊರಹಾಕಿ ಬೆಳೆ ರಕ್ಷಣೆಗೆ ಮುಂದಾದರು.

ಸೋಮವಾರ ದಿನವಿಡೀ ಒಂದೇ ಸಮನೆ ಸುರಿಯುತ್ತಿದ್ದ ಮಳೆಯಿಂದಾಗಿ ಕೆರೆ, ಕಟ್ಟೆಗಳಿಗೆ ನೀರು ಬಂದು ಕೋಡಿ ಬಿದ್ದಿವೆ. ಜಮೀನುಗಳು ಜಲಾವೃತವಾಗಿ ಬೆಳೆ ಹಾಳಾಗುವ ಭೀತಿ ಹುಟ್ಟಿಸಿದೆ. ಬಿತ್ತನೆಯಾಗಿರುವ ಆಲೂಗಡ್ಡೆ ಮಣ್ಣಿನಲ್ಲಿ ಕರಗುತ್ತಿದ್ದು, ಮೊಳಕೆಯೊಡೆಯದೆ ನಷ್ಟಕ್ಕೀಡಾಗುತ್ತಿದೆ. ಅತಿಯಾದ ತೇವಾಂಶದಿಂದ ತಂಬಾಕು ಗಿಡಗಳು ನೆಲ ಕಚ್ಚುತ್ತಿದ್ದರೆ, ಮುಸುಕಿನ ಜೋಳ, ದ್ವಿದಳ ಧಾನ್ಯ ಬೆಳೆಗಳು ಕೊಳೆಯಲಾರಂಭಿಸಿವೆ.

ತಹಸೀಲ್ದಾರ್ ಭೇಟಿ: ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ ತಹಸೀಲ್ದಾರ್ ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು.

ಭಾರಿ ಮಳೆಯಿಂದಾಗಿ ಕೆಲ್ಲೂರು ಕೆರೆ ಏರಿ ಎರಡು ಭಾಗದಲ್ಲಿ ಹಾಳಾಗುತ್ತಿದ್ದು, ಈ ಮಾರ್ಗದಲ್ಲಿ ಓಡಾಡುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಹೀಗಾಗಿ ತಡೆಗೋಡೆ ನಿರ್ವಿುಸಿ ರಸ್ತೆ ಸಂಚಾರ ವ್ಯವಸ್ಥೆ ಸರಿಪಡಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶಶಿಕುಮಾರ್ ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *

Back To Top