Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಟೈರುಗಳು ಹತೋಟಿ ತಪ್ಪಿದಾಗ

Wednesday, 11.07.2018, 3:02 AM       No Comments

‘ಅದೃಷ್ಟ ನೆಟ್ಟಗಿತ್ತು ಅಂದ್ರೆ ಸಾವೂ ಹತ್ತಿರ ಸುಳಿಯೋಲ್ಲ, ಖರಾಬಾಗಿತ್ತು ಅಂದ್ರೆ ಹುಲ್ಲುಗರಿಯೇ ಒನಕೆಯಾಗಿ ಅಪ್ಪಳಿಸುತ್ತೆ’ ಎಂಬ ಮಾತನ್ನು ನೀವು ಕೇಳಿರಬಹುದು. ಇದಕ್ಕೆ ಪುಷ್ಟಿನೀಡೋ ಘಟನೆಯೊಂದು ಚೀನಾದಲ್ಲಿ ಘಟಿಸಿದ್ದು ಅದರ ವಿಡಿಯೋ ಫೇಸ್​ಬುಕ್​ನಲ್ಲಿ ರಾರಾಜಿಸುತ್ತಿದೆ.

ಆ ದೃಶ್ಯಾವಳಿ ಹೀಗೆ ಸಾಗುತ್ತದೆ- ವ್ಯಕ್ತಿಯೊಬ್ಬ ರಸ್ತೆಬದಿಯಲ್ಲಿ ನಿಲ್ಲಿಸಿರುವ ತನ್ನ ಕಾರಿನತ್ತ ಸಾಗಿ ಒಳಗೆ ಕೂರುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ಅದರ ಪಕ್ಕದಲ್ಲೇ ಟ್ರಕ್ ಒಂದು ವೇಗವಾಗಿ ಹಾದುಹೋಗುವುದು ಕಾಣುತ್ತದೆ. ನೋಡುನೋಡುತ್ತಿದ್ದಂತೆಯೇ ಎರಡು ಟೈರುಗಳು ಹತೋಟಿತಪ್ಪಿ ರಸ್ತೆಯಲ್ಲಿ ವೇಗವಾಗಿ ಉರುಳುತ್ತಿರುವುದು ಕಾಣಬರುತ್ತದೆ. ಆ ಪೈಕಿ ಮೊದಲ ಟೈರು ಕಾರಿನ ಮುಂಭಾಗದ ಮೂಲೆಗೆ ಅಪ್ಪಳಿಸುತ್ತದೆ ಹಾಗೂ ಹೀಗೆ ಡಿಕ್ಕಿಯಾಗುತ್ತಿದ್ದಂತೆ ತಾನಾಗಿಯೇ ಗಾಳಿ ತುಂಬಿಕೊಂಡು ಪ್ರಯಾಣಿಕರನ್ನು ರಕ್ಷಿಸುವಂತೆ ಅಳವಡಿಸಲಾಗಿರುವ ಚೀಲ (ಏರ್​ಬ್ಯಾಗ್) ಸಕ್ರಿಯಗೊಳ್ಳುತ್ತದೆ. ಆದರೆ, ಬಾನೆಟ್​ಗೆ ತೀವ್ರಹಾನಿಯಾಗುತ್ತದೆ. ಮತ್ತೊಂದು ಟೈರು ಹೀಗೇ ಉರುಳಿಕೊಂಡು ರಸ್ತೆಉಬ್ಬಿನ ಮೇಲೆ ಸಾಗಿ ತರುವಾಯ ಕಾರಿನ ಚಾವಣಿಗೆ ಅಪ್ಪಳಿಸಿ ವಿಂಡ್​ಷೀಲ್ಡ್ ಹಾಳುಗೆಡವುತ್ತದೆ. ಇದೆಲ್ಲ ಆದ ನಂತರ ಚಾಲಕ ಕಾರಿನಿಂದಾಚೆ ಇಳಿಯುವುದು ಕಾಣುತ್ತದೆ….

ಈ ದೃಶ್ಯಾವಳಿಯನ್ನು ವೀಕ್ಷಿಸಿದವರು ಮಾಡಿರುವ ಕಾಮೆಂಟುಗಳೂ ಮಜವಾಗಿವೆ. ಅವುಗಳ ಪೈಕಿ ಚಾಲಕನಿಗೆ ನೀಡಿರುವ ‘ಸಲಹೆ ರೂಪದ’ ಕಾಮೆಂಟು ಹೀಗಿದೆ- ‘ಅಯ್ಯಾ, ಒಮ್ಮೆ ದೀರ್ಘವಾಗಿ ಉಸಿರೆಳೆದುಕೋ. ಆ ಎರಡೂ ಟೈರುಗಳನ್ನು ಲಕ್ಷಣವಾಗಿ ಎತ್ತಿಕೋ ಹಾಗೂ ಸಿಕ್ಕಿದವರಿಗೆ ಮಾರಾಟ ಮಾಡು; ನಿನ್ನ ಕಾರಿನ ರಿಪೇರಿ ಖರ್ಚಾದರೂ ಹುಟ್ಟಲಿ….!’

Leave a Reply

Your email address will not be published. Required fields are marked *

Back To Top