Tuesday, 26th September 2017  

Vijayavani

1. ಗಡಿಯಲ್ಲಿ ಬಾಲ ಬಿಚ್ಚಿದ್ರೆ ಹುಷಾರ್​- ನಡೆಯಲಿದೆ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​- ಪಾಕ್​ಗೆ ಬಿಪಿನ್​ ರಾವತ್​ ವಾರ್ನಿಂಗ್​ 2. ಮ್ಯಾನ್ಮಾರ್‌ನಲ್ಲಿ ಭುಗಿಲೆದ್ದ ಹಿಂಸಾಚಾರ- ಪ್ರತಿಕಾರಕ್ಕಿಳಿದ ರೋಹಿಂಗ್ಯಾ ಮುಸ್ಲಿಂರು- 92 ಜನರ ಭೀಕರ ಕಗ್ಗೊಲೆ 3. ವಿಶ್ವಕ್ಕೆ 3ನೇ ಮಹಾಯುದ್ಧದ ಭೀತಿ- ಕೋರಿಯಾ ದೃಷ್ಟಿಯಲ್ಲಿ ಅಮೆರಿಕಾವೇ ಆರೋಪಿ- ಸಮರಕ್ಕೆ ಸಿದ್ಧ ಎಂದ ಸರ್ವಾಧಿಕಾರಿ 4. ಗದಗ್​ನಲ್ಲಿ ಯಶಸ್ವಿಯಾದ ಸ್ವಚ್ಛ ಭಾರತ- ನರಗುಂದ ತಾಲೂಕು ಬಯಲು ಶೌಚಮುಕ್ತ- ಇಂದು ಉಪರಾಷ್ಟ್ರಪತಿಗಳಿಂದ ಅಧಿಕೃತ ಘೋಷಣೆ 5. ಮಳೆಗೆ ತತ್ತರಿಸಿದ ಬೆಣ್ಣೆ ದೋಸೆ ನಗರಿ- ಮಲೆನಾಡಲ್ಲಿ ಮನೆಗೆ ನುಗ್ಗಿದ ನೀರು- ಇತ್ತ ಕೋಲಾರದಲ್ಲಿ ನೂರಾರು ಎಕರೆ ಬೆಳೆ ನಾಶ
Breaking News :

ತಮಿಳುನಾಡಿಗೆ ವಿಜಯ್ ಹಜಾರೆ ಟ್ರೋಫಿ

Tuesday, 21.03.2017, 9:45 AM       No Comments

ನವದೆಹಲಿ: ದಿನೇಶ್ ಕಾರ್ತಿಕ್(112 ರನ್, 120 ಎಸೆತ, 14 ಬೌಂಡರಿ) ಬಾರಿಸಿದ 10ನೇ ಲಿಸ್ಟ್ ಎ ಶತಕದ ನೆರವಿನಿಂದ ತಮಿಳುನಾಡು ತಂಡ ಬಂಗಾಳ ತಂಡಕ್ಕೆ 37 ರನ್​ಗಳಿಂದ ಸೋಲುಣಿಸಿ ದಾಖಲೆಯ 5ನೇ ಬಾರಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ತಮಿಳುನಾಡು ತಂಡ, ಕಾರ್ತಿಕ್ ಶತಕದ ನಡುವೆ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ(26ಕ್ಕೆ 4) ದಾಳಿಗೆ 217 ರನ್​ಗೆ ಸರ್ವಪತನ ಕಂಡಿತು. ಸವಾಲು ಬೆನ್ನಟ್ಟಿದ ಬಂಗಾಳ ಯಾವುದೇ ಹಂತದಲ್ಲಿ ದಿಟ್ಟ ಪ್ರತಿರೋಧ ತೋರದೆ 180 ರನ್​ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.

ತಮಿಳುನಾಡು: 47.2 ಓವರ್​ಗಳಲ್ಲಿ 217 ( ದಿನೇಶ್ ಕಾರ್ತಿಕ್ 112, ಬಾಬಾ ಇಂದ್ರಜಿತ್ 32, ಶಮಿ 26ಕ್ಕೆ 4, ಅಶೋಕ್ ದಿಂಡಾ 36ಕ್ಕೆ 3), ಬಂಗಾಳ: 45.5 ಓವರ್​ಗಳಲ್ಲಿ 180 ( ಸುದೀಪ್ 58, ತಿವಾರಿ 32, ಅಶ್ವಿನ್ ಕ್ರಿಸ್ಟ್ 23ಕ್ಕೆ 2, ರಾಹಿಲ್ ಶಾ 38ಕ್ಕೆ 2).

– ಏಜೆನ್ಸೀಸ್

ದಿನೇಶ್ ಕಾರ್ತಿಕ್ ಶತಕದಾಸರೆ

ಗಾಯದಿಂದ ಫಿಟ್ ಆದ ಬಳಿಕ ಹಾಲಿ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದ ವೇಗಿ ಮೊಹಮದ್ ಶಮಿ ತಮಿಳುನಾಡು ತಂಡಕ್ಕೆ ಮಾರಕ ಆಘಾತ ನೀಡಿದರು. ಇದರಿಂದ 49 ರನ್​ಗೆ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆದರೆ ತಾಳ್ಮೆಯಿಂದ ಆಡಿದ ದಿನೇಶ್ ಕಾರ್ತಿಕ್, ಬಾಬಾ ಇಂದ್ರಜಿತ್(32), ವಾಷಿಂಗ್ಟನ್ ಸುಂದರ್(22) ಬೆಂಬಲದೊಂದಿಗೆ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ಸಫಲರಾದರು. ಪ್ರಶಸ್ತಿ ಜಯದೊಂದಿಗೆ ತಮಿಳುನಾಡು ತಂಡ ದೇವಧರ್ ಟ್ರೋಫಿಗೆ ಅರ್ಹತೆಯನ್ನೂ ಪಡೆದಿದೆ.

ವೈಡ್​ಗೆ ಹಿಟ್ ವಿಕೆಟ್!

ದಿನೇಶ್ ಕಾರ್ತಿಕ್ ವೈಡ್ ಎಸೆತಕ್ಕೆ ಹಿಟ್ ವಿಕೆಟ್ ಆದ ಪ್ರಸಂಗ ಫೈನಲ್ ಪಂದ್ಯದಲ್ಲಿ ನಡೆಯಿತು. ಬಂಗಾಳ ವೇಗಿ ಮೊಹಮದ್ ಶಮಿ ಎಸೆದ ಪಂದ್ಯದ 48ನೇ ಓವರ್​ನಲ್ಲಿ ಲೆಗ್​ಸೈಡ್ ಹೊರಗಡೆ ಬಂದ ಎಸೆತವನ್ನು ಕಾರ್ತಿಕ್ ಪುಲ್ ಮಾಡಲು ಯತ್ನಿಸಿದಾಗ ನಿಯಂತ್ರಣ ತಪ್ಪಿದರು. ಆಗ ಅವರ ಬ್ಯಾಟ್ ವಿಕೆಟ್​ಗೆ ಬಡಿಯಿತು.

ತಮಿಳುನಾಡು ತಂಡ 15ನೇ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ 5ನೇ ಬಾರಿ (2002-03, 2008-09, 2009-10, 2004-05ರಲ್ಲಿ ಜಂಟಿ ಚಾಂಪಿಯನ್, 2016-17) ಪ್ರಶಸ್ತಿ ಜಯಿಸಿತು. ಬೇರಾವುದೇ ತಂಡ 2ಕ್ಕಿಂತ ಹೆಚ್ಚು ಬಾರಿ ಗೆದ್ದಿಲ್ಲ.

Leave a Reply

Your email address will not be published. Required fields are marked *

Back To Top