Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಡಿಸೆಂಬರ್​ಗೆ ಸೋಲಾರ್ ಪಾರ್ಕ್ ಲೋಕಾರ್ಪಣೆ

Friday, 29.09.2017, 3:00 AM       No Comments

ತುಮಕೂರು: ಪಾವಗಡ ತಾಲೂಕು ತಿರುಮಣಿಯಲ್ಲಿ ನಿರ್ವಣವಾಗುತ್ತಿರುವ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೋಲಾರ್ ಪಾರ್ಕ್ ವಿಶ್ವದಲ್ಲೇ ಅತಿ ದೊಡ್ಡ ಯೋಜನೆಯಾಗಿದ್ದು, ಡಿಸೆಂಬರ್ ಅಂತ್ಯಕ್ಕೆ 600 ಮೆಗಾವಾಟ್ ವಿದ್ಯುತ್ ಗ್ರಿಡ್​ಗೆ ಲಭ್ಯವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸೋಲಾರ್ ಪಾರ್ಕ್ ಕಾಮಗಾರಿಯನ್ನು ಗುರುವಾರ ಹೆಲಿಕಾಪ್ಟರ್ ಮೂಲಕ ವೀಕ್ಷಿಸಿದ ಬಳಿಕ ಮಾತನಾಡಿ, 15 ಸಾವಿರ ಕೋಟಿ ರೂ. ವೆಚ್ಚ ಅಂದಾಜಿನ ಈ ಯೋಜನೆಯ ಮೂಲ ಸೌಕರ್ಯ ಅಭಿವೃದ್ಧಿಗೆ 825 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಪವರ್ ಗ್ರಿಡ್​ನಿಂದ 1600 ಕೋಟಿ ರೂ. ಬಂಡವಾಳ ಹೂಡಲಾಗಿದೆ. 2018ರ ಸೆಪ್ಟೆಂಬರ್ ಒಳಗೆ ಸೋಲಾರ್ ಪಾರ್ಕ್ ಕಾಮಗಾರಿ ಮುಗಿಯಲಿದೆ ಎಂದರು. ಸಚಿವ ಶಿವಕುಮಾರ್ ಮಾತನಾಡಿ, ಸೋಲಾರ್ ಪಾರ್ಕ್ ಡಿಸೆಂಬರ್​ಗೆ ಲೋಕಾರ್ಪಣೆಯಾಗಲಿದ್ದು, 15 ಸಾವಿರ ಕೋಟಿ ರೂ. ಬಂಡವಾಳ ಹರಿದುಬರಲಿದೆ. ಯೋಜನೆ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉದ್ಘಾಟನೆಗೆ ಕಾತರದಿಂದಿದ್ದಾರೆ ಎಂದರು.

 

Leave a Reply

Your email address will not be published. Required fields are marked *

Back To Top