Saturday, 21st October 2017  

Vijayavani

1. ತೀವ್ರಗೊಂಡ ಟಿಪ್ಪು ಜಯಂತಿ ಆಚರಣೆ ವಿವಾದ – ಅನಂತ ಹೆಗಡೆ ನಿಲುವಿಗೆ ಪ್ರತಾಪ್ ಸಿಂಹ ಸಹಮತ – ಇದೇ ಕೊನೆ ಆಚರಣೆ ಅಂತಾ ಕಿಡಿ 2. ಗೌರಿ ಲಂಕೇಶ್​ ಹಂತಕರ ರೇಖಾಚಿತ್ರ ವಿವಾದ – ಹಿಂದೂಗಳ ಮೇಲೆ ಎಸ್‌ಐಟಿಯಿಂದ ಷಡ್ಯಂತ್ರ – ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಆರೋಪ 3. ಬೆಂಗಳೂರಿನಲ್ಲಿ ಧನದಾಹಿ ಆಸ್ಪತ್ರೆ ಅಟ್ಟಹಾಸ – ಬಿಲ್‌ ಪಾವತಿಸದ ತಾಯಿಗೆ ಮಕ್ಕಳನ್ನ ತೋರಿಸದ ಸಿಬ್ಬಂದಿ – ಚಿಕಿತ್ಸೆಗಾಗಿ ನೊಂದ ಪೋಷಕರ ಪರದಾಟ 4. ಮೆರ್ಸಲ್ ಚಿತ್ರದ ಬೆಂಬಲಕ್ಕೆ ನಿಂತ ಕಮಲ್ – ಮೋದಿಗೆ ಪರೋಕ್ಷ ಟಾಂಗ್ ನೀಡಿದ ರಾಹುಲ್ – ವಿವಾದದ ಸುಳಿಯಲ್ಲಿ ಒದ್ದಾಡ್ತಿದೆ ತಮಿಳು ಚಿತ್ರ ಮೆರ್ಸಲ್ 5. ಹೆಣ್ಣು ಉಡಕ್ಕಾಗಿ ಗಂಡು ಉಡಗಳ ಕಾದಾಟ – ಕೆಸರಿನಲ್ಲಿ ನಡೀತು ಭಾರಿ ಕಾಳಗ – ಮಂಗಳೂರಿನಲ್ಲಿ ರೋಚಕ ಫೈಟ್​
Breaking News :

ಡ್ರ್ಯಾಗನ್ ಬೆನ್ನೇರಿ ಅಲಿಯಾ…

Monday, 20.03.2017, 10:11 AM       No Comments

ನಡೆ ಮುಂದೆ ನಡೆ ಮುಂದೆ… ನುಗ್ಗಿ ನಡೆ ಮುಂದೆ… ಬಾಲಿವುಡ್​ನಲ್ಲೀಗ ಅಲಿಯಾ ಭಟ್ ಜಪಿಸುತ್ತಿರುವ ಮಂತ್ರವಿದು! ‘ಬದ್ರಿನಾಥ್ ಕಿ ದುಲ್ಹನಿಯಾ’ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ಈ ಬೆಡಗಿ, ತಮ್ಮ ಮುಂದಿನ ಚಿತ್ರ ‘ಡ್ರ್ಯಾಗನ್’ ಬಗ್ಗೆ ಈಗಲೇ ಹೇಳಿಕೊಳ್ಳಲು ಆರಂಭಿಸಿದ್ದಾರೆ. ಕಬ್ಬಿಣ ಬಿಸಿ ಇದ್ದಾಗಲೇ ಅದಕ್ಕೆ ಪೆಟ್ಟು ನೀಡಿ ಬೇಕಾದ ಆಕಾರಕ್ಕೆ ತಿರುಗಿಸಬೇಕು- ಎಂಬುದನ್ನು ಚೆನ್ನಾಗಿ ಅರಿತಿರುವ ಅಲಿಯಾ, ‘ಬದ್ರಿನಾಥ್..’ ಮೆಚ್ಚಿರುವ ಪ್ರೇಕ್ಷಕರ ಮನಸ್ಸಿನಲ್ಲಿ ‘ಡ್ರ್ಯಾಗನ್’ ಬಗ್ಗೆಯೂ ಕೌತುಕದ ಬೀಜ ಬಿತ್ತಿದ್ದಾರೆ. ‘ಡ್ರ್ಯಾಗನ್’ ಸೂಪರ್ ಹೀರೋ ಸಿನಿಮಾಗಿಂತ ಭಿನ್ನವಾಗಿರಲಿದೆ ಎಂಬುದು ಅಲಿಯಾ ನುಡಿ. ಭಿನ್ನ ಅಂದರೆೆ? ‘ನನ್ನ ಸುತ್ತಮುತ್ತ ಆಕ್ಷನ್ ನಡೆಯುತ್ತದೆ. ಆದರೆ ನಾನು ಯಾರಿಗೂ ಹೊಡೆಯುವುದಿಲ್ಲ’ ಎಂದು ನಗೆಚಟಾಕಿ ಹಾರಿಸುತ್ತಾರೆ. ವೈಜ್ಞಾನಿಕ ಕಥೆ ಇದಾಗಿರುವುದರಿಂದ ಚಿತ್ರಕ್ಕೆ ವಿಭಿನ್ನ ಬ್ಯಾಕ್​ಡ್ರಾಪ್ ಸಿಕ್ಕಿದೆ, ನೋಡುಗರಿಗೂ ಅದು ಥ್ರಿಲ್ ಮೂಡಿಸುತ್ತದಂತೆ. ರಣಬೀರ್ ಕಪೂರ್ ನಾಯಕತ್ವದ ಈ ಸಿನಿಮಾದಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ಸಹ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರಂತೆ.

– ಏಜೆನ್ಸೀಸ್

Leave a Reply

Your email address will not be published. Required fields are marked *

Back To Top