Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಟೋಕಿಯೊ ಒಲಿಂಪಿಕ್ಸ್​ಗೆ ಈಜು ಹಾದಿ

Tuesday, 06.06.2017, 3:00 AM       No Comments

| ಗಣೇಶ್ ಉಕ್ಕಿನಡ್ಕ ಬೆಂಗಳೂರು

ಬಾಲ್ಯದಲ್ಲಿ ಹವ್ಯಾಸಕ್ಕೆಂದು ಕಲಿತ ಈಜು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದಿತ್ತಿದೆ. ಟೋಕಿಯೋ ಒಲಿಂಪಿಕ್ ಕನಸಿಗೆ ನೀರೆದಿದೆ. ಬೆಂಗಳೂರಿನ ಯುವ ಪ್ರತಿಭಾವಂತ ಸ್ವಿಮ್ಮರ್ ರಾಹುಲ್ ಎಂ. ಇದೀಗ ಮುಂಬರುವ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ಕನಸಿನಲ್ಲಿದ್ದಾರೆ. ಇತ್ತೀಚೆಗೆ ನಗರದಲ್ಲಿ ನಡೆದ ರಾಜ್ಯ ಸಬ್ ಜೂನಿಯರ್-ಜೂನಿಯರ್ ಈಜು ಕೂಟದಲ್ಲಿ 8 ಸ್ವರ್ಣ ಪದಕ ಗೆದ್ದಿರುವ ರಾಹುಲ್ ಒಲಿಂಪಿಕ್ಸ್ ಅರ್ಹತೆಗೆ ಈಗಿನಿಂದಲೇ ಕಠಿಣ ಸಿದ್ಧತೆಯೊಂದಿಗೆ ಸಜ್ಜಾಗುತ್ತಿದ್ದಾರೆ. ಸ್ವ ಆಸಕ್ತಿಯಿಂದ 10ನೇ ವಯಸ್ಸಿಗೆ ಈಜು ಆರಂಭಿಸಿದ 16 ವರ್ಷದ ರಾಹುಲ್​ಗೆ ವಿಶ್ವ ಶ್ರೇಷ್ಠ ಸ್ವಿಮ್ಮರ್ ಮೈಕೆಲ್ ಫೆಲ್ಪ್ಸ್ ಮಾದರಿ ಹಾಗೂ ಸ್ಪೂರ್ತಿ. ‘24 ಒಲಿಂಪಿಕ್ಸ್ ಪದಕ ವಿಜೇತ ನನಗೆ ಸದಾ ಸ್ಪೂರ್ತಿ. 15ನೇ ವಯಸ್ಸಿಗೆ ಅವರು ಒಲಿಂಪಿಕ್ಸ್ ಪದಕ ಗೆದ್ದ ಸಾಧಕ. ಮುಂಬರುವ 2020ರ ಟೋಕಿಯೊ ಒಲಿಂಪಿಕ್ಸ್​ಗಾಗಿ ಈಗಿನಿಂದಲೆ ಕಠಿಣ ಶ್ರಮಪಡುತ್ತಿದ್ದೇನೆ. ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿ ಪದಕ ಗೆಲ್ಲುವುದು ನನ್ನ ಜೀವನದ ದೊಡ್ಡ ಕನಸು. ಬಸವನಗುಡಿ ಈಜು ಕೇಂದ್ರದಲ್ಲಿ (ಬಿಎಸಿ) 5 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದೇನೆ’ ಎನ್ನುವ ರಾಹುಲ್ ವಿವಿ ಪುರಂನ ಜೈನ್ ಕಾಲೇಜಿನಲ್ಲಿ 2ನೇ ಪಿಯುಸಿ ವಿದ್ಯಾರ್ಥಿ.

ರಾಹುಲ್​ಗೆ ಅಪ್ಪನೇ ಮೊದಲ ಗುರು

ಕಬಡ್ಡಿ ಆಟಗಾರನಾಗಿರುವ ತಂದೆ ನಾಗರಾಜ್ ಮೋಹನ್ ಅವರೇ ಮಗನ ಮೊದಲ ಈಜು ಗುರು. ‘ಮನೆ ಹತ್ತಿರದಲ್ಲಿ ಸಣ್ಣ ಈಜುಕೊಳವಿತ್ತು. ಸಂಜೆ ಟೈಂಪಾಸ್​ಗೆಂದು ಗೆಳೆಯರೊಂದಿಗೆ ಅಲ್ಲಿಗೆ ಈಜಲು ಹೋಗುತ್ತಿದ್ದೆ. 10ನೇ ವಯಸ್ಸಿಗೆ ಸ್ವಿಮ್ಮಿಂಗ್ ಆರಂಭಿಸಿದೆ. ಅಪ್ಪನೇ ನನ್ನ ಮೊದಲ ಕೋಚ್. ಪ್ರತಿದಿನ ಬೆಳಗ್ಗೆ-ಸಂಜೆ ಒಟ್ಟು 6 ಗಂಟೆ ಅಭ್ಯಾಸ ಮಾಡುತ್ತೇನೆ. ಜಿಮ್ ಕೂಡ ಅಗತ್ಯ ಎನ್ನುವುದು ರಾಹುಲ್ ಅಭಿಪ್ರಾಯ.

ಸ್ಯಾಕ್ ಕೂಟದಲ್ಲಿ ಗಮನಾರ್ಹ ನಿರ್ವಹಣೆ

ರಾಷ್ಟ್ರೀಯ ಕೋಚ್ ಪ್ರದೀಪ್ ಕುಮಾರ್ ಮಾರ್ಗದರ್ಶನದಲ್ಲಿ ಪಳಗಿರುವ ರಾಹುಲ್ ಈಗ ಬಿಎಸಿ ಕೋಚ್ ಪದ್ಮನಾಭನ್​ರಿಂದ ತರಬೇತಿ ಪಡೆಯುತ್ತಿದ್ದಾರೆ. ಕಳೆದ ವರ್ಷ ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯಾ ಈಜು ಚಾಂಪಿಯನ್​ಷಿಪ್​ನಲ್ಲಿ (ಸ್ಯಾಕ್) ರಾಹುಲ್ 800 ಮೀಟರ್ ಫ್ರೀಸ್ಟೈಲ್​ನಲ್ಲಿ ಚಿನ್ನ, 4/100 ಫ್ರೀಸ್ಟೈಲ್ ಹಾಗೂ 4/200 ಫ್ರೀಸ್ಟೈಲ್ ರಿಲೇಯಲ್ಲಿ ಬೆಳ್ಳಿ ಗೆದ್ದಿದ್ದರು. 400 ಮೀ. ಫ್ರೀ ಸ್ಟೈಲ್​ನಲ್ಲಿ ಕಂಚು, 200 ಮೀ. ಬಟರ್​ಫ್ಲೈನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕಳೆದ ವಾರ ನಡೆದ ರಾಜ್ಯ ಸಬ್ ಜೂನಿಯರ್-ಜೂನಿಯರ್ ಈಜು ಕೂಟದಲ್ಲಿ ಸ್ಪರ್ಧಿಸಿದ 8 ವಿಭಾಗದಲ್ಲೂ ಚಿನ್ನ ಗೆದ್ದಿದ್ದಾರೆ.

ಮಗ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕೆ ನ್ನುವುದು ನನ್ನ ಕನಸು. ಇದಕ್ಕಾಗಿ ಆತನ ಆಸಕ್ತಿಯ ಈಜಿಗೆ ಬೆಂಬಲ ನೀಡುತ್ತಿದ್ದೇನೆ.

| ನಾಗರಾಜ್ ಮೋಹನ್ ರಾಹುಲ್ ತಂದೆ

 

Leave a Reply

Your email address will not be published. Required fields are marked *

Back To Top