Thursday, 21st June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ತಾಪ್ಸೀ ವಿರುದ್ಧ ಸುಳ್ಳು ಆರೋಪ!

Friday, 08.06.2018, 3:00 AM       No Comments

ನಟಿ ತಾಪ್ಸೀ ಪನ್ನು ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೆ, ಬಾಲಿವುಡ್​ನಲ್ಲೂ ತೊಡಗಿಕೊಂಡಿ ದ್ದಾರೆ. ಉಳಿದ ನಾಯಕಿಯರಿಗೆ ಹೋಲಿಸಿದರೆ ಇವರು ಕಾಂಟ್ರವರ್ಸಿ ಮಾಡಿಕೊಂಡಿದ್ದು ತೀರಾ ಅಪರೂಪ. ಆದರೆ ಈಗ ಅವರ ವಿರುದ್ಧ ಅಪಸ್ವರವೊಂದು ಕೇಳಿಬಂದಿದೆ. ನವಾಜುದ್ಧೀನ್ ಸಿದ್ಧಿಕಿ ಮುಖ್ಯಭೂಮಿಕೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಸಿನಿಮಾ ಒಂದನ್ನು ಅವರು ರಿಜೆಕ್ಟ್ ಮಾಡಿದ್ದಾರಂತೆ! ಹೊಸ ಚಿತ್ರವೊಂದನ್ನು ನಿರ್ದೇಶಿಸಲು ಹನಿ ತೆಹ್ರಾನ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸ್ಕಿ್ರ್ ಕೆಲಸಗಳು ನಡೆಯುತ್ತಿರುವ ಈ ಚಿತ್ರದಲ್ಲಿ ನವಾಜುದ್ಧೀನ್ ಲೀಡ್ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ನಾಯಕಿ ಪಾತ್ರಕ್ಕೆ ಒಂದು ಜನಪ್ರಿಯ ನಟಿಯ ಅಗತ್ಯವಿದ್ದು, ಆ ಹುಡುಕಾಟದಲ್ಲಿ ತೊಡಗಿದ್ದರು ತೆಹ್ರಾನ್. ಇತ್ತೀಚೆಗೆ ಅವರು ತಾಪ್ಸೀಗೆ ಆಫರ್ ನೀಡಿದ್ದರಂತೆ. ಆದರೆ, ತಾಪ್ಸೀ ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ದರು. ನವಾಜುದ್ಧೀನ್ ಇದ್ದಾರೆ ಎಂಬ ಕಾರಣಕ್ಕೆ ತಾಪ್ಸೀ ಈ ರೀತಿ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ತಾಪ್ಸೀ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

‘ಒಂದು ನಟಿಗೆ ಅನೇಕ ಸಿನಿಮಾ ಆಫರ್​ಗಳು ಬರುತ್ತವೆ. ಅವೆಲ್ಲವನ್ನೂ ಅವಳು ಒಪ್ಪಿಕೊಳ್ಳಬೇಕೆಂದೇನಿಲ್ಲ. ಆದರೆ ಒಂದು ಸಿನಿಮಾ ರಿಜೆಕ್ಟ್ ಮಾಡಿದ ಮಾತ್ರಕ್ಕೆ ಈ ರೀತಿ ಹೇಳುವುದು ಸರಿ ಅಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅತ್ತ ಈ ಬಗ್ಗೆ ಪ್ರತಿಕ್ರಿಯಿಸಿರುವ ನವಾಜುದ್ದೀನ್, ‘ನನ್ನೊಂದಿಗೆ ಯಾವುದೇ ಥ್ರಿಲ್ಲರ್ ಸಿನಿಮಾ ಮಾಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಮೊದಲಿಗೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ, ಯಾವ ಥ್ರಿಲ್ಲರ್ ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ. ಇದೆಲ್ಲ ಊಹಾಪೋಹ ಅಷ್ಟೇ’ ಎಂದಿದ್ದಾರೆ. ಸದ್ಯ ತಾಪ್ಸೀ ‘ತಡ್ಕಾ’, ‘ಸೂರ್ವ’, ‘ಮುಲ್ಕ್’, ‘ಮನ್​ವುರ್ಜಿಯಾ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top