Sunday, 24th June 2018  

Vijayavani

ಕಾವೇರಿ ನೀರು ಪ್ರಾಧಿಕಾರ ಸಮಿತಿ ರಚನೆ - ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಸರ್ಕಾರದಿಂದ ಪುಸ್ತಕ        ಮಾಜಿ ಸಿಎಂ ಸಿದ್ದುಗೆ ಎಚ್​ಡಿಕೆ ಬಂಪರ್ ಆಫರ್​ - ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ?        ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆ ಆರೋಪ - ಆತ್ಮಹತ್ಯೆ ಯತ್ನ - ಇದೆಲ್ಲಾ ಷಡ್ಯಂತ್ರ ಅಂದ್ರು ಮುನಿಯಪ್ಪ        ಕಲ್ಲಿನ ಹಾರ ಬೇಕಾದ್ರೆ ಕೊರಳಿಗೆ ಹಾಕಿ - ಸುಗಂಧರಾಜದ ಹೂವಿನ ಹಾರ ಬೇಡ್ವೇಬೇಡ - ಸಚಿವ ಡಿಕೆಶಿ ಆಕ್ಷೇಪ        ವಿದ್ಯುತ್ ಉಳಿಸಲು ಕೇಂದ್ರದ ಮೆಗಾ ಪ್ಲಾನ್ - ಇನ್ಮುಂದೆ 24 ಡಿಗ್ರಿಗೆ ಎಸಿ ಡಿಫಾಲ್ಟ್​ ಸೆಟ್ಟಿಂಗ್       
Breaking News

ತಿಳಿಯಬೇಕಾದವರಿಗೆ ಇದರರ್ಥ ತಿಳಿಯುವುದೆ?

Tuesday, 21.03.2017, 9:19 AM       No Comments

ಪಂಚರಾಜ್ಯ ಚುನಾವಣೆಯಲ್ಲಿ ಭಾಜಪಕ್ಕೆ ಸಿಕ್ಕಿರುವ ಜಯಭೇರಿ ಬರೀ ಚುನಾವಣಾ ಜಯಾಪಜಯಗಳ ಪ್ರಶ್ನೆಯದಲ್ಲ. ಇದು ವೋಟುಬ್ಯಾಂಕು ರಾಜಕೀಯ ಅಂತ್ಯವಾಗುತ್ತಿರುವುದರ ಸೂಚನೆ. ಹೊಸಯುಗದ ಪ್ರಜ್ಞಾ ಉದಯದ ಸ್ಪಷ್ಟ ಲಕ್ಷಣ. ಇದನ್ನು ಅರಿಯದವರನ್ನು ಯಾರೂ ಕಾಪಾಡಲಾಗದು.

 ರಾಜಕೀಯದಲ್ಲಿ ಮಹತ್ವಾಕಾಂಕ್ಷಿ, ಅಹಂಕಾರಿಗಳಿಗೆ ಮಂಕು ಅಡರುವುದು ಯುಗ ಯುಗಗಳಲ್ಲೂ ಇದ್ದದ್ದೇ. ಶ್ರೀರಾಮನನ್ನು ‘ಅನಾರ್ಯ, ಹೇಡಿ, ತಂದೆಯಿಂದ ರಾಜ್ಯಭ್ರಷ್ಟನಾದವ, ಪತ್ನಿಯನ್ನು ರಕ್ಷಿಸಿ ಉಳಿಸಿಕೊಳ್ಳಲಾರದವ, ಕಪಿಕರಡಿಗಳನ್ನು ಆಶ್ರಯಿಸಿದವ’ ಎಂದೆಲ್ಲಾ ನಿಂದಿಸಿ ಮಾರೀಚನಿಂದ ಬೈಸಿಕೊಂಡ ರಾವಣನಿಗೆ ರಾಮಶಕ್ತಿ ಅರಿವಾಗಲೇ ಇಲ್ಲ. ಸೋದರ, ಮಕ್ಕಳು, ಮಿತ್ರರು, ಸೇನಾಪತಿ, ಮಂತ್ರಿಗಳೆಲ್ಲ ರಾಮನಿಂದ ಹತರಾದರೂ ರಾವಣನಿಗೆ ಮಂಕು ಬಿಡಲಿಲ್ಲ. ‘ಋಷೀಣಾಂ ಅಭಯಂ ದತ್ತಂ ಕೃತಕ್ಷೇಮಾಶ್ಚ ದಂಡಕಾಃ’ ಎಂದು ಶೂರ್ಪನಖಿ ಹೇಳಿದರೂ ಮಂಕು ಬಿಡಲಿಲ್ಲ. ನೀವು ಎಲ್ಲೋ ಹೋಗುತ್ತಾ ದಾರಿಯಲ್ಲಿ ನಿಮ್ಮ ಕೈಕೋಲು ಜಾರಿ ಕೆಳಗೆ ಬೀಳುತ್ತದೆ ಎನ್ನಿ, ದೂರದಲ್ಲಿ ಮಲಗಿದ್ದ ನಾಯಿ ಎದ್ದು ಓಡುತ್ತದೆ. ನಾಯಿಗೆ ಭಯ! ಮಂಕು ಇಲ್ಲ. ‘ತನಗೆ ಇವನಿಂದ ಏಟು ತಪ್ಪಿದ್ದಲ್ಲ’ ಎಂಬುದು ಎಚ್ಚರಿಕೆಯ ಓಟ. ಶೂರ್ಪನಖಿ ಹೇಳಿದಳು, ‘ರಾಮ ಅಲ್ಲಿ ಜನಸ್ಥಾನದಲ್ಲಿ ದಂಡಕಾರಣ್ಯದ ಋಷಿಗಳಿಗೆ ಅಭಯ ಕೊಟ್ಟಾಯಿತು ಎಂದರೆ ರಾವಣ! ನಿನಗೆ ಮೃತ್ಯು ಬಂದಿದೆ ಎಂದು ಅರ್ಥ’ ಎಂದರೂ ರಾವಣನಿಗೆ ಉಪೇಕ್ಷೆ! ಕೃಷ್ಣಾರ್ಜುನರು ಒಂದೇ ರಥದಲ್ಲಿ ಕುಳಿತಿದ್ದು, ಸಂಜಯ ಹೇಳಿದರೂ ಧೃತರಾಷ್ಟ್ರನಿಗೆ ಅರ್ಥವಾಗಲಿಲ್ಲ. ಅದು ಈಗಣ ಕಾಂಗ್ರೆಸ್ಸಾದಿ ಎಲ್ಲ ಎಡಪಂಥೀಯರ, ರಾಷ್ಟ್ರವಿರೋಧಿ ಶಕ್ತಿಗಳ, ಪಕ್ಷಗಳ, ಮಾಧ್ಯಮದವರ, ಭಾರತದ ಒಳಹೊರ ವಿರೋಧಿಗಳ ಸ್ಥಿತಿ. ನಿಮಗೂ ಅರ್ಥವಾಗದಾದರೆ ಎಲ್ಲಿ ಸಲ್ಲುತ್ತೀರೋ ಯೋಚಿಸಿ!

ಈಗಣ ಪಂಚರಾಜ್ಯ ಚುನಾವಣೆಗಳಲ್ಲಿ ಮೋದಿ ಜಯಭೇರಿ, ಭಾಜಪದ ಜಯಭೇರಿ ಬರೀ ಚುನಾವಣಾ ಜಯಾಪಜಯಗಳ ಪ್ರಶ್ನೆಯದಲ್ಲ! ಹೇಳಿಬಿಡಲೇ? ಪೊಳ್ಳು ಸೆಕ್ಯುಲರಿಸಂನ ಸಾವಿನ ಪ್ರತ್ಯಕ್ಷ ಸೂಚನೆ. ಅಥವಾ ವೋಟುಬ್ಯಾಂಕು ರಾಜಕೀಯದ ಅಂತ್ಯಕಾಲದ ಸೂಚನೆ. ಹೊಸಯುಗದ ಪ್ರಜ್ಞಾ ಉದಯದ ಸ್ಪಷ್ಟ ಲಕ್ಷಣ. ಈ ಸೂಚನೆ ಕಾಂಗ್ರೆಸ್ಸು, ಎಡಪಕ್ಷಗಳ ಚುರುಕುಗಣ್ಣರಿಗೆ ಮೋದಿ ಗುಜರಾತದ ಮುಖ್ಯಮಂತ್ರಿ ಗಾದಿ ಏರಿದ ದಿನವೇ ಸ್ವಲ್ಪಮಟ್ಟಿಗೆ ತಿಳಿಯಿತೆಂದೇ ಗೋಧ್ರಾ, ಗೋಧ್ರೋತ್ತರ, ಆನಂತರದ ‘ಸಾವಿಒನ ದಲ್ಲಾಳಿ’ ಮುಂತಾದ ಬೈಗುಳಗಳ ಈವರೆಗಿನ ನಾನಾ ಸಂಚುಗಳ ಸರಮಾಲೆ ಏರ್ಪಟ್ಟದ್ದು. ತಿಳಿಯಿತೇ? ಕಾಂಗ್ರೆಸ್ಸು ಬಿಡಿ, ಭಾಜಪದಲ್ಲೇ ಅನೇಕರೂ ಮೋದಿಯವರನ್ನು ಕಮ್ಮಿಯಾಗಿ ಅಳೆದರು- Underestimate ಮಾಡಿದರು. ಅದು ಧೃತರಾಷ್ಟ್ರ ದರ್ಶನವಾಗಿಯೇ ಈಗಲೂ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಯಶವಂತ ಸಿನ್ಹಾ ಮೊದಲಾದವರು ಆಗಾಗ ಅಡ್ಡ ಮಾತಾಡುತ್ತಾ ಬಂದು ಹತಾಶರಾಗಿರುವುದು. ಭಾರತ ಹೇಗಾಗಬೇಕೆಂಬ ಕನಸು ಈ ಯಾರನ್ನೂ ಹೃದಯ ಪ್ರವೇಶಿಸಲಿಲ್ಲ. ರಥಯಾತ್ರೆ ಮೂಲಕ ಆಡ್ವಾಣಿ ಭಾಜಪವನ್ನು ಉನ್ನತಿಗೆ ಏರಿಸಿದ್ದು ಸಾಮಾನ್ಯವಲ್ಲ. ಉತ್ತಮ ವಿತ್ತ ಸಚಿವರಾಗಿ ಸಿನ್ಹಾ ಸಾಧನೆ ಕಡಿಮೆಯೇನಲ್ಲ. ಮಾನವ ಸಂಪನ್ಮೂಲ ಖಾತೆಯ ಯಶಸ್ಸಿನಲ್ಲಿ ಮುರಳಿ ಮನೋಹರ ಜೋಷಿಯವರ ಪಾತ್ರ ಹಿರಿದಾದದ್ದೇ. ಆದರೆ ಎಲ್ಲೋ ಸ್ವಾರ್ಥ ಈ ಹಿರಿಯರ ಕಣ್ಣು ಕುರುಡಾಗಿಸಿತ್ತು. ಸೋನಿಯಾ, ಮುಲಾಯಂ, ಲಾಲೂ, ಕರುಣಾ, ಮಾಯಾ, ಮಮತಾರ ವಿಷಯ ಏನು ಬರೆಯಲಿ? ಅವರವರ ಭವಿಷ್ಯ ಅವರವರೇ ಬರೆದುಕೊಂಡಾಗಿದೆ. ಇನ್ನು ನಿತೀಶ ಕುಮಾರರ ಶೋಚನೀಯ ಸ್ಥಿತಿ. ಅವರು ‘ಓಟು ರಾಜಕಾರಣದ’ ಸುಳಿಗೆ ಸಿಕ್ಕಿ ಭಾಜಪದೊಡನೆ ಸಂಬಂಧ ಕಡಿದುಕೊಂಡ ದಿನ ಅವರ ಭವಿಷ್ಯವೂ ನಿರ್ಣಯವಾಯ್ತು! ಅವರಿಗೆ ಮೋದಿ ಶಕ್ತಿಯ ಅರಿವಾಗಲಿಲ್ಲ. ಈಗ ಬಯಲು. ಉತ್ತರಪ್ರದೇಶದ ಮುಸ್ಲಿಮರು ಈಗ ಎಚ್ಚೆತ್ತುಕೊಂಡಂತೆ ಕಾಣುತ್ತಾರೆ. ಅವರ ಗಣನೀಯ ಪ್ರಮಾಣದ ಓಟು ಬೀಳದೆ ಭಾಜಪ ಇಷ್ಟು ಪ್ರಬಲ ಯಶಸ್ಸು ಪಡೆದಿರಲು ಸಾಧ್ಯವಿಲ್ಲ. ಅದನ್ನು ಮಾಯಾ ಒಪ್ಪಲಿ ಬಿಡಲಿ ಅವರ ಮತಬ್ಯಾಂಕು ಹೇಗೆ ಛಿದ್ರವಾಯ್ತು ಎಂದು ಅವರೇ ಹೇಳಲಿ. ಮುಸ್ಲಿಂ ಸಮುದಾಯದ ಜ್ಞಾನೋದಯ, ಹೊಸ ಭಾರತ ನಿರ್ವಣದ ಶುಭೋದಯ ಎಂದು ತಿಳಿಯಬೇಕಲ್ಲ? ಇದು ಭಾರತಾದ್ಯಂತ ಹೀಗೆ ನಡೆಯಬೇಕಲ್ಲ? ಇಷ್ಟೆಲ್ಲ ಇದ್ದರೂ, ಇಲ್ಲಿ ಕರ್ನಾಟಕದ ಮುಸ್ಲಿಂ ನಾಯಕರೊಬ್ಬರು ಮೋದಿ ಬಗ್ಗೆ ಕೇವಲವಾಗಿ ಹೇಳಿಕೆ ನೀಡಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಇದು ಎಚ್ಚರಿಕೆಯೇ? ಹೊಟ್ಟೆಯುರಿಯ ಮಾತೇ? ಹತಾಶ, ಸಿನಿಕ ಅಂಬೋಣವೇ? ಏನು?

ಇನ್ನೊಂದು ಹೇಳಲೇ? ನಾನು ಗುಜರಾತ್ ಪ್ರವಾಸದಲ್ಲಿದ್ದಾಗ ಗೋಧ್ರೋತ್ತರ ಕಾಲದಲ್ಲಿ ರಿಕ್ಷಾದವರೂ, ಹೂ ಮಾರುವವರೂ, ರೈಲ್ವೇ ಕೂಲಿಗಳೂ ಹೇಳುತ್ತಿದ್ದ ಮಾತುಗಳು- ‘ನಾವು ಓಟು ಹಾಕಿದ್ದು ಮೋದಿಯವರಿಗೆಂತ, ಭಾಜಪಕ್ಕೆ ಎಂಬ ಭಾವನೆಯಿಂದಲ್ಲ. ಅವರು ಯಾವ ಪಕ್ಷದಲ್ಲಿದ್ದರೂ ಓಟು ಅವರಿಗಾಗಿಯೇ ಹಾಕಿದ್ದು’ ಎಂತ. ಅರ್ಥ? ಮೋದಿ ಆಗಲೇ ಪಕ್ಷಾತೀತರಾಗಿ, ಸಾರ್ವಜನಿಕವಾಗಿ ಸಮಸ್ತ ಭಾರತೀಯರ ಹೃದಯದ ಪ್ರತಿಬಿಂಬವಾಗಿ ಮಿಂಚಿದ್ದರು! ಅದನ್ನು ಈಗ ಕಾಂಗ್ರೆಸ್ಸಿನ ನಾಯಕ, ಮಾಜಿ ಮಂತ್ರಿ ಚಿದಂಬರಂ ಸಹ ಹೇಳಿದ್ದಾರೆ! ಭಾಜಪದ ರಾಷ್ಟ್ರೀಯ, ಪ್ರಾಂತೀಯ ನಾಯಕರಿಗೆ ಇದು ತಿಳಿದಾಗ ಒಳಜಗಳಗಳು ನಿಲ್ಲುತ್ತವೆ. ಮೋದಿಯವರದು ಸುಳ್ಳು ಜನಪ್ರಿಯತೆ ಅಲ್ಲ. ನೆಹ್ರೂ, ಇಂದಿರಾರ ರೀತಿಯ ತಪ್ಪು ಭ್ರಾಮಕ ಜನಪ್ರಿಯತೆ ಅಲ್ಲ. ಪ್ರಿಯಾಂಕಾರನ್ನು ಪ್ರಚಾರಕ್ಕೆ ತಂದೂ ರಾಯಬರೇಲಿ, ಅಮೇಥಿಯಲ್ಲಿ ಕಾಂಗ್ರೆಸ್ಸು ಏಕೆ ಸೋತಿತು? ‘ಮುಖ ನೋಡಿ ಮಣೆ’ ಕಾಲ ಮುಗಿಯಿತು. ಕಾಂಗ್ರೆಸ್ಸು ಈಗ ವಿಸರ್ಜನೆಯಾಗಲೇಬೇಕಾದ ಕಾಲ. ಅಲ್ಲಿನ ಸ್ವಾರ್ಥಿಗಳು ಎಲ್ಲಿಗೆ ಬೇಕಾದರೂ ಹೋಗಲಿ. ಕಪಿಲ್ ಸಿಬಲ್ ಹೇಳಿದರು ‘ಮೋದಿ ತರುತ್ತಿರುವುದು ಕಬ್ರಿಸ್ತಾನ್’ ಎಂತ! ಯಾರಿಗಯ್ಯ? ಕಾಂಗ್ರೆಸ್​ವುುಕ್ತ ಭಾರತದಲ್ಲಿ ಕಾಂಗ್ರೆಸ್ಸಿಗರಿಗೆ ವಲಸೆಹೋಗಲು ಜಾಗ? ಪಾಕಿಸ್ತಾನವೇ? ಸಲ್ಮಾನ್ ಖುರ್ಷಿದರು ಹೇಳಿದರಲ್ಲ ಪಾಕಿಸ್ತಾನದಲ್ಲಿ, ನೆನಪಿದೆಯೇ? ‘ನೀವು ಮೋದಿಯವರನ್ನು ಇಳಿಸಲು ನಮಗೆ ಸಹಾಯ ಮಾಡಿ, ನಾವು ಕಾಶ್ಮೀರವನ್ನು ಎಲ್ಲಿಡಬೇಕೋ ಇರಿಸುತ್ತೇವೆ’ ಎಂದರಲ್ಲ? ಅದರರ್ಥ? ಸಹಾಯಯಾಚನೆ! ಮೋದಿಭಾರತ ಬೇಡಾದವರು ಪಾಕಿಸ್ತಾನಕ್ಕೆ ಹೋಗಲು ಯಾರದೂ ಅಡ್ಡಿಯಿಲ್ಲ. ಚೀನಾ, ರಷಿಯಾಗಳಿಗೆ, ಸಿಪಿಐ, ಸಿಪಿಐಎಂ ಸಹ. ಮಾಯಾವತಿಯವರ ಆನೆ, ಇನ್ನೊಬ್ಬರ ಸೈಕಲ್ ಎಲ್ಲ ಮಾರೀಚಮಾಯವಾಗಿ ಮೋದಿ ರಾಮಬಾಣದಿಂದ ಸತ್ತವು. ಸಾಯಬಾರದವರು ನೈಜ ಭಾರತೀಯ ಪ್ರಜ್ಞಾಸಂಪನ್ನರು. ದಿಲ್ಲಿ ವಿಶ್ವವಿದ್ಯಾಲಯ, ಜೆಎನ್​ಯುು, ಮದ್ರಾಸು ಐಐಟಿ ಇನ್ನಿತರ ಕಡೆ ಭಾರತ ರಾಷ್ಟ್ರೀಯತಾ ಶತ್ರುಗಳು ಭಾರಿ ಹಗರಣ ಮಾಡಿ ಏನು ಸಾಧಿಸಿದರು? ಅವರ ವಿರುದ್ಧವೇ ಜನ ತಿರುಗಿ ಬಿದ್ದರೂ ತಿಳಿಯಲಿಲ್ಲವಲ್ಲ? ದುರ್ಯೋಧನನಿಗೆ ತೊಡೆ ಮುರಿದಾಗಲೂ ಜ್ಞಾನೋದಯ ಆಗಲಿಲ್ಲ. ‘ಇದೆಲ್ಲ ನೀನೇ ಮಾಡಿಸಿದ್ದು’ ಎಂತ ಶ್ರೀಕೃಷ್ಣನಿಗೆ ಬೈದ. ತನ್ನ ತಪ್ಪು ಏನೂ ತಿಳಿಯಲಿಲ್ಲ, ಒಪ್ಪಲಿಲ್ಲ. ಅದು ಈಗಣ ಕರ್ನಾಟಕ ಕಾಂಗ್ರೆಸ್ಸು ನಾಯಕರ ಸ್ಥಿತಿ, ದುಃಸ್ಥಿತಿ. ಮುಖ್ಯಮಂತ್ರಿಗಳಿಗೆ ‘ಭಾಗ್ಯ’ಗಳ ಬೀಗಿನ ಹೊಗೆಯಲ್ಲಿ ತಮ್ಮ ದುರಾಡಳಿತದ ಲಕ್ಷಣಗಳು ಕಾಣುತ್ತಿಲ್ಲ. ಭ್ರಷ್ಟಾಚಾರ, ರಾಜಕೀಯ ಕೊಲೆಗಳು ಇವೆಲ್ಲ ಆರ್ಥಿಕ ಪ್ರಗತಿಯ ಲಕ್ಷಣಗಳಲ್ಲ ಎಂತ ಯಾರು ಹೇಳಬೇಕು? ಅದು ಕಂಸನ ಕೊನೆಯ ದಿನಗಳ ಮರುಕಳಿಕೆ ಎನ್ನದೆ ವಿಧಿಯಿಲ್ಲ. ತುರ್ತು ಸ್ಥಿತಿ ತೆಗೆದು ಮರುಚುನಾವಣೆಗೆ ನಿಂತಾಗ ಬನ್ಸೀಲಾಲ್, ವಿ.ಸಿ.ಶುಕ್ಲಾ ಮೊದಲಾದವರು ಕ್ಷಮೆಯಾಚಿಸಿದರು. ಇಂದಿರಾ ಕ್ಷಮೆ ಯಾಚಿಸಲಿಲ್ಲ. ಈಗ ಸೋನ್ಯಾ, ರಾಹುಲರು ಕ್ಷಮೆಯಾಚಿಸುವುದಿಲ್ಲ. ಇಲ್ಲಿನ ಮಂತ್ರಿಮಂಡಳದ ಯಾರೂ ಕ್ಷಮೆಯಾಚಿಸುವುದಿಲ್ಲ. ಇಲ್ಲಿ ಎಸ್.ಎಂ.ಕೃಷ್ಣ ಅವರು ದಾರಿಗೆ ಬಂದಂತೆ ಅವರ ಭಂಟರೂ ದಾರಿಗೆ ಬಂದರೆ ಸ್ವಲ್ಪ ಮಾನ ಉಳಿಯಬಹುದು. ಈ ಸಲ ಕರ್ನಾಟಕದ ಬೆನ್ನಿಗೆ ಮೋದಿ ಇದ್ದಾರೆಂದು ಭಾಜಪದ ಒಳಜಗಳ ಪ್ರವೀಣರೂ, ಶಕುನಿ ಕರ್ಣರೂ ಅರ್ಥಮಾಡಿಕೊಳ್ಳಬೇಕು. ಬೇಕಾದ್ದು ಕರ್ನಾಟಕಾಭ್ಯುದಯ. ಯಾರದೋ ಐಶ್ವರ್ಯ ತುಂಬುವುದಲ್ಲ. ಇಲ್ಲಿನ ದಲಿತ ನಾಯಕರೂ ವಾಸ್ತವ ಅರಿಯಬೇಕು. ಉಗ್ರವಾದಿಗಳ ಪೂರ್ಣ ನಿಗ್ರಹ ಕಾಲ ಸಮೀಪಿಸುತ್ತಿದೆ. ಅಮೆರಿಕೆ, ಪಾಕ್​ಗಳಿಗೆ ಅರ್ಥವಾದದ್ದು ಕರ್ನಾಟಕಕ್ಕೆ ತಿಳಿಯದಾದರೆ ದೇವರೇ ಗತಿ!

Leave a Reply

Your email address will not be published. Required fields are marked *

Back To Top