Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :

ಟ್ವಿಟರ್​ನಲ್ಲಿ ದಾಖಲೆ ಸೃಷ್ಟಿಸಿದ ಕೇಟಿ

Monday, 19.06.2017, 3:00 AM       No Comments

ಸ್ಥಳೀಯ ಚರ್ಚ್​ಗಳಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದ ಬಾಲಕಿ ಇಂದು ಪಾಪ್ ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದ್ದು, ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಶತಕ ಬಾರಿಸಿದ್ದಾರೆ. 32ರ ಹರೆಯದ ಕೇಟಿ ಪೆರಿ ಇದೀಗ 100 ಮಿಲಿಯನ್ (10 ಕೋಟಿ) ಹಿಂಬಾಲಕರನ್ನು ಸಂಪಾದಿಸಿದ್ದಾರೆ. ಈ ಮೂಲಕ ಟ್ವಿಟರ್​ನಲ್ಲಿ ಅತಿಹೆಚ್ಚು ಹಿಂಬಾಲಕರನ್ನು ಹೊಂದಿದ ಕೀರ್ತಿಗೆ ಭಾಜನರಾಗಿದ್ದಾರೆ.

ಸದ್ಯ ‘ವಿಟ್ನೆಸ್’ ಆಲ್ಬಮ್ ಯಶಸ್ಸಿನಲ್ಲಿರುವ ಪೆರಿ 2009ರಲ್ಲಿ ಟ್ವಿಟರ್ ಪ್ರವೇಶಿಸಿದ್ದರು. ಕೆಲವೇ ವರ್ಷದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಸಂಪಾದಿಸುವ ಮೂಲಕ ಅಮೆರಿಕದ ಪಾಪ್ ಗಾಯಕಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಪೆರಿ ಬಹುಮುಖ ಪ್ರತಿಭೆಯಾಗಿದ್ದು, ಗಾಯನದ ಜತೆಗೆ ನಟನೆ ಮತ್ತು ಗೀತರಚನೆಯಲ್ಲೂ ಯಶಸ್ಸು ಸಾಧಿಸಿದ್ದಾರೆ. ಕಳೆದ ಏಪ್ರಿಲ್​ನಲ್ಲಿ ಪೆರಿಯ ‘ಬೋನ್ ಅಪೆಟಿಟ್’ ಪಾಪ್ ಗೀತೆ ಬಿಡುಗಡೆಯಾಗಿದ್ದು, ಕೇವಲ 24 ಗಂಟೆಯಲ್ಲಿ ಯೂ ಟ್ಯೂಬ್​ನಲ್ಲಿ 16.1ಮಿಲಿಯನ್ ಜನರು ವೀಕ್ಷಿಸಿದ್ದರು. ಇನ್ನು ಟ್ವಿಟರ್​ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನ ಕೂಡ ಪಾಪ್ ಗಾಯಕನ ಪಾಲಾಗಿದೆ ಎನ್ನುವುದು ವಿಶೇಷ. ಕಿರಿಯ ವಯಸ್ಸಿನಲ್ಲಿಯೇ ಪಾಪ್ ಲೋಕದಲ್ಲಿ ಹೆಸರು ಮಾಡಿದ ಜಸ್ಟಿನ್ ಬೀಬರ್ 96.7ಮಿಲಿಯನ್ ಹಿಂಬಾಲಕರನ್ನು ಹೊಂದುವ ಮೂಲಕ ಪೆರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ.

ಉಳಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 90.8 ಮಿಲಿಯನ್, ಅಮೆರಿಕದ ಗಾಯಕಿ ಹಾಗೂ ಗೀತರಚನಗಾರ್ತಿ ಟೇಲರ್ ಸ್ವಿಫ್ಟ್ 85.1ಮಿಲಿಯನ್, ಬಾರ್ಬಡಿಯನ್ಸ್ ಗಾಯಕಿ ರಿಹಾನಾ 74.1ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

– ಏಜೆನ್ಸೀಸ್

 

 

Leave a Reply

Your email address will not be published. Required fields are marked *

Back To Top