Thursday, 22nd February 2018  

Vijayavani

ಗೃಹ ಸಚಿವ ಹೆಸ್ರಲ್ಲಿ ಬೇನಾಮಿ ಆಸ್ತಿ ವಿಚಾರ- ವಿಧಾಸಭೆಯಲ್ಲಿ ಪ್ರತಿಧ್ವನಿಸಿದ ದಿಗ್ವಿಜಯ ನ್ಯೂಸ್‌ ವರದಿ- ರಾಮಲಿಂಗಾರೆಡ್ಡಿ ರಾಜೀನಾಮೆಗೆ ಶೆಟ್ಟರ್‌ ಆಗ್ರಹ        ಗೃಹ ಸಚಿವರ ವಿರುದ್ಧ ಬೇನಾಮಿ ಆಸ್ತಿ ವಿಚಾರ- ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ- ರಾಮಲಿಂಗಾರೆಡ್ಡಿಗೆ ಕಂಟಕವಾಗುತ್ತಾ ಪ್ರಕರಣ        ಬಟ್ಟೆ ಬಿಚ್ಚಿಸಿ ರೌಡಿಗಳನ್ನ ಮೆರವಣಿಗೆ ಮಾಡಿಸ್ತೀನಿ- ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ತಿನಿ- ಮೊದಲು ಅಬ್ಬರಿಸಿ ತಣ್ಣಗಾದ ಶಾಸಕ ಸೋಮಶೇಖರ್‌        ಕಾಂಗ್ರೆಸ್ ಗೂಂಡಾಗಳಿಂದ ಪಕ್ಷಕ್ಕೆ ಡ್ಯಾಮೇಜ್- ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್- ಘಟನೆ ಮಾಹಿತಿ ಪಡೆದ ಸೋನಿಯಾ, ರಾಹುಲ್        ಪುಟ್ಟಣ್ಣಯ್ಯ ಅಂತಿಮಯಾತ್ರೆಗೆ ಸಿದ್ದತೆ- ಮಾಜಿ ಪ್ರಧಾನಿ ಎಚ್‌ಡಿಡಿಯಿಂದ ಅಂತಿಮ ದರ್ಶನ- ರೈತ ನಾಯಕನ ಅಂತ್ಯಸಂಸ್ಕಾರಕ್ಕೆ 30 ಜಿಲ್ಲೆಗಳಿಂದ ಮಣ್ಣು       
Breaking News

ತಂತ್ರಾಂಶ ವಿಶ್ವದಲ್ಲಿ ರೋಬಾಟ್​ಗಳ ಜಗತ್ತು

Sunday, 03.09.2017, 3:00 AM       No Comments

 

| ಟಿ.ಜಿ. ಶ್ರೀನಿಧಿ

ಯಂತ್ರಮಾನವ, ಅಂದರೆ ರೋಬಾಟ್​ಗಳ ಪರಿಕಲ್ಪನೆ ಬಹಳ ರೋಚಕವಾದದ್ದು. ಸಾಮಾನ್ಯ ಜನರಿಗೆ ರೋಬಾಟ್​ಗಳ ಪರಿಚಯವಿರುವುದು ಹೆಚ್ಚಾಗಿ ಕತೆಗಳ-ಚಲನಚಿತ್ರಗಳ ಮೂಲಕವೇ ಇರಬಹುದು; ಆದರೆ ಈಚಿನ ವರ್ಷಗಳಲ್ಲಿ ನೈಜ ರೋಬಾಟ್​ಗಳು ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿವೆ. ಕಾರ್ಖಾನೆಯಲ್ಲಿ ಕೆಲಸಮಾಡುವುದರಿಂದ ಪ್ರಾರಂಭಿಸಿ ಮನೆಯ ಕಸ ಗುಡಿಸುವವರೆಗೆ ಇಂತಹ ರೋಬಾಟ್​ಗಳ ಕಾರ್ಯಕ್ಷೇತ್ರ ಬಹಳ ವಿಸ್ತಾರವಾಗಿ ವ್ಯಾಪಿಸಿಕೊಂಡಿದೆ. ಇಂತಹ ಎಲ್ಲ ರೋಬಾಟ್​ಗಳೂ ಒಂದಲ್ಲ ಒಂದು ಬಗೆಯ ಯಂತ್ರಗಳೇ. ಸಿನಿಮಾಗಳಲ್ಲಿ ಕಾಣಸಿಗುವ ಮನುಷ್ಯರೂಪದ ಯಂತ್ರವಿರಲಿ, ಅತ್ತಿತ್ತ ಓಡಾಡುತ್ತ ಮನೆಯ ಕಸಗುಡಿಸುವ ಪುಟಾಣಿ ಪೆಟ್ಟಿಗೆಯಂತ ಯಂತ್ರವೇ ಇರಲಿ ನಿರ್ದಿಷ್ಟ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುವ ಶಕ್ತಿಯಿರುವುದು ರೋಬಾಟ್​ಗಳ ವೈಶಿಷ್ಟ್ಯ ಯಂತ್ರಾಂಶದ (ಹಾರ್ಡ್​ವೇರ್) ರೂಪದಲ್ಲಿ ಇಷ್ಟೆಲ್ಲ ಕೆಲಸಮಾಡಬಲ್ಲ ರೋಬಾಟ್​ಗಳನ್ನು ತಂತ್ರಾಂಶಗಳ (ಸಾಫ್ಟ್​ವೇರ್) ರೂಪದಲ್ಲಿ ಬಳಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಭೌತಿಕ ಪ್ರಪಂಚದಲ್ಲಿರುವಂತೆ ತಂತ್ರಾಂಶಗಳ ವರ್ಚುಯಲ್ ವಿಶ್ವದಲ್ಲೂ ರೋಬಾಟ್​ಗಳಿವೆ. ಕಣ್ಣಿಗೆ ಕಾಣುವ ರೋಬಾಟ್​ಗಳು ಹಲವು ಯಂತ್ರಾಂಶಗಳ ಜೋಡಣೆಯಿಂದ ರೂಪುಗೊಂಡಿದ್ದರೆ ಜಾಲಜಗತ್ತಿನ ಈ ಅದೃಶ್ಯ ರೋಬಾಟ್​ಗಳು ಬರಿಯ ತಂತ್ರಾಂಶಗಳಷ್ಟೇ ಆಗಿರುತ್ತವೆ ಎನ್ನುವುದೊಂದೇ ವ್ಯತ್ಯಾಸ. ತಂತ್ರಾಂಶರೂಪಿ ರೋಬಾಟ್​ಗಳನ್ನು ‘ಬಾಟ್’ಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಬಾಟ್ ಎನ್ನುವುದು ‘ರೋಬಾಟ್’ ಎಂಬ ಹೆಸರಿನ ಹ್ರಸ್ವರೂಪ. ಮತ್ತೆಮತ್ತೆ ಮಾಡುವ ಯಾವುದೇ ನಿರ್ದಿಷ್ಟ ಕೆಲಸವನ್ನು ಅತ್ಯಂತ ನಿಖರವಾಗಿ, ಕ್ಷಿಪ್ರವಾಗಿ ಮಾಡಿ ಮುಗಿಸುವುದು ಬಾಟ್​ಗಳ ವೈಶಿಷ್ಟ್ಯ ಬೇರೆಬೇರೆ ತಾಣಗಳಿಂದ ಮಾಹಿತಿ ಸಂಗ್ರಹಿಸುವುದು, ಚಾಟ್ ಮೂಲಕ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು, ಟ್ಯಾಕ್ಸಿ ಬುಕಿಂಗ್ ಮಾಡುವುದು, ಉಡುಗೊರೆಗಳನ್ನು ಆರ್ಡರ್ ಮಾಡುವುದು, ಸ್ವಯಂಚಾಲಿತವಾಗಿ ಹಲವು ಬಗೆಯ ಮಾಹಿತಿಯನ್ನು ಸಂಸ್ಕರಿಸುವುದು- ಹೀಗೆ ಹಲವು ಉದ್ದೇಶಗಳಿಗಾಗಿ ಬಾಟ್​ಗಳು ಇದೀಗ ಬಳಕೆಯಾಗುತ್ತಿವೆ. ಈ ಪೈಕಿ ಚಾಟ್ ಮೂಲಕ ಬಳಕೆದಾರರೊಡನೆ ವ್ಯವಹರಿಸಬಲ್ಲ ಬಾಟ್ಗ್​ಳನ್ನು ‘ಚಾಟ್​ಬಾಟ್’ಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಅನೇಕ ವಿಧಗಳಿರುವುದು ಸಾಧ್ಯ. ಗ್ರಾಹಕನ ಪ್ರಶ್ನೆಯಲ್ಲಿರುವ ಪದಗಳನ್ನು ವಿಶ್ಲೇಷಿಸಿ ಅದಕ್ಕೆ ಹೊಂದುವಂತಹ ಉತ್ತರವನ್ನು ತಮ್ಮ ಸಂಗ್ರಹದಿಂದ ಆಯ್ದು ಕೊಡುವುದು ಈ ಪೈಕಿ ಕೆಲವು ಚಾಟ್​ಬಾಟ್​ಗಳು ಬಳಸುವ ತಂತ್ರ. ನಮ್ಮ ನಿರ್ದೇಶನಗಳಿಗೆ ಅನುಗುಣವಾಗಿ ಕೆಲಸಗಳನ್ನು ಮಾಡಿಕೊಡುವ (ಉದಾ: ಟಿಕೇಟು ಕಾಯ್ದಿರಿಸುವುದು, ಟ್ಯಾಕ್ಸಿ ಕರೆಸುವುದು ಇತ್ಯಾದಿ) ಚಾಟ್​ಬಾಟ್​ಗಳೂ ಇವೆ. ಸಂಸ್ಥೆಯ ಬಗ್ಗೆ, ಅದು ಒದಗಿಸುವ ಸೇವೆಯ ಬಗ್ಗೆ ನಾವು ಕೇಳುವ ಪ್ರಶ್ನೆಗೆ ಥಟ್ಟನೆ ಉತ್ತರಿಸುವ ಸೌಲಭ್ಯ ಹಲವು ಜಾಲತಾಣಗಳಲ್ಲಿರುತ್ತದಲ್ಲ, ಅಂತಹ ಸೌಲಭ್ಯಗಳಲ್ಲೂ ಚಾಟ್​ಬಾಟ್​ಗಳೇ ಬಳಕೆಯಾಗುತ್ತವೆ. ಅಷ್ಟೇ ಏಕೆ, ಹಿಂದಿನ ಸಂವಾದಗಳ ಅನುಭವದ ಆಧಾರದಲ್ಲಿ ತಮ್ಮ ಮುಂದಿನ ಉತ್ತರಗಳನ್ನು ಉತ್ತಮಪಡಿಸಿಕೊಳ್ಳುವ ಚಾಟ್​ಬಾಟ್​ಗಳನ್ನೂ ರೂಪಿಸಲಾಗುತ್ತಿದೆ. ಇಂತಹ ಚಾಟ್​ಬಾಟ್​ಗಳು ಮುಂದೊಮ್ಮೆ ಗ್ರಾಹಕ ಸೇವಾ ವಿಭಾಗದ ಸಿಬ್ಬಂದಿಯ ಸ್ಥಾನ ತೆಗೆದುಕೊಳ್ಳುವ ಮಟ್ಟಕ್ಕೂ ಬೆಳೆಯಬಲ್ಲವು ಎಂದು ನಿರೀಕ್ಷಿಸಲಾಗಿದೆ. ತಂತ್ರಾಂಶ ಬಳಸಿ ಮಾಡುವ ಎಲ್ಲ ಕೆಲಸಗಳಲ್ಲೂ ಬಳಕೆದಾರರೊಡನೆ ನೇರ ಸಂಭಾಷಣೆಯ ಅಗತ್ಯ ಇರುವುದಿಲ್ಲ. ಕಡತಗಳ ವಿಲೇವಾರಿ, ಮಾಹಿತಿ ಸಂಗ್ರಹಣೆ ಹಾಗೂ ಸಂಸ್ಕರಣೆ ಸೇರಿದಂತೆ ಈ ಬಗೆಯ ಹಲವು ಕೆಲಸಗಳಲ್ಲೂ ಬಾಟ್​ಗಳು ಬಳಕೆಯಾಗುತ್ತವೆ. ತಂತ್ರಜ್ಞಾನದ ಸಹಾಯದಿಂದ ಯಾವುದೇ ಪ್ರಕ್ರಿಯೆಯನ್ನು ಸ್ವಯಂಚಾಲಿತವನ್ನಾಗಿಸುವುದಕ್ಕೆ ‘ಆಟೋಮೇಶನ್’ ಎಂದು ಹೆಸರು. ಸ್ವಯಂಚಾಲನೆ ಅಥವಾ ಯಾಂತ್ರೀಕರಣ ಎನ್ನುವುದು ಈ ಹೆಸರಿನ ಅರ್ಥ. ಇದು ಮೂಲತಃ ಕಾರ್ಖಾನೆಗಳಲ್ಲಿ ರೂಪುಗೊಂಡ ಪರಿಕಲ್ಪನೆಯಾದರೂ ಈಚಿನ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಪದೇಪದೇ ಮಾಡಬೇಕಾದ ಪ್ರಕ್ರಿಯೆಗಳನ್ನು (‘ಪ್ರಾಸೆಸ್’) ಸ್ವಯಂಚಾಲಿತವಾಗಿ ನಡೆಯುವಂತೆ ಮಾಡುವುದು ಇದರ ವೈಶಿಷ್ಟ್ಯ ವರದಿ ತಯಾರಿಕೆ, ಮಾಹಿತಿ ಸಂಗ್ರಹ-ವಿತರಣೆ ಮುಂತಾದ ಅನೇಕ ಕೆಲಸಗಳು ಅತ್ಯಂತ ಕಡಿಮೆ ಮಾನವ ಹಸ್ತಕ್ಷೇಪದೊಡನೆ ನಡೆಯಲು ಸಾಧ್ಯವಾಗಿರುವುದು ಇದರಿಂದಾಗಿಯೇ. ಎಕ್ಸೆಲ್ ತಂತ್ರಾಂಶದಲ್ಲಿ ಮತ್ತೆಮತ್ತೆ ಮಾಡಬೇಕಾದ ಲೆಕ್ಕಾಚಾರಗಳನ್ನು ಫಾಮ್ಯರ್ುಲಾ ಹಾಗೂ ಮ್ಯಾಕ್ರೋಗಳ ನೆರವಿನಿಂದ ಸುಲಭಮಾಡಿಕೊಳ್ಳುತ್ತೇವಲ್ಲ, ಅದು ಆಟೋಮೇಶನ್​ನದೇ ಉದಾಹರಣೆ. ಬಾಟ್​ಗಳನ್ನು ಬಳಸುವ ಅಭ್ಯಾಸ ಇದೀಗ ‘ರೋಬಾಟಿಕ್ ಪ್ರಾಸೆಸ್ ಆಟೋಮೇಶನ್’ (ಆರ್​ಪಿಎ) ಎಂಬ ಹೆಸರಿನೊಡನೆ ಇಲ್ಲಿಯೂ ಕಾಣಿಸಿಕೊಂಡಿದೆ. ಯಾವುದೇ ಬಳಕೆದಾರ ಕಂಪ್ಯೂಟರಿನಲ್ಲಿ ನಿರ್ದಿಷ್ಟ ಕೆಲಸವನ್ನು ಪೂರೈಸಲು ಏನೆಲ್ಲ ಮಾಡುತ್ತಾರೆ ಎನ್ನುವುದನ್ನು ಗಮನಿಸಿ ಆ ಕೆಲಸವಷ್ಟನ್ನೂ ತಂತ್ರಾಂಶದಿಂದಲೇ ಮಾಡಿಸಿಕೊಳ್ಳುವುದು ಇದರ ಹೆಚ್ಚುಗಾರಿಕೆ. ಕಚೇರಿಗಳಲ್ಲಿ ಬಿಲ್ಲುಗಳನ್ನು ನಿರ್ವಹಿಸುವುದು, ಐಟಿ ಕೋರಿಕೆಗಳನ್ನು ಪೂರೈಸುವುದು, ವರದಿಗಳನ್ನು ತಯಾರಿಸಿ ಕಳಿಸಿಕೊಡುವುದು ಮುಂತಾದ ಎಲ್ಲ ಕೆಲಸಗಳನ್ನೂ ಆರ್​ಪಿಎ ವ್ಯವಸ್ಥೆಯ ಬಾಟ್​ಗಳು ಮಾನವರಿಗಿಂತ ಹೆಚ್ಚು ವೇಗವಾಗಿ, ಸಮರ್ಥವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ನಿಭಾಯಿಸಬಲ್ಲವು. ಬಹು ಬೇಗ ಜನಪ್ರಿಯವಾಗುತ್ತಿರುವ ಈ ಹೊಸ ಅಭ್ಯಾಸ ವ್ಯವಹಾರ ಪ್ರಕ್ರಿಯೆಗಳ ಹೊರಗುತ್ತಿಗೆಯಂತಹ (ಬಿಪಿಓ) ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ತರಲಿದೆ ಎಂದು ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *

Back To Top