Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಡಬ್ಬಲ್ ಡೆಕ್ಕರ್​ಗೆ ಕುಬ್ಜ ಡ್ರೖೆವರ್!

Monday, 13.11.2017, 3:01 AM       No Comments

ತ ಮಿನಿ ಬಸ್ ಡ್ರೖೆವರ್! ಹಾಗಂತ ಮಿನಿ ಬಸ್​ಗಳನ್ನಷ್ಟೇ ಡ್ರೖೆವ್ ಮಾಡುವ ಚಾಲಕ ಅಂದ್ಕೋಬೇಡಿ. ಈತನಿಗೆ ಈ ಹೆಸರು ಅನ್ವರ್ಥವಾಗುವುದು ಈತ ಚಲಾಯಿಸುವ ವಾಹನದಿಂದ ಅಲ್ಲ; ಬದಲಿಗೆ ಈತನ ದೇಹದಾರ್ಢ್ಯದಿಂದ. ಅಂದರೆ ಈತ ಚಲಾಯಿಸುವ ವಾಹನಕ್ಕೂ, ಈತನಿಗೂ ಅಜಗಜಾಂತರ ಎಂದು ಹೇಳಬಹುದು. ಏಕೆಂದರೆ ಫ್ರಾಂಕ್ ಹಚೆಂ ಎಂಬ 55 ವರ್ಷದ 4 ಅಡಿ 6 ಅಂಗುಲದ ವಾಮನಮೂರ್ತಿ ಚಲಾಯಿಸುವುದು ಡಬಲ್ ಡೆಕ್ಕರ್ ಬಸ್​ಗಳನ್ನು!

ಹಾಗಾಗಿ ಜಗತ್ತು ಈತನನ್ನು ದೊಡ್ಡ ವಾಹನ ಚಲಾಯಿಸುವ ಅತ್ಯಂತ ಕುಬ್ಜ ವ್ಯಕ್ತಿ ಎಂದು ಗುರುತಿಸಿದೆ. ಈತನೀಗ ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಗೊಳ್ಳುವ ತವಕದಲ್ಲಿದ್ದಾನೆ. ಬ್ರಿಟನ್​ನ ಸಸೆಕ್ಸ್ ಭಾಗದಲ್ಲಿರುವ ಚಿಚೆಸ್ಟರ್ ಬಸ್ ನಿಲ್ದಾಣವನ್ನು ಫ್ರಾಂಕ್ ತನ್ನ ಕಾರ್ಯಸ್ಥಾನವನ್ನಾಗಿಸಿಕೊಂಡಿದ್ದಾನೆ. ಮೂಲತಃ ಈತ ಹ್ಯಾಂಪ್​ಷೈರ್ ನಿವಾಸಿ. 8 ತಿಂಗಳ ಹಿಂದೆ ಈತ ಡಬಲ್ ಡಕ್ಕರ್ ಬಸ್ಸೇರಿದಾಗ ಸಹಜವಾಗಿಯೇ ತನ್ನ ದೇಹಾಕೃತಿಯ ಬಗ್ಗೆ ಶಂಕೆ ಹೊಂದಿದ್ದ. ಕಾಲಿಗೆ ಪೆಡಲ್ ಸಿಗದೇ ಎಲ್ಲಿ ಏನು ಎಡವಟ್ಟಾಗುವುದೋ ಎಂಬ ಆತಂಕದಲ್ಲಿದ್ದ. ಆದರೆ, ಕೆಲಸಕ್ಕೆಂದು ಸಂದರ್ಶಿಸಿದ ಅಧಿಕಾರಿ ಮೊದಲು ಫ್ರಾಂಕ್​ನನ್ನು ಒಬ್ಬ ಮನುಷ್ಯ ಎಂದು ಗುರುತಿಸುತ್ತಾನೆ. ಕುಳ್ಳ ರಾಜ ಎಂದು ಮೂದಲಿಸಿ, ಹೊರಗಟ್ಟದೆ ಸ್ವತಃ ಫ್ರಾಂಕ್ ಸಂಶಯಪಟ್ಟರೂ ಮೊದಲು ನೀನು ಪರೀಕ್ಷೆಯಲ್ಲಿ ಪಾಸಾಗು. ನಿನ್ನ ಕಾಲುಗಳು ಮತ್ತು ನಮ್ಮ ಪೆಡಲುಗಳ ಬಗ್ಗೆ ಆಮೇಲೆ ಯೋಚಿಸೋಣ ಎಂದು ಫ್ರಾಂಕ್​ಗೆ ಫ್ರ್ಯಾಂಕಾಗಿ ಧೈರ್ಯ ತುಂಬಿದ್ದ.

ಇಷ್ಟು ಸಾಕಿತ್ತು ವಾಮನಮೂರ್ತಿ ಫ್ರಾಂಕ್​ಗೆ. ಒಂದು ಕೈ ನೋಡೇ ಬಿಡೋಣ ಎಂದು ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡತೊಡಗಿದ. ಹಲವು ತಿಂಗಳ ಬಳಿಕ ಫ್ರಾಂಕ್ ತಾನು ಚಲಾಯಿಸುವ ಡಬಲ್ ಡಕ್ಕರ್ ಬಸ್ ನಿಲ್ಲಿಸಿ, ಹಿಂದಿರುಗಿ ನೋಡಿದಾಗ ಇದನ್ನೆಲ್ಲ ಜ್ಞಾಪಿಸಿಕೊಂಡಿದ್ದಾನೆ. ಇಲ್ಲಿನ ನೀತಿ ಪಾಠ ಏನೆಂದರೆ, ಮಾಡುವ ಕೆಲಸದಲ್ಲಿ ಶ್ರದ್ಧೆಯಿದ್ದರೆ ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ, ಅಲ್ವಾ!?

ಮರೆತ ಮಾತು: ಫ್ರಾಂಕ್ ಮೂಲತಃ ಇರಾಕಿನವನಂತೆ. 1982ರಲ್ಲಿ ತನ್ನ 20ನೇ ವಯಸಿನಲ್ಲಿ ಯುಕೆಗೆ ಬಂದು ವಾಸಿಸತೊಡಗಿದ. ಆಕ್ಸ್​ಫರ್ಡ್​ನಲ್ಲಿ ಒಂದಷ್ಟು ವ್ಯಾಸಂಗ ಮಾಡಿದ್ದಾನೆ. 12 ವರ್ಷಗಳ ಹಿಂದೆ ಮದುವೆಯಾದ ಫ್ರಾಂಕ್​ಗೆ ಇಬ್ಬರು ಪುತ್ರಿಯರಿದ್ದಾರೆ. ಮೊದಲ ಮಗಳು ಬೆಳೆಯತೊಡಗಿದಂತೆ ಸದ್ಯ ಮಗು ತನ್ನಂತೆ ಇಲ್ಲ ಅಂತ ಸಂತೋಷಪಟ್ಟಿದ್ದಾನೆ. ಏಕೆಂದರೆ, ಮೊದಲ ಮಗಳು ಈತನಿಗಿಂತ ಎತ್ತರವಾಗಿ ಬೆಳೆಯತೊಡಗಿದ್ದಾಳೆ! ಆದರೆ ದ್ವಿತೀಯ ಪುತ್ರಿ ನೋಡಿ ಫ್ರಾಂಕ್ ತೀರಾ ನೊಂದುಕೊಂಡಿದ್ದಾನೆ. ಕಾರಣ, ಆ ಮಗಳು ಈತನ ವಂಶವಾಹಿಯನ್ನೇ ಬಳುವಳಿಯಾಗಿ ಪಡೆದಿದ್ದಾಳೆ. ಅಪ್ಪನಂತೆ ಕುಳ್ಳಿ. ಆದರೆ ಜೀವನೋತ್ಸಾಹ ತುಂಬಲು ಅಪ್ಪನ ಜೀವನಗಾಥೆ ಎದುರಿಗೇ ಇದೆ.

Leave a Reply

Your email address will not be published. Required fields are marked *

Back To Top