Sunday, 18th February 2018  

Vijayavani

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ - ಸಂಜೆಯೊಳಗೆ ಬಂಧಿಸದಿದ್ದರೆ ಅಧಿಕಾರಿಗಳು ಸಸ್ಪೆಂಡ್- ಗೃಹ ಸಚಿವರ ಖಡಕ್ ವಾರ್ನಿಂಗ್.        ಕಾಂಗ್ರೆಸ್‌ನ ಗೂಂಡಾಗಿರಿ ಬಯಲಾಗಿದೆ - ತಮ್ಮ ಸರ್ಕಾರ ಇದೆ ಅಂತಲೇ ಈ ಕೃತ್ಯ - ಹ್ಯಾರಿಸ್ ಮಗನ ದರ್ಪಕ್ಕೆ ಆರ್‌.ಅಶೋಕ್ ಕಿಡಿ.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.        ಇರಾನ್‌ನ ಸೆಮಿರೋಮ್‌ ಬಳಿ ವಿಮಾನ ಪತನ - 66 ಪ್ರಯಾಣಿಕರ ದುರ್ಮರಣ - ಏರ್‌ಲೈನ್ಸ್‌ ಕಡೆಯಿಂದ ಸ್ಪಷ್ಟನೆ.       
Breaking News

ತಾಲೂಕಿಗೊಂದು ಮೂತ್ರ ಬ್ಯಾಂಕ್

Wednesday, 15.11.2017, 3:03 AM       No Comments

ನಾಗ್ಪುರ: ರೈತರನ್ನು ಕಾಡುತ್ತಿರುವ ಯೂರಿಯಾ ಕೊರತೆ ಸಮಸ್ಯೆಗೆ ಶಾಶ್ವತ ತೆರೆ ಎಳೆಯುವ ಯತ್ನವಾಗಿ ಕೇಂದ್ರ ಸರ್ಕಾರ ‘ಮಾನವ ಮೂತ್ರ ಬ್ಯಾಂಕ್’ ಯೋಜನೆ ಸಿದ್ಧಪಡಿಸುತ್ತಿದೆ. ಭೂಮಿಯ ಫಲವತ್ತತೆ ಹೆಚ್ಚಿಸುವ ತಂತ್ರಗಾರಿಕೆಯಾಗಿ ಸ್ಥಳೀಯ ಮಟ್ಟದಲ್ಲೇ ಯೂರಿಯಾ ಉತ್ಪಾದಿಸಲು ತಾಲೂಕಿಗೊಂದು ಮೂತ್ರ ಬ್ಯಾಂಕ್ ಸ್ಥಾಪಿಸುವುದು ಯೋಜನೆಯ ಉದ್ದೇಶವಾಗಿದೆ.

ಸ್ವೀಡನ್​ನಲ್ಲಿ ಯಶಸ್ವಿ: ಮೂತ್ರಬ್ಯಾಂಕ್ ಯೋಜನೆ ಭಾರತಕ್ಕೆ ಹೊಸತಾದರೂ ಈ ಪ್ರಯೋಗ ಸ್ವೀಡನ್​ನಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಅಲ್ಲಿನ ವಿಜ್ಞಾನಿಗಳ ಸಹಕಾರ ಪಡೆಯುವ ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ನೈಟ್ರೋಜನ್ ಪವರ್

ನಾವು ಸೇವಿಸುವ ಆಹಾರದಲ್ಲಿರುವ ಪೌಷ್ಟಿಕಾಂಶಗಳನ್ನು ಶೋಧಿಸಿ, ದೇಹಕ್ಕೆ ಅಗತ್ಯವಾದಷ್ಟನ್ನು ಪೂರೈಸುವ ಜೀರ್ಣಾಂಗ ವ್ಯವಸ್ಥೆ ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಮಲ-ಮೂತ್ರ ರೂಪದಲ್ಲಿ ದೇಹದಿಂದ ಹೊರಹಾಕುತ್ತದೆ. ಹಾಗೆ ಹೊರಹಾಕಲ್ಪಟ್ಟ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಸಾರಜನಕ (ನೈಟ್ರೋಜನ್) ಇರುತ್ತದೆ. ಇದು ಯೂರಿಯಾಗಿಂತಲೂ ಹೆಚ್ಚು ಫಲವತ್ತತೆ ಹೊಂದಿರುತ್ತದೆ ಎಂಬುದು ವಿಜ್ಞಾನಿಗಳ ಅನಿಸಿಕೆ.

ರೋಗಕ್ಕೆ ಸ್ವಮೂತ್ರ ಪಾನ ಮದ್ದು

ಮಕ್ಕಳು ಬಿದ್ದು ಗಾಯ ಮಾಡಿಕೊಂಡರೆ ಅಥವಾ ಹರಿತ ವಸ್ತು ಬಳಸುವಾಗ ಕೊಯ್ದು ಗಾಯಗೊಂಡರೆ ಅದರ ಮೇಲೆ ಮೂತ್ರ ಮಾಡಿಕೊಳ್ಳುವಂತೆ ಹಿರಿಯರು ಸಲಹೆ ನೀಡುವುದು ನೆನಪಿರಬಹುದು. ಹೀಗೆ ಮಾಡುವುದರಿಂದ ನಂಜಾಗುವುದಿಲ್ಲ (ಸೋಂಕು ತಗಲುವುದಿಲ್ಲ) ಎಂಬುದು ಇದಕ್ಕೆ ಕಾರಣ. ಅದರಂತೆ, ಸ್ವಮೂತ್ರಪಾನ ಮಾಡುವುದರಿಂದಲೂ ನಾನಾ ಬಗೆಯ ರೋಗಗಳಿಂದ ದೂರವುಳಿಯಬಹುದು ಎಂಬ ಮಾತೂ ಇದೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಆರೋಗ್ಯದ ದೃಷ್ಟಿಯಿಂದ ತಾವು ಸ್ವಮೂತ್ರಪಾನ ರೂಢಿ ಹೊಂದಿರುವುದಾಗಿ ಹೇಳುತ್ತಿದ್ದರು. ಆದರೆ, ಇದು ಮಲದ ಅಂಶದಿಂದ ಮುಕ್ತವಾಗಿರುವಂತೆ ಎಚ್ಚರ ವಹಿಸುವುದು ಮುಖ್ಯ.

ಲೀಟರ್​ಗೆ ಒಂದು ರೂ.

ಮೂತ್ರ ಬ್ಯಾಂಕ್ ಯೋಜನೆಯನ್ನು ಕೇಂದ್ರ ಸರ್ಕಾರ ನಾಗ್ಪುರದ ಧಾಪೇವಾಡ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಜಾರಿ ಗೊಳಿಸುತ್ತಿದೆ. ಬ್ಯಾಂಕ್​ಗೆ ನೀಡುವ ಪ್ರತಿ ಲೀಟರ್ ಮೂತ್ರಕ್ಕೆ 1 ರೂ.ನಂತೆ ರೈತರಿಗೆ ಹಣವೂ ಪಾವತಿಯಾಗಲಿದೆ.

ಏನಿದು ಮೂತ್ರ ಬ್ಯಾಂಕ್?

ರೈತರು ನೀರಿನಲ್ಲಿ ಬೆರೆಯದ ಮೂತ್ರವನ್ನು 10 ಲೀಟರ್ ಕ್ಯಾನ್​ನಲ್ಲಿ ಶೇಖರಿಸಿ ಬಳಿಕ ಅದನ್ನು ತಾಲೂಕು ಕೇಂದ್ರಗಳ ಮೂತ್ರ ಬ್ಯಾಂಕ್​ಗಳಿಗೆ ನೀಡಿದರೆ ಲೀಟರ್​ಗೆ 1 ರೂ. ದೊರೆಯಲಿದೆ. ಹೀಗೆ ಪಡೆದ ಮೂತ್ರವನ್ನು ಭಟ್ಟಿ ಇಳಿಸಿ(ಡಿಸ್ಟಿಲೇಷನ್) ಶುದ್ಧವಾದ ಸಾರಜನಕ ಭರಿತ ಸಾವಯವ ಯೂರಿಯವನ್ನು ಮೂತ್ರ ಬ್ಯಾಂಕ್​ಗಳು ರೈತರಿಗೆ ನೀಡಲಿವೆ.

 ಪ್ರಕ್ರಿಯೆ ಹೇಗೆ?

ಫಾಸ್ಪರಸ್(ಪಿ) ಮತ್ತು ಪೊಟ್ಯಾಷಿಯಂ(ಕೆ)ಗೆ ಈಗಾಗಲೇ ಪರ್ಯಾಯ ಲಭ್ಯ ಇದೆ. ಅವುಗಳೊಂದಿಗೆ ಮೂತ್ರದಿಂದ ಬೇರ್ಪಡಿಸಿದ ಸಾರಜನಕ(ಎನ್) ಸೇರಿಸಿ ಯೂರಿಯಾ (ಎನ್​ಪಿಎ) ತಯಾರಿಸಲಾಗುತ್ತದೆ. ಇದರಿಂದ, ದುಬಾರಿ ಬೆಲೆಯ ಯೂರಿಯಾ ಖರೀದಿಸುವ, ವಿದೇಶದಿಂದ ಆಮದು ಮಾಡಿಕೊಳ್ಳುವ ತಾಪತ್ರಯವೂ ತಪು್ಪತ್ತದೆ. ಜತೆಗೆ, ಜಲಮೂಲಗಳ ಮಾಲಿನ್ಯ ನಿಯಂತ್ರಿಸಬಹುದು.

Leave a Reply

Your email address will not be published. Required fields are marked *

Back To Top