Wednesday, 19th September 2018  

Vijayavani

ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ ಡೆಪಾಸಿಟ್ ಆಗ್ತಿದೆ ಹವಾಲಾ ಹಣ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಡಿಕೆಶಿ ಮನೆಯಲ್ಲಿ ಸಿಕ್ಕಿದೆ 20 ಕೋಟಿ ಹಣ - ಡಿಕೆಶಿ ಆಪ್ತ ಆಂಜನೇಯ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ - ಸಂಬಿತ್ ಪಾತ್ರ ಆರೋಪ        ರಾಜ್ಯ ಬಿಜೆಪಿ ಶಾಸಕರ ಸಭೆ ಆರಂಭ - ಗಾಯತ್ರಿ ವಿಹಾರದಲ್ಲಿ ಮೀಟಿಂಗ್ - ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ ಮೀಟಿಂಗ್        ನನಗೂ 2 ಮುಖಗಳಿವೆ, ಆದ್ರೂ ಶಾಂತವಾಗಿರ್ತೀನಿ - ಒಂದು ವಾರ ನೋಡಿ ಚಾಟಿ ಬೀಸ್ತೀನಿ - ಸಿಎಂ ಗುಡುಗು        ಶಕ್ತಿಕೇಂದ್ರವಾದ ರಮೇಶ್ ನಿವಾಸ - ಮಿನಿಸ್ಟರ್ ಮನೆಗೆ ಶಾಸಕರ ದಂಡು - ಎಂಟಿಬಿ, ರಾಮಪ್ಪ, ಅಬ್ಬಯ್ಯ ಸೇರಿ ಹಲವರ  ಮಾತುಕತೆ        ಜಾರಕಿಹೊಳಿ ಆಯ್ತು, ಈಗ ಬಳ್ಳಾರಿ ಹುಳಿ - ನಾಗೇಂದ್ರ ಪರ ಬ್ಯಾಟ್ ಬೀಸಿದ್ದ ರಮೇಶ್ ವಿರುದ್ಧ ಗರಂ       
Breaking News

ತಾಯಿ ಎದುರಲ್ಲೇ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ

Monday, 09.07.2018, 6:17 PM       No Comments

ತೀರ್ಥಹಳ್ಳಿ: ಕಾಲು ಸಂಕ ದಾಟುವ ವೇಳೆ ವಿದ್ಯಾರ್ಥಿನಿಯೊಬ್ಬಳು ತಾಯಿಯ ಎದುರಲ್ಲೇ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.

ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ಕೆಂದಾಳುಬೈಲು ಸಮೀಪದ ದೊಡ್ಲಿಮನೆಯಲ್ಲಿ ಸೋಮವಾರ ಬೆಳಗ್ಗೆ ಬಾಲಕಿ ಆಶಿಕಾ(15) ನೀರು ಪಾಲಾಗಿದ್ದಾಳೆ. ಈಕೆ ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ.

ಭಾರಿ ಮಳೆಯ ಕಾರಣ ಸೋಮವಾರ ಶಾಲೆಗಳಿಗೆ ರಜೆ ಘೊಷಿಸಲಾಗಿತ್ತು. ಈ ವಿಷಯ ಆಶಿಕಾಗೆ ಗೊತ್ತಿರಲಿಲ್ಲ. ಮಗಳನ್ನು ಶಾಲೆಗೆ ಕಳುಹಿಸಲು ತಾಯಿ ತೆರಳಿದ್ದರು. ಶಾಲೆ ರಜೆ ಇದ್ದುದರಿಂದ ಇಬ್ಬರೂ ವಾಪಸ್ ಬರುತ್ತಿದ್ದರು. ಮನೆಗೆ ಅಂದಾಜು 200 ಮೀಟರ್ ಸಮೀಪದಲ್ಲಿರುವ ಹಳ್ಳಕ್ಕೆ ಕಾಲು ಸಂಕ ನಿರ್ವಿುಸಲಾಗಿದೆ. ಇದರ ಮೇಲೆ ಅಡಕೆ ದಬ್ಬೆಗಳನ್ನೂ ಹಾಕಲಾಗಿದೆ. ತಾಯಿಗಿಂತ ಮುಂಚೆ ಈ ಕಾಲುಸಂಕ ದಾಟುವಾಗ ಬಾಲಕಿ ಕಾಲು ಜಾರಿ 10 ಅಡಿ ಆಳದ ಹಳ್ಳಕ್ಕೆ ಬಿದ್ದಿದ್ದಾಳೆ. ತಾಯಿ ಕೂಗಿಕೊಂಡರೂ ಯಾರೂ ಸಹಾಯಕ್ಕೆ ಬರುವ ಸ್ಥಿತಿ ಇರಲಿಲ್ಲ. ಹಳ್ಳದಲ್ಲಿ ನೀರಿನ ಸೆಳೆತ ಜೋರಾಗಿದ್ದರಿಂದ ಕೊಚ್ಚಿ ಹೋಗಿದ್ದಾಳೆ. ಸೋಮವಾರ ಸಂಜೆ ವೇಳೆ ಮೃತ ದೇಹ ಪತ್ತೆಯಾಗಿದೆ.

ಶವದ ಹಡುಕಾಟದಲ್ಲಿ ಗ್ರಾಮಸ್ಥರೊಂದಿಗೆ ಆಗುಂಬೆ ಪೊಲೀಸರು ಶ್ರಮಿಸಿದರು. ಹಳ್ಳದಲ್ಲಿ ಭಾರಿ ನೀರಿನ ಸೆಳೆತ ಇದ್ದ ಕಾರಣ ಶವ ಸಿಗುವುದು ವಿಳಂಬವಾಯಿತು. ಸ್ಥಳಕ್ಕೆ ಜಿಪಂ ಸದಸ್ಯೆ ಭಾರತಿ ಪ್ರಭಾಕರ್, ತಹಶೀಲ್ದಾರ್ ಆನಂದಪ್ಪ ನಾಯ್್ಕ ಬಿಇಒ ಪ್ರಸನ್ನಕುಮಾರ್ ಹಾಗೂ ಗುಡ್ಡೆಕೇರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಂಜುಬಾಬು ಮುಂತಾದವರು ಭೇಟಿ ನೀಡಿ ಬಾಲಕಿಯ ತಾಯಿಗೆ ಸಾಂತ್ವನ ಹೇಳಿದರು.

ಈಕೆಯದು ಕೇವಲ ಅರ್ಧ ಎಕರೆ ತರಿ ಭೂಮಿಯನ್ನು ಹೊಂದಿರುವ ಬಡ ಕುಟುಂಬ. ಈಕೆಯ ತಂದೆ ಯೋಗೇಂದ್ರ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿ ಅನಿತಾ ಕೃಷಿ ಕೂಲಿ ಕಾರ್ವಿುಕರು. ಮೃತಳಿಗೆ 6ನೇ ತರಗತಿಯಲ್ಲಿ ಓದುವ ಒಬ್ಬ ಸಹೋದರನಿದ್ದಾನೆ. ಪ್ರತಿದಿನ 3 ಕಿಮೀ (ಎರಡೂ ಕಡೆ 6 ಕಿಮೀ) ಕಾಡು ಹಾದಿಯನ್ನು ಕ್ರಮಿಸಿ ಆಶಿಕಾ ಗುಡ್ಡೇಕೇರಿ ಶಾಲೆಗೆ ಬರುತ್ತಿದ್ದಳು. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊನೆ ಕ್ಷಣದಲ್ಲಿ ರಜೆಯ ಗೊಂದಲ: ಭಾರಿ ಮಳೆಯಿಂದಾಗಿ ಕೊನೆ ಕ್ಷಣದಲ್ಲಿ ಶಾಲೆಗಳಿಗೆ ರಜೆ ಘೊಷಿಸುತ್ತಿರುವ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಪಟ್ಟಣ ಪ್ರದೇಶ ಹೊರತುಪಡಿಸಿ ಗ್ರಾಮೀಣ ಪ್ರದೇಶದ ಶಾಲೆಗಳ ಮಕ್ಕಳಿಗೆ ರಜೆ ಘೊಷಣೆ ಗೊತ್ತೇ ಆಗುವುದಿಲ್ಲ. ಹೀಗಾಗಿ ಮಳೆಯಿಂದ ರಜೆ ಕೊಟ್ಟಿದ್ದರೂ ಮಕ್ಕಳು ಶಾಲೆಗೆ ಬಂದ ಮೇಲೆಯೇ ಇಂದು ರಜೆ ಎಂದು ಗೊತ್ತಾಗುವುದು. ಆಶಿಕಾ ಕೂಡ ಎಂದಿನಂತೆ ಶಾಲೆಗೆ ಬಂದಿದ್ದಳು. ಸೋಮವಾರ ಶಾಲೆ ನಡೆದಿದ್ದರೆ ಆಕೆ ನೀರು ಪಾಲಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಇನ್ನು ಮುಂದೆ ಶಾಲೆಗೆ ರಜೆ ಘೊಷಿಸುವಾಗ ಮುಂಚಿತವಾಗಿ ತಿಳಿಸುವ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Back To Top